ಬೆಂಗಳೂರು : ಪ್ರೀತಿಸಿ ಮದುವೆಯಾದರು ಕೂಡ ಇನ್ನೊಂದು ವಿವಾಹಕ್ಕೆ ತಯಾರಿ ಮಾಡಿಕೊಂಡಿರುವ ಭೂಪ, ಮನೆಯವರ ಒತ್ತಡಕ್ಕೆ ಮಣಿದು ಇನ್ನೊಬ್ಬರ ಜೊತೆಗೆ ವಿವಾಹಕ್ಕೆ ಸಿದ್ಧನಾಗಿದ್ದಾನೆ. ಆದರೆ ಹಸೆಮಣೆ ಇರುವಾಗ ಮೊದಲ ಪತ್ನಿ ಎಂಟ್ರಿ ಕೊಟ್ಟಿದ್ದು ಇದೀಗ ಮದುವೆಗೆ ಬ್ರೇಕ್ ಹಾಕಲಾಗಿದೆ. ದೊಡ್ಡಬಳ್ಳಾಪುರದ ಬಸವ ಭವನದಲ್ಲಿ ಇಂದು ಮದುವೆ ಇತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಈ ಒಂದು ಘಟನೆ ನಡೆದಿದ್ದು, ಪೊಲೀಸರ ನೆರವಿನೊಂದಿಗೆ ಮೊದಲ ಪತ್ನಿ ಮದುವೆ ನಿಲ್ಲಿಸಿದ್ದಾಳೆ. ಮದುವೆಗೆ ಎಲ್ಲಾ ಕೂಡ ಏರ್ಪಾಡು ಆಗಿತ್ತು. ಒಂದು ವರ್ಷದ ಹಿಂದೆ ಅಷ್ಟೇ ಕೇರಳ ಮೂಲದ ಯುವತಿಯನ್ನು ಕುಮಾರ ಎಂಬಾತ ಮದುವೆ ಆಗಿದ್ದ. ಇದೀಗ ಮನೆಯವರ ಒತ್ತಡದ ಮೇರೆಗೆ ಈತ ಮತ್ತೊಂದು ಮದುವೆಗೆ ತಯಾರಿ ಮಾಡಿದ್ದ.
ಸದ್ಯ ಮೊದಲ ಪತ್ನಿ ಏಳು ತಿಂಗಳ ಗರ್ಭಿಣಿ ಆಗಿದ್ದಾಳೆ. ಇಂದು ಕುಮಾರ್ ಮತ್ತೊಂದು ಮದುವೆಗೆ ತಯಾರಿ ಮಾಡಿಕೊಂಡಿದ್ದ. ರಾತ್ರಿ ಅಷ್ಟೇ , ಮೊದಲ ಪತ್ನಿಗೆ ಆತ ತಿಳಿಸಿರುತ್ತಾನೆ. ಬಲವಂತದಿಂದ ಮದುವೆ ಮಾಡಿಸುತ್ತಿದ್ದಾರೆ ಎಂದು ಅಳಲು ಮೊದಲ ಪತ್ನಿಯ ಮುಂದೆ ಆಳಲು ತೋಡಿಕೊಂಡಿದ್ದಾನೆ. ನಂತರ ಆಕೆ ಪೊಲೀಸರ ಸಹಕಾರದೊಂದಿಗೆ ಮದುವೆ ಮನೆಗೆ ಬಂದು ಮದುವೆ ನಿಲ್ಲಿಸಿದ್ದಾಳೆ.








