ಬೆಂಗಳೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಒಂದು ರಾತ್ರಿ ಬೆತ್ತಲೆ ಪೂಜೆಗೆ ಕುಳಿತರೆ 30 ಲಕ್ಷ ನೀಡುವುದಾಗಿ ಯುವತಿಗೆ ಪಕ್ಕದ ಮನೆಯ ಕಾಮುಕನೊಬ್ಬ ಆಫರ್ ಕೊಟ್ಟಿದ್ದಾನೆ. ಚೈತ್ರ ಎನ್ನುವ ಯುವತಿಗೆ ಪಕ್ಕದ ಮನೆಯ ಕಾಮುಕ ಕಿರಣ್ ಎಂಬಾತ ಬರೋಬ್ಬರಿ 30 ಲಕ್ಷ ಆಫರ್ ಕೊಟ್ಟಿದ್ದಾನೆ. ಕಿರಣ್ ವಿರುದ್ಧ ಯುವತಿ ಚೈತ್ರ ಗಂಭೀರ ಆರೋಪ ಮಾಡಿದ್ದಾಳೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ದೊಡ್ಡಮಣ್ಣಗುಡ್ಡೆ ದೊಡ್ಡಿಯಲ್ಲಿ ಈ ಒಂದು ಘಟನೆ ನಡೆದಿದೆ.
ಚೈತ್ರಳನ್ನು ಬಳಸಿಕೊಂಡು ಮಾಟ ಮಂತ್ರ ಮಾಡಿಸುವಂತಹ ಶಂಕೆ ಕೂಡ ವ್ಯಕ್ತವಾಗಿದೆ. ಕಾರು ಚಾಲಕನಾಗಿ ಕಿರಣ್ ಕೆಲಸ ಮಾಡುತ್ತಿದ್ದು, ಏಪ್ರಿಲ್ 12 ರಂದು ಚೈತ್ರಾಗೆ ಕರೆ ಮಾಡಿ ಈ ರೀತಿಯಾಗಿ ಆಫರ್ ಕೊಟ್ಟಿದ್ದಾನೆ. ಬೆತ್ತಲೆಯಾಗಿ ಒಂದು ರಾತ್ರಿ ಪೂಜೆ ಮಾಡಿದರೆ ನನಗೆ 30 ಲಕ್ಷ ಹಣ ಕೊಡುವುದಾಗಿ ಈತ ಆಫರ್ ಕೊಟ್ಟಿದ್ದಾನೆ. ಬಳಿಕ ಚೈತ್ರ ಕಿರಣ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ.
ವಾಟ್ಸಪ್ ನಲ್ಲಿ ಫೋಟೋ ಕೂಡ ಶೇರ್ ಮಾಡಿದ್ದ ದೇಹದಲ್ಲಿ ಮಚ್ಚೆ ಇದ್ದರೆ ಪೂಜೆಗೆ ಕೂರಲು ಆಗುವುದಿಲ್ಲ ಎಂದ್ದಿದ್ದು, ಚೈತ್ರಾಗೆ ನಗ್ನ ಫೋಟೋ ಕಳುಹಿಸಲು ಕಿರಣ್ ಹೇಳಿದ್ದಾನೆ. ಫೋನ್ ಮೂಲಕ ಟಾರ್ಚರ್ ಕೂಡ ಕೊಟ್ಟಿದ್ದ. ಬಳಿಕ ಪೂಜೆಗೆ ಸೆಲೆಕ್ಟ ಆಗಿದಿಯ ಅಂತ ಬುರುಡೆ ಬಿಟ್ಟಿದ್ದಾನೆ. ಇದೀಗ ಚೈತ್ರ ಅಮ್ಮನೊಂದು ಪೊಲೀಸ್ ಠಾಣೆಗೆ ಮೆಟ್ಟಿಲು ಏರಿದ್ದಾರೆ.








