ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ರಾಜ-ರಾಣಿ ಎಕ್ಸ್ಪ್ರೆಸ್ ರೈಲಿನಲ್ಲಿ ಸೀಟು ಹಂಚಿಕೆ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ದುಷ್ಕರ್ಮಿಗಳು ಇಬ್ಬರು ಪ್ರಯಾಣಿಕರಿಗೆ ಚಾಕು ಇರಿದಿರುವ ಘಟನೆ ನಡೆದಿದೆ.
ಜಗಳ ಬಿಡಿಸಲು ಹೋದವರ ಮೇಲೆ ದಾಳಿ ರೈಲಿನಲ್ಲಿ ಸೀಟಿನ ವಿಚಾರವಾಗಿ ಆರೋಪಿಗಳು ಮತ್ತು ಇತರ ಪ್ರಯಾಣಿಕರ ಮಧ್ಯೆ ತೀವ್ರ ಗಲಾಟೆ ನಡೆಯುತ್ತಿತ್ತು. ಈ ವೇಳೆ ಪ್ರಯಾಣಿಕ ಶಿವಕುಮಾರ್ ಅವರು “ಏಕೆ ಜಗಳ ಮಾಡುತ್ತೀರಿ?” ಎಂದು ಪ್ರಶ್ನಿಸಿ ಗಲಾಟೆ ಸರಿಪಡಿಸಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ಆರೋಪಿಗಳು ಏಕಾಏಕಿ ಶಿವಕುಮಾರ್ ಅವರ ಮೇಲೆ ಮುಗಿಬಿದ್ದಿದ್ದಾರೆ.
ಚಾಕುವಿನಿಂದ ಇರಿದ ದುಷ್ಕರ್ಮಿಗಳು ಗಲಾಟೆ ನಡೆಸುತ್ತಿದ್ದ ಸುಭಾನ್ ಖುರೇಷಿ, ಶೋಯಬ್ ಮತ್ತು ವಾಸಿನ್ ಎಂಬುವವರು ಈ ಕೃತ್ಯ ಎಸಗಿದ್ದಾರೆ. ಮೊದಲು ಸುಭಾನ್ ಖುರೇಷಿ ಎಂಬಾತ ಶಿವಕುಮಾರ್ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ತದನಂತರ ಮತ್ತೊಬ್ಬ ಆರೋಪಿ ಶೋಯಬ್ ಕೂಡ ಶಿವಕುಮಾರ್ ಅವರ ಮೇಲೆ ಚಾಕು ದಾಳಿ ನಡೆಸಿದ್ದಾನೆ. ದಾಳಿಯ ವೇಳೆ ಶಿವಕುಮಾರ್ ಅವರೊಂದಿಗೆ ಇದ್ದ ಕುಮಾರ್ ಎಂಬುವವರಿಗೂ ಇರಿತವಾಗಿದೆ.
ಪ್ರಾಣಾಪಾಯದಿಂದ ಪಾರಾಗಲು ಚೈನ್ ಎಳೆದ ಪ್ರಯಾಣಿಕ ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾದ ಶಿವಕುಮಾರ್, ಪ್ರಾಣ ರಕ್ಷಣೆಗಾಗಿ ರೈಲಿನ ಚೈನ್ ಎಳೆದು ರೈಲು ನಿಲ್ಲುವಂತೆ ಮಾಡಿದ್ದಾರೆ. ರೈಲು ನಿಲ್ಲುತ್ತಿದ್ದಂತೆಯೇ ಆರೋಪಿಗಳು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
BREAKING: 75000 ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಲೋಕಾಯುಕ್ತ ಬಲೆಗೆ
ಮೈಸೂರು: ಮಹಿಳಾ ಸಿಬ್ಬಂದಿಗೆ ಅಶ್ಲೀಲ ವಿಡಿಯೋ ಕಾಲ್, ಕರ್ತವ್ಯದ ವೇಳೆ ಮದ್ಯಪಾನ; ವೈದ್ಯಾಧಿಕಾರಿ ಅಮಾನತು








