ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೀಡಿದ ಒಂದು ಮಹತ್ವದ ಹೇಳಿಕೆಯು ಬುಲಿಯನ್ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಇದರ ನೇರ ಪರಿಣಾಮವಾಗಿ ಇಂದು ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ದೇಶದ ಪ್ರಮುಖ ಜ್ಯುವೆಲ್ಲರಿ ಕಂಪನಿಗಳ ಷೇರುಗಳು ಭಾರೀ ಕುಸಿತವನ್ನು ಕಂಡಿವೆ.
ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದ ಆರ್ಥಿಕ ಹಿತದೃಷ್ಟಿಯಿಂದ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ಕರೆ ನೀಡಿದ್ದರು. ಬೆಳೆಯುತ್ತಿರುವ ಕಚ್ಚಾ ತೈಲ ಬೆಲೆ ಹಾಗೂ ಆರ್ಥಿಕ ಒತ್ತಡವನ್ನು ಸರಿದೂಗಿಸಲು ಅವರು ನೀಡಿದ ಸಲಹೆಗಳು ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿವೆ.
ಪ್ರಧಾನಿಯವರ ಪ್ರಮುಖ ಸಲಹೆಗಳು:
ಚಿನ್ನದ ಖರೀದಿ ಬೇಡ: ಮುಂದಿನ ಒಂದು ವರ್ಷದವರೆಗೆ ಚಿನ್ನದ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಜನರಿಗೆ ಸೂಚನೆ.
ಪ್ರವಾಸ ಕಡಿತ: ಅನಗತ್ಯ ದೇಶೀಯ ಹಾಗೂ ಅಂತರಾಷ್ಟ್ರೀಯ ಪ್ರವಾಸಗಳನ್ನು ತಪ್ಪಿಸಲು ಸಲಹೆ.
ವರ್ಕ್ ಫ್ರಮ್ ಹೋಮ್: ಇಂಧನ ಉಳಿತಾಯಕ್ಕಾಗಿ ಮತ್ತೆ ‘ವರ್ಕ್ ಫ್ರಮ್ ಹೋಮ್’ ಪದ್ಧತಿಯನ್ನು ಅಳವಡಿಸಿಕೊಳ್ಳಲು ಕರೆ.
ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಪತನಾಧ ಹಾದಿಯಲ್ಲಿ ದೈತ್ಯ ಕಂಪನಿಗಳು
ಪ್ರಧಾನಿಯವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಜ್ಯುವೆಲ್ಲರಿ ವಲಯದ ಪ್ರಮುಖ ಕಂಪನಿಗಳಾದ ಟೈಟಾನ್, ಕಲ್ಯಾಣ್ ಜ್ಯುವೆಲ್ಲರ್ಸ್ ಮತ್ತು ಸೆನ್ಕೊ ಗೋಲ್ಡ್ ಕಂಪನಿಗಳ ಷೇರು ಮೌಲ್ಯದಲ್ಲಿ ಗಣನೀಯ ಇಳಿಕೆಯಾಗಿದೆ.
ಷೇರುಗಳ ಕುಸಿತದ ವಿವರ ಇಲ್ಲಿದೆ:








