ನವದೆಹಲಿ:ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು (ಮೇ 4) ನಡೆಯುತ್ತಿದ್ದು, ಚುನಾವಣಾ ಆಯೋಗವು ಸಾರ್ವಜನಿಕರಿಗೆ ಲೈವ್ ಅಪ್‌ಡೇಟ್ ನೀಡಲು ವಿಶೇಷ ವ್ಯವಸ್ಥೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ನಂಬುವ ಬದಲು ಅಧಿಕೃತ ಪೋರ್ಟಲ್ ಬಳಸಲು ಸೂಚಿಸಲಾಗಿದೆ.
ಫಲಿತಾಂಶ ಚೆಕ್ ಮಾಡಲು ಈ ಹಂತಗಳನ್ನು ಅನುಸರಿಸಿ:
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ results.eci.gov.in ಲಿಂಕ್ ಅನ್ನು ಓಪನ್ ಮಾಡಿ.
ಚುನಾವಣೆಯನ್ನು ಆಯ್ಕೆ ಮಾಡಿ: ಮುಖಪುಟದಲ್ಲಿ ಕಾಣಿಸುವ ‘General Election to State Legislative Assembly’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ನಿಮ್ಮ ರಾಜ್ಯವನ್ನು ಆರಿಸಿ: ಅಲ್ಲಿ ನೀಡಲಾದ ಪಟ್ಟಿಯಲ್ಲಿ ಕೇರಳ, ಅಸ್ಸಾಂ, ತಮಿಳುನಾಡು ಅಥವಾ ಪಶ್ಚಿಮ ಬಂಗಾಳ – ಇವುಗಳಲ್ಲಿ ನಿಮಗೆ ಬೇಕಾದ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.
ಕ್ಷೇತ್ರವಾರು ಮಾಹಿತಿ: ಈಗ ನೀವು ಇಡೀ ರಾಜ್ಯದ ಪಕ್ಷವಾರು ಸ್ಥಿತಿಗತಿ ಅಥವಾ ನಿಮ್ಮ ನಿರ್ದಿಷ್ಟ ಕ್ಷೇತ್ರದ (Constituency-wise) ಅಭ್ಯರ್ಥಿಗಳ ಮುನ್ನಡೆ ಮತ್ತು ಗೆಲುವಿನ ಅಂತರವನ್ನು ವಿವರವಾಗಿ ನೋಡಬಹುದು.







