ಚಿಕ್ಕಮಗಳೂರು : ಆಟವಾಡುವಾಗ ಕಾಫಿ ತೋಟದಲ್ಲಿ ಮಗು ನಾಪತ್ತೆಯಾಗಿತ್ತು. ಇದೀಗ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಇದೀಗ ಪೊಲೀಸರು ಮಗುವನ್ನು ಪತ್ತೆಹಚ್ಚಿದ್ದಾರೆ. ಮೂಡಿಗೆರೆ ತಾಲೂಕಿನ ಕೆಳಗೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿತ್ತು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗುರು ಗ್ರಾಮದಲ್ಲಿ ನಿನ್ನೆ ಸಂಜೆ ಆಟವಾಡುವಾಗ ಒಂದುವರೆ ವರ್ಷದ ಮಗು ನಾಪತ್ತೆಯಾಗಿತ್ತು.
ಮಧ್ಯಪ್ರದೇಶದ ಮೂಲದ ಗೋನು ಮತ್ತು ಸೋನು ದಂಪತಿಯ ಗಂಡು ಮಗು ನಾಪತ್ತೆಯಾಗಿತ್ತು. ಟಿ ಎಸ್ಸ್ಟೇಟ್ ನಲ್ಲಿ ಗುರು ಮತ್ತು ಸೋನು ದಂಪತಿ ಕೆಲಸಕ್ಕೆ ಬಂದಿದ್ದರು. ಮಗು ನಾಪತ್ತೆಯಾದ ಬಳಿಕ ಮೂಡಿಗೆರೆ ಸಿಪಿಐ ಬಾಳೂರು ಪಿಎಸ್ಐ ನೇತ್ರತ್ವದಲ್ಲಿ ಶೋಧ ಕಾರ್ಯ ನಡೆದಿದ್ದು ಮೂರು ಮಕ್ಕಳ ಜೊತೆಗೆ ಆಟವಾಡುತ್ತಿದ್ದಾಗ ಮಗು ತೋಟಕ್ಕೆ ಹೋಗಿದೆ. ಇಂದು ಬೆಳಗ್ಗೆ ತೋಟದಲ್ಲಿ ಪೊಲೀಸರು ಮಗುವನ್ನು ಪತ್ತೆ ಹಚ್ಚಿದ್ದಾರೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








