ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನ ಇಂದಿರಾಪುರಂನಲ್ಲಿ ನಡೆದ ಹೈಪ್ರೊಫೈಲ್ ಮದುವೆಯೊಂದರಲ್ಲಿ ವರದಕ್ಷಿಣೆಯನ್ನು ಬಹಿರಂಗವಾಗಿ ಘೋಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಸಹ, ಸಾರ್ವಜನಿಕವಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣ ಮತ್ತು ಐಷಾರಾಮಿ ವಸ್ತುಗಳನ್ನು ಪ್ರದರ್ಶಿಸುತ್ತಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೈಕ್ ಹಿಡಿದು ಮದುವೆಯ ಅತಿಥಿಗಳ ಮುಂದೆ ವರದಕ್ಷಿಣೆಯ ಪಟ್ಟಿಯನ್ನು ಹೆಮ್ಮೆಯಿಂದ ಓದುತ್ತಿರುವುದು ಕಂಡುಬಂದಿದೆ. ಆ ಪಟ್ಟಿಯ ವಿವರ ಇಲ್ಲಿದೆ:
ನಗದು: ಒಟ್ಟು 1,01,11,000 ರೂಪಾಯಿ (1.01 ಕೋಟಿ ರೂ.ಗೂ ಅಧಿಕ).
ಐಷಾರಾಮಿ ಕಾರು: ಒಂದು ಬಿಎಂಡಬ್ಲ್ಯು (BMW) ಕಾರು.
ಆಭರಣಗಳು: 11 ವಜ್ರದ ಆಭರಣಗಳು, 42 ಚಿನ್ನದ ಮತ್ತು 18 ಬೆಳ್ಳಿಯ ಆಭರಣಗಳು.
ಇತರ ಉಡುಗೊರೆಗಳು: ಮದುವೆ ಸಂಬಂಧ ಕುದುರಿಸಿದ ಮಧ್ಯವರ್ತಿಗೆ ಸ್ಕಾರ್ಪಿಯೋ ಎಸ್ಯುವಿ (Scorpio SUV) ಉಡುಗೊರೆ!
ಇತ್ತೀಚೆಗಷ್ಟೇ ನಡೆದ ಈ ಮದುವೆಯ ಎಂಗೇಜ್ಮೆಂಟ್ ವೇಳೆಯೂ ವರನಿಗೆ ಮಹೀಂದ್ರಾ ಥಾರ್ (Thar) ಕಾರು ಮತ್ತು 31 ಲಕ್ಷ ರೂಪಾಯಿ ನಗದು ನೀಡಲಾಗಿತ್ತು ಎಂದು ವರದಿಯಾಗಿದೆ. ಈ ಅದ್ದೂರಿ ಪ್ರದರ್ಶನವನ್ನು ಅನೇಕರು “ಹೆಣ್ಣುಮಕ್ಕಳ ಮಾರಾಟ” ಮತ್ತು “ಸಮಾಜಕ್ಕೆ ತಪ್ಪು ಸಂದೇಶ” ಎಂದು ಟೀಕಿಸಿದ್ದಾರೆ.
“ಇದು ಮದುವೆಯೋ ಅಥವಾ ವ್ಯವಹಾರವೋ?” ಎಂದು ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. ಅಷ್ಟೊಂದು ಹಣವನ್ನು ಮಗಳ ಹೆಸರಲ್ಲಿ ಫಿಕ್ಸೆಡ್ ಡಿಪಾಸಿಟ್ ಮಾಡುವ ಬದಲಿಗೆ ವರನ ಕೈಗಿಡುತ್ತಿರುವುದು ಎಷ್ಟು ಸರಿ ಎಂಬ ಚರ್ಚೆ ನಡೆಯುತ್ತಿದೆ.
ಐಟಿ ಇಲಾಖೆಗೆ ದೂರು: ಹಲವು ನೆಟ್ಟಿಗರು ಈ ವಿಡಿಯೋವನ್ನು ಆದಾಯ ತೆರಿಗೆ ಇಲಾಖೆಗೆ ಟ್ಯಾಗ್ ಮಾಡಿದ್ದು, ಇಷ್ಟೊಂದು ದೊಡ್ಡ ಮೊತ್ತದ ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಕಾನೂನು ಕ್ರಮಕ್ಕೆ ಒತ್ತಾಯ: ಸಾರ್ವಜನಿಕವಾಗಿ ವರದಕ್ಷಿಣೆ ಘೋಷಿಸುವುದು ಅಪರಾಧವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
In Islam Dowry
One crore one lakh eleven thousand rupees in cash and a BMW 🚗
When this voice echoed in the crowded gathering, there was noise all around.Boss, Sheikh, Chaudhary left behind – Idrisi took the top spot 🔥 Is taking dowry right or wrong? pic.twitter.com/ZmqBVm0eyd
— Oxomiya Jiyori 🇮🇳 (@SouleFacts) May 11, 2026








