ದಾವಣಗೆರೆ : 50 ಸಾವಿರ ಲಂಚ ಪಡೆಯುತ್ತಿದ್ದ ಸರ್ವೇ ಸುರ್ವೈಸರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ADLR ಕಚೇರಿಯಲ್ಲಿ ನಡೆದಿದ್ದು, ಸರ್ವೇ ಸೂಪರ್ ಕೆ.ಹೆಚ್ ಅಂಜಿನಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
50 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಅಂಜಿನಪ್ಪ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ದಾವಣಗೆರೆ ನಗರದ ಹಳೆ ಬಸ್ ನಿಲ್ದಾಣದ ದ್ವಾರಕಾ ಲಾಡ್ಜ್ ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ಬೆಳಿಗ್ಗೆ ಸರ್ವೆ ಸೂಪರ್ ಕೆಎಚ್ ಅಂಜಿನಪ್ಪ ಮಧುರ ನಾಯಕನಹಳ್ಳಿ ಎಬಿ ಕುಮಾರನಾಯಕ ಎಂಬ ತನ ಬಳಿ 50,000 ಲಂಚ ಪಡೆಯಲು ಮುಂದಾಗಿದ್ದಾರೆ.
ರೈತನ ಜಮೀನು ಹದ್ದುಬಸ್ತು ಮಾಡಿಕೊಡಲು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ಸ್ನೇಹಿತ ಶ್ರೀಧರ್ ಮೂಲಕ ರೈತನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೊದಲ ಕಂತು ಐವತ್ತು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಸ್ನೇಹಿತ ಶ್ರೀಧರ್ ಜೊತೆಗೆ ಅಂಜಿನಪ್ಪನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.








