ಕೊಪ್ಪಳ: ಕೊಪ್ಪಳದಲ್ಲಿ ಲವ್ ಜಿಹಾದ್ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಹಿಂದೂ ಅಪ್ರಾಪ್ತಿಯೊಂದಿಗೆ ಓಡಾಡುತ್ತಿದ್ದ ಮುಸ್ಲಿಂ ಯುವಕನಿಗೆ ಹಿಂದೂಪರ ಮುಖಂಡರು ಥಳಿಸಿದ ಘಟನೆರ ನಡೆದಿದೆ.
ಮುಸ್ಲಿಂ ಯುವಕ ಸಮೀರ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಿಂದೂಪರ ಮುಖಂಡರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಇಲಾಖೆ ನಡೆಗೆ ಹಿಂದೂಪರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮೀರ್ ಹಿಂದೂ ಅಪ್ರಾಪ್ತಯ ಜೊತೆ ಸಲ್ಲಾಪವಾಡಿದ ಆರೋಪವಿದ್ದು, ಸಮೀರ್ ಮೊಬೈಲ್ ನಲ್ಲಿ ಎಲ್ಲವೂ ಇವೆ. ಆತನ ಮೇಲೆ ಕೇಸ್ ಮಾಡಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.








