ಬೆಂಗಳೂರು : ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ಭಾರತದ ಮೇಲೆ ಪರಿಣಾಮ ಬೀರಿದ್ದು, ಈ ಬಿಕ್ಕಟ್ಟು ನಿವಾರಣೆಗೆ ಮೋದಿ ಕೆಲ ಸಲಹೆ ಮತ್ತು ತ್ಯಾಗಗಳಿಗೆ ಕರೆ ನೀಡಿದ್ದಾರೆ. ಅವುಗಳಲ್ಲಿ ಜನ ಅಡುಗೆ ಎಣ್ಣೆಯ ಬಳಕೆಯನ್ನು ಮಿತಿಗೊಳಿಸುವ ಮನವಿ ಸಹ ಒಂದಾಗಿದೆ. ಈ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಲ್ಲಿ ಅಡುಗೆ ಎಣ್ಣೆ ಬೆಲೆ ಕುಸಿತವಾಗಿದ್ದರೇ, ಅಕ್ಕಿ ದರ ಗಗನಕ್ಕೇರಿದೆ.
ಹೌದು ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ದೇಶದ ಆರ್ಥಿಕತೆಯ ಒಳಿತಿನ ದೃಷ್ಟಿಯಿಂದ ಕೆಲ ಮನವಿಗಳನ್ನು ಮಾಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಗೃಹಿಣಿಯರಿಗೆ ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ ಅನ್ನೋದು ಸಹ ಒಂದಾಗಿದೆ. ಆರೋಗ್ಯ ಹಾಗೂ ಆರ್ಥಿಕತೆಯ ಉದ್ದೇಶದಿಂದ ಈ ಕರೆ ನೀಡಿದ್ದಾರೆ.
ಅಡುಗೆ ಎಣ್ಣೆ ಬಳಕೆ ಮಿತಿಗೆ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಲ್ಲಿ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗಿದೆ. ಎಲ್ಲಾ ಬ್ರ್ಯಾಂಡ್ನ ಅಡುಗೆ ಎಣ್ಣೆಗಳಲ್ಲೂ ಒಂದು ಲೀಟರ್ಗೆ ಮೂರು ರೂಪಾಯಿಯಿಂದ ಐದು ರೂಪಾಯಿವರೆಗೂ ಕಡಿಮೆಯಾಗಿದೆ. ಒಂದು ಟಿನ್ ಅಡುಗೆ ಎಣ್ಣೆಯಲ್ಲಿ 30-40 ರೂಪಾಯಿವರೆಗೂ ಇಳಿಕೆಯಾಗಿದೆ. ಅಡುಗೆ ಎಣ್ಣೆಯ ಆಮದು ಪ್ರಮಾಣ ಸುಧಾರಣೆ, ಪೂರೈಕೆ ಹೆಚ್ಚಳ ಹಾಗೂ ಮೋದಿ ಕರೆಯೂ ಈ ದರ ಇಳಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ.
| ಎಣ್ಣೆಯ ವಿಧ | ಹಳೆಯ ದರ (ರೂ.) | ಹೊಸ ದರ (ರೂ.) | ವ್ಯತ್ಯಾಸ (ರೂ.) |
| ಪಾಮ್ ಆಯಿಲ್ | 143 | 141 | 2 ರೂ. ಇಳಿಕೆ |
| ಸನ್ ಪ್ಯೂರ್ | 170 | 167 | 3 ರೂ. ಇಳಿಕೆ |
| ಕಡಲೆಕಾಯಿ ಎಣ್ಣೆ | 190 | 185 | 5 ರೂ. ಇಳಿಕೆ |








