ಉತ್ತರಕನ್ನಡ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಜೋಯಿಡ ತಾಲೂಕಿನ ಚಪಾಲಿ ಗವಳಿವಾಡದಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ ಒಬ್ಬಳು ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಜೋಯಿಡಾ ತಾಲೂಕಿನ ಚಪಾಲಿ ಗೌಳಿವಾಡದ ಗ್ರಾಮದ ವಿದ್ಯಾರ್ಥಿನಿ ಗಂಗೂ ಗವಳಿ (13) ಸಾವನಪ್ಪಿದ್ದಾಳೆ. ಮೃತ ವಿದ್ಯಾರ್ಥಿನಿಗೆ ಯಾವುದೇ ರೀತಿಯಾದ ಕಾಯಿಲೆಗಳು ಇರಲಿಲ್ಲ ಹೃದಯ ಸಂಬಂಧಿ ಸಮಸ್ಯೆಯಿಂದ ಬಾಲಕಿ ಬಳಲುತ್ತಿರಲಿಲ್ಲ. ಎಲ್ಲ ಮಕ್ಕಳಂತೆ ನಿತ್ಯ ಆಟ ಪಾಠದಲ್ಲಿ ವಿದ್ಯಾರ್ಥಿನಿ ತೊಡಗುತಿದ್ದಳು. ಸಾವಿಗೆ ಮುನ್ನ ದಿನ ಸಂಜೆವರೆಗೂ ಬಾಲಕಿ ಆಟ ಆಡಿದಳು. ಮರುದಿನ ಬೆಳಿಗ್ಗೆ ವಾಂತಿ ಮಾಡಿದ ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿನೀ ಸಾವನ್ನಪ್ಪಿದ್ದಾಳೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








