Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಧಾನಿ ಮೋದಿ ‘ಇಂಧನ ಉಳಿತಾಯ’ ಕರೆಗೆ ರಾಜ್ಯಗಳ ಸ್ಪಂದನೆ: ಸಚಿವರ ಬೆಂಗಾವಲು ಪಡೆ, ವಿದೇಶಿ ಪ್ರವಾಸಕ್ಕೆ ಬ್ರೇಕ್!

ಇರಾನ್ ಜೊತೆ ಪಾಕಿಸ್ತಾನ-ಇರಾಕ್ ‘ಇಂಧನ ಒಪ್ಪಂದ’: ಹಾರ್ಮುಜ್ ಜಲಸಂಧಿಯಲ್ಲಿ ಇನ್ನು ‘ಡ್ರ್ಯಾಗನ್’ ಹದ್ದಿನ ಕಣ್ಣು; ತೈಲ ಪೂರೈಕೆಗೆ ಇರಾನ್ ಸಮ್ಮತಿ!

ವಂದೇ ಭಾರತ್ ರೈಲಿನಲ್ಲಿ ‘ಟಿಕೆಟ್ ಡೀಲ್’: 750 ರೂ. ಟಿಕೇಟ್ 380ಕ್ಕೆ ನೀಡಲು ಮುಂದಾಗಿದ್ದ `TTE’ ಸಸ್ಪೆಂಡ್ | WATCH VIDEO

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ ನಿಧನ | Actor Dilip Raj passes away
KARNATAKA

BREAKING : ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ ನಿಧನ | Actor Dilip Raj passes away

By kannadanewsnow57

ಬೆಂಗಳೂರು : ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿಯ ದಿಲೀಪ್ ರಾಜ್ ನಿಧನರಾಗಿದ್ದಾರೆ.

ದಿಲೀಪ್ ರಾಜ್ ಅವರು ಕೇವಲ ನಟರಾಗಿ ಮಾತ್ರವಲ್ಲದೆ, ಕಂಠದಾನ ಕಲಾವಿದರಾಗಿ ಮತ್ತು ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. 2007ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ನೆಗೆಟಿವ್ ಶೇಡ್ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದರು. ನಂತರ ‘ಯು ಟರ್ನ್’, ‘ಲವ್ ಗುರು’, ‘ಗಾನಾ ಬಜಾನಾ’, ಮತ್ತು ‘ಆರ್ಕೆಸ್ಟ್ರಾ ಮೈಸೂರು’ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ್ದರು.

ಕಿರುತೆರೆ ಪಯಣ: ‘ಜನನಿ’, ‘ರಂಗೋಲಿ’, ‘ರಥಸಪ್ತಮಿ’ಯಂತಹ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದ ಅವರು, ಇತ್ತೀಚೆಗೆ ಜೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ‘ಎ.ಜೆ’ (ಅಭಿರಾಮ್ ಜಯಶಂಕರ್) ಪಾತ್ರದ ಮೂಲಕ ಮನೆಮಾತಾಗಿದ್ದರು.

ನಿರ್ಮಾಣ ಮತ್ತು ಡಬ್ಬಿಂಗ್: ಅವರು ‘ಪಾರು’ ಮತ್ತು ‘ವಿದ್ಯಾ ವಿನಾಯಕ’ ಧಾರಾವಾಹಿಗಳನ್ನು ನಿರ್ಮಿಸಿದ್ದರು. ಅಲ್ಲದೆ, ‘ಆ ದಿನಗಳು’ ಚಿತ್ರದ ನಾಯಕ ಚೇತನ್ ಅವರಿಗೆ ಧ್ವನಿ ನೀಡುವ ಮೂಲಕ ಡಬ್ಬಿಂಗ್ ಕಲಾವಿದರಾಗಿಯೂ ಯಶಸ್ವಿಯಾಗಿದ್ದರು.

ವೈಯಕ್ತಿಕ ಜೀವನ
ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಪತ್ನಿ ಶ್ರೀವಿದ್ಯಾ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದ ಇವರು ‘ಟ್ರೆಡ್ಮಿಲ್’ ನಂತಹ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ಸಂತಾಪ: ದಿಲೀಪ್ ರಾಜ್ ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಮತ್ತು ಕಿರುತೆರೆಯ ಕಲಾವಿದರು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ‘ಎಜೆ’ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

BREAKING : Sandalwood actor Dilip Raj dies of heart attack | Actor Dilip Raj passes away
Share. Facebook Twitter LinkedIn WhatsApp Email

Related Posts

BREAKING : ಸ್ಯಾಂಡಲ್ ವುಡ್ ನಟ `ದಿಲೀಪ್ ರಾಜ್’ ಇನ್ನಿಲ್ಲ | Actor Dilip Raj passes away

1 Min Read

ALERT : ಅತಿಯಾಗಿ `ಕೋಲ್ಡ್‌ ಡ್ರಿಂಕ್ಸ್‌’ ಕುಡಿಯುವವರೇ ಎಚ್ಚರ : ನಿಮ್ಮ ಜೀರ್ಣಕ್ರಿಯೆಗೆ ಕಾದಿದೆ ಸಂಕಷ್ಟ | Cold drinks

1 Min Read

ALERT : ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ 5 ಕೆಟ್ಟ ಅಭ್ಯಾಸಗಳಿವು: ಇಂದೇ ಬಿಟ್ಟುಬಿಡಿ | 5 Bad Habits

2 Mins Read
Recent News

ಪ್ರಧಾನಿ ಮೋದಿ ‘ಇಂಧನ ಉಳಿತಾಯ’ ಕರೆಗೆ ರಾಜ್ಯಗಳ ಸ್ಪಂದನೆ: ಸಚಿವರ ಬೆಂಗಾವಲು ಪಡೆ, ವಿದೇಶಿ ಪ್ರವಾಸಕ್ಕೆ ಬ್ರೇಕ್!

ಇರಾನ್ ಜೊತೆ ಪಾಕಿಸ್ತಾನ-ಇರಾಕ್ ‘ಇಂಧನ ಒಪ್ಪಂದ’: ಹಾರ್ಮುಜ್ ಜಲಸಂಧಿಯಲ್ಲಿ ಇನ್ನು ‘ಡ್ರ್ಯಾಗನ್’ ಹದ್ದಿನ ಕಣ್ಣು; ತೈಲ ಪೂರೈಕೆಗೆ ಇರಾನ್ ಸಮ್ಮತಿ!

ವಂದೇ ಭಾರತ್ ರೈಲಿನಲ್ಲಿ ‘ಟಿಕೆಟ್ ಡೀಲ್’: 750 ರೂ. ಟಿಕೇಟ್ 380ಕ್ಕೆ ನೀಡಲು ಮುಂದಾಗಿದ್ದ `TTE’ ಸಸ್ಪೆಂಡ್ | WATCH VIDEO

BREAKING : ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ ನಿಧನ | Actor Dilip Raj passes away

State News
KARNATAKA

BREAKING : ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ ನಿಧನ | Actor Dilip Raj passes away

By kannadanewsnow57 KARNATAKA 1 Min Read

ಬೆಂಗಳೂರು : ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹಿಟ್ಲರ್ ಕಲ್ಯಾಣ ಸೀರಿಯಲ್ ಖ್ಯಾತಿಯ…

BREAKING : ಸ್ಯಾಂಡಲ್ ವುಡ್ ನಟ `ದಿಲೀಪ್ ರಾಜ್’ ಇನ್ನಿಲ್ಲ | Actor Dilip Raj passes away

ALERT : ಅತಿಯಾಗಿ `ಕೋಲ್ಡ್‌ ಡ್ರಿಂಕ್ಸ್‌’ ಕುಡಿಯುವವರೇ ಎಚ್ಚರ : ನಿಮ್ಮ ಜೀರ್ಣಕ್ರಿಯೆಗೆ ಕಾದಿದೆ ಸಂಕಷ್ಟ | Cold drinks

ALERT : ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ 5 ಕೆಟ್ಟ ಅಭ್ಯಾಸಗಳಿವು: ಇಂದೇ ಬಿಟ್ಟುಬಿಡಿ | 5 Bad Habits

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.