ಬೆಂಗಳೂರು : ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ವಿಚಾರ ತಿಂಗಳಲ್ಲಿ ಬಗೆಹರಿಯುತ್ತದೆ ಎಂದು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಂಪುಟ, ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ತಿಂಗಳಲ್ಲಿ ಬಗೆಹರಿಯುತ್ತದೆ. ಮುಂದುವರಿಯುತ್ತಾರಾ?. ಬದಲಾಗುತ್ತಾರಾ ಅವರೇ ತಿಳಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ನಿನ್ನೆ ನಡೆದ ಎಸ್ಐಆರ್ ಸಂಬಂಧ ಸಿಎಂ ಸಭೆ ವಿಚಾರವಾಗಿ ಮಾತನಾಡಿ, ಇಡೀ ದೇಶದಲ್ಲಿ ಗೊಂದಲ ಇದೆ. ಸಂಘ ಸಂಸ್ಥೆಗಳ ಜೊತೆ ನಿನ್ನೆ ಸಭೆ ಆಗಿದೆ. ದುರುಪಯೋಗ, ತಡೆಗಟ್ಟುವಿಕೆ ಬಗ್ಗೆ ಚರ್ಚೆ ಆಯ್ತು. ಮತಗಳನ್ನು ತೆಗೆಯುವಂತದ್ದು ಇಡೀ ದೇಶದಲ್ಲಿ ಸಂಶಯಾಸ್ಪದ ಮೂಡಿಸುತ್ತದೆ. ಮತಪಟ್ಟಿ ಪರಿಷ್ಕರಣೆ ಆಗಲಿ, ಬೇಡ ಅನ್ನುವುದಿಲ್ಲ. ಬೇಕು ಅನ್ನೋರನ್ನು ಉಳಿಸುವುದು, ಬೇಡ ಅನ್ನೋರನ್ನು ತೆಗೆಯುವುದು ಆಗ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಆಗಲಿ. ರಾಜಕೀಯ ಪಕ್ಷಗಳು ಜವಾಬ್ದಾರಿಯಿಂದ ನಿರ್ವಹಿಸಬೇಕು.
ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸರ್ಕಸ್ ವಿಚಾರವಾಗಿ ಮಾತನಾಡಿ, ಸರ್ಕಾರ ರಚನೆಗೆ ಅವಕಾಶ ಕೊಡಬೇಕು. ನಂತರ ಬಹುಮತ ಸಾಬೀತು ಪಡಿಸಬಹುದು. ರಾಜ್ಯಪಾಲರು ಅನುಮತಿ ಕೊಟ್ಟರೆ ಸಂವಿಧಾನಕ್ಕೆ ಗೌರವ ಕೊಟ್ಟಂತೆ ಆಗುತ್ತದೆ. ಇದು ಸಂವಿಧಾನಕ್ಕೆ ಅಪಮಾನ ಮಾಡಿದ ಹಾಗೆ. ಒಂದು ವಾರ 15 ದಿನಗಳ ಕಾಲ ಅವಕಾಶ ಕೊಡಬೇಕು. ಜನರಿಗೆ ಅಪಮಾನ ಮಾಡಿದ ರೀತಿ ಆಗುತ್ತದೆ ಎಂದರು.








