Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ದೀದಿ ಸಭೆಗೆ 10 ಶಾಸಕರು ಗೈರು: ತೃಣಮೂಲ ಕಾಂಗ್ರೆಸ್‌ನಲ್ಲಿ ಶುರುವಾಯಿತೇ ಬಂಡಾಯದ ಭೀತಿ? ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರಿ ಸಂಚಲನ!

06/05/2026 7:01 PM

ಚಿತ್ರದುರ್ಗ: ಕರ್ತವ್ಯದ ವೇಳೆ ಮದ್ಯಪಾನ, ದುರ್ನಡತೆ ಆರೋಪ; ವಿವಿ ಪುರ PHC ವೈದ್ಯ ಡಾ.ಚಂದ್ರಮೌಳಿ ಸಸ್ಪೆಂಡ್

06/05/2026 6:55 PM

​’ಜನ ನಾಯಕನ್’ ಸಿನಿಮಾದಲ್ಲಿ ದಳಪತಿ ವಿಜಯ್‌ಗೆ ಹೊಸ ಬಿರುದು: ಟೈಟಲ್ ಕಾರ್ಡ್‌ನಲ್ಲಿ ‘ತಮಿಳುನಾಡಿನ ಗೌರವಾನ್ವಿತ ಸಿಎಂ’ ಎಂದು ಘೋಷಣೆ!

06/05/2026 6:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಚಿತ್ರದುರ್ಗ: ಕರ್ತವ್ಯದ ವೇಳೆ ಮದ್ಯಪಾನ, ದುರ್ನಡತೆ ಆರೋಪ; ವಿವಿ ಪುರ PHC ವೈದ್ಯ ಡಾ.ಚಂದ್ರಮೌಳಿ ಸಸ್ಪೆಂಡ್
KARNATAKA

ಚಿತ್ರದುರ್ಗ: ಕರ್ತವ್ಯದ ವೇಳೆ ಮದ್ಯಪಾನ, ದುರ್ನಡತೆ ಆರೋಪ; ವಿವಿ ಪುರ PHC ವೈದ್ಯ ಡಾ.ಚಂದ್ರಮೌಳಿ ಸಸ್ಪೆಂಡ್

By kannadanewsnow0906/05/2026 6:55 PM

ಬೆಂಗಳೂರು: ಕರ್ತವ್ಯದ ಸಮಯದಲ್ಲಿ ಮದ್ಯಪಾನ, ಗುಟ್ಕಾ ಸೇವನೆ ಹಾಗೂ ಸಹೋದ್ಯೋಗಿಗಳೊಂದಿಗೆ ಗಲಾಟೆ ನಡೆಸಿ ದುರ್ನಡತೆ ತೋರಿದ ಆರೋಪದ ಮೇಲೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವೈದ್ಯಾಧಿಕಾರಿಯೊಬ್ಬರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಪ್ರಕರಣದ ವಿವರ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಿ.ವಿ. ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಡಾ. ಚಂದ್ರಮೌಳಿ ಎಸ್. ಅಮಾನತುಗೊಂಡವರು. ಫೆಬ್ರವರಿ 8, 2025 ರಂದು ಧರ್ಮಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದಾಗ ಇವರು ಆಸ್ಪತ್ರೆಯ ಅಡುಗೆ ಕೋಣೆಯಲ್ಲಿ ಮದ್ಯಪಾನ ಮಾಡುತ್ತಿರುವುದು ಕಂಡುಬಂದಿತ್ತು.

ಆಸ್ಪತ್ರೆಯಲ್ಲಿ ಇಂತಹ ಕೃತ್ಯ ಎಸಗಬಾರದೆಂದು ಸಹೋದ್ಯೋಗಿ ಡಾ. ಹನಮಂತರಾಯ ಅವರು ತಿಳಿಸಿದಾಗ, ಡಾ. ಚಂದ್ರಮೌಳಿ ಅವರು ಗಲಾಟೆ ಆರಂಭಿಸಿ ವಿಡಿಯೋ ಮಾಡಿಕೊಂಡಿದ್ದರು ಎಂಬ ಅಂಶ ತನಿಖಾ ವರದಿಯಿಂದ ತಿಳಿದುಬಂದಿದೆ.

ತನಿಖಾ ವರದಿಯ ಮುಖ್ಯಾಂಶಗಳು:

  • ಡಾ. ಚಂದ್ರಮೌಳಿ ಅವರು ಹಗಲು ಮತ್ತು ರಾತ್ರಿ ವೇಳೆ ಯಾವಾಗಲೂ ಮದ್ಯಪಾನ ಹಾಗೂ ಗುಟ್ಕಾ ಸೇವಿಸಿ ಕರ್ತವ್ಯಕ್ಕೆ ಬರುತ್ತಾರೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಲಿಖಿತ ಹೇಳಿಕೆ ನೀಡಿದ್ದಾರೆ.

  • ಇವರ ವರ್ತನೆಯಿಂದ ಆಸ್ಪತ್ರೆಯ ಕಾನೂನುಬಾಹಿರ ಚಟುವಟಿಕೆಗಳಿಗೆ ಕುಮ್ಮಕ್ಕು ಸಿಗುತ್ತಿದೆ ಮತ್ತು ಪದೇ ಪದೇ ಗಲಾಟೆಗಳು ನಡೆಯುತ್ತಿವೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

  • ಮೇಲ್ನೋಟಕ್ಕೆ ಕರ್ತವ್ಯಲೋಪ, ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆಯುಕ್ತರ ಆದೇಶ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರಾದ ಗುರುದತ್ತ ಹೆಗಡೆ (IAS) ಅವರು ಮೇ 6, 2026 ರಂದು ಈ ಅಮಾನತು ಆದೇಶ ಹೊರಡಿಸಿದ್ದಾರೆ. ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಅಮಾನತ್ತಿನ ಅವಧಿಯಲ್ಲಿ ಜೀವನಾಂಶ ಭತ್ಯೆ ಪಡೆಯಲು ಇವರ ಲೀನ್ ಅನ್ನು ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ಕುಕನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದೆಂದು ಸೂಚಿಸಲಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

Share. Facebook Twitter LinkedIn WhatsApp Email

Related Posts

BREAKING: ಶೃಂಗೇರಿ ಶಾಸಕರಾಗಿ ಡಿ.ಎನ್. ಜೀವರಾಜ್ ಅಧಿಕೃತ ಪ್ರಮಾಣವಚನ ಸ್ವೀಕಾರ

06/05/2026 6:36 PM1 Min Read

ಒಳಮೀಸಲಾತಿ ಜಾರಿ ಐತಿಹಾಸಿಕ ತೀರ್ಮಾನ: ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ – ಸಿಎಂ ಸಿದ್ಧರಾಮಯ್ಯ

06/05/2026 4:51 PM2 Mins Read

ಶಾಸಕರಿಗೆ ಟಿಕೆಟ್ ವಿತರಣೆಗೂ IPL ಫೈನಲ್ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿಕೆಶಿ ಸ್ಪಷ್ಟನೆ

06/05/2026 4:48 PM2 Mins Read
Recent News

​ದೀದಿ ಸಭೆಗೆ 10 ಶಾಸಕರು ಗೈರು: ತೃಣಮೂಲ ಕಾಂಗ್ರೆಸ್‌ನಲ್ಲಿ ಶುರುವಾಯಿತೇ ಬಂಡಾಯದ ಭೀತಿ? ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಭಾರಿ ಸಂಚಲನ!

06/05/2026 7:01 PM

ಚಿತ್ರದುರ್ಗ: ಕರ್ತವ್ಯದ ವೇಳೆ ಮದ್ಯಪಾನ, ದುರ್ನಡತೆ ಆರೋಪ; ವಿವಿ ಪುರ PHC ವೈದ್ಯ ಡಾ.ಚಂದ್ರಮೌಳಿ ಸಸ್ಪೆಂಡ್

06/05/2026 6:55 PM

​’ಜನ ನಾಯಕನ್’ ಸಿನಿಮಾದಲ್ಲಿ ದಳಪತಿ ವಿಜಯ್‌ಗೆ ಹೊಸ ಬಿರುದು: ಟೈಟಲ್ ಕಾರ್ಡ್‌ನಲ್ಲಿ ‘ತಮಿಳುನಾಡಿನ ಗೌರವಾನ್ವಿತ ಸಿಎಂ’ ಎಂದು ಘೋಷಣೆ!

06/05/2026 6:53 PM

BREAKING: ಶೃಂಗೇರಿ ಶಾಸಕರಾಗಿ ಡಿ.ಎನ್. ಜೀವರಾಜ್ ಅಧಿಕೃತ ಪ್ರಮಾಣವಚನ ಸ್ವೀಕಾರ

06/05/2026 6:36 PM
State News
KARNATAKA

ಚಿತ್ರದುರ್ಗ: ಕರ್ತವ್ಯದ ವೇಳೆ ಮದ್ಯಪಾನ, ದುರ್ನಡತೆ ಆರೋಪ; ವಿವಿ ಪುರ PHC ವೈದ್ಯ ಡಾ.ಚಂದ್ರಮೌಳಿ ಸಸ್ಪೆಂಡ್

By kannadanewsnow0906/05/2026 6:55 PM KARNATAKA 1 Min Read

ಬೆಂಗಳೂರು: ಕರ್ತವ್ಯದ ಸಮಯದಲ್ಲಿ ಮದ್ಯಪಾನ, ಗುಟ್ಕಾ ಸೇವನೆ ಹಾಗೂ ಸಹೋದ್ಯೋಗಿಗಳೊಂದಿಗೆ ಗಲಾಟೆ ನಡೆಸಿ ದುರ್ನಡತೆ ತೋರಿದ ಆರೋಪದ ಮೇಲೆ ಚಿತ್ರದುರ್ಗ…

BREAKING: ಶೃಂಗೇರಿ ಶಾಸಕರಾಗಿ ಡಿ.ಎನ್. ಜೀವರಾಜ್ ಅಧಿಕೃತ ಪ್ರಮಾಣವಚನ ಸ್ವೀಕಾರ

06/05/2026 6:36 PM

ಒಳಮೀಸಲಾತಿ ಜಾರಿ ಐತಿಹಾಸಿಕ ತೀರ್ಮಾನ: ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧ – ಸಿಎಂ ಸಿದ್ಧರಾಮಯ್ಯ

06/05/2026 4:51 PM

ಶಾಸಕರಿಗೆ ಟಿಕೆಟ್ ವಿತರಣೆಗೂ IPL ಫೈನಲ್ ಪಂದ್ಯ ಸ್ಥಳಾಂತರಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿಕೆಶಿ ಸ್ಪಷ್ಟನೆ

06/05/2026 4:48 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.