ಕೋಲ್ಕತ್ತಾ:ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಕೆಲವು ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು ಇಂದು (ಶನಿವಾರ) ಎರಡು ಪ್ರಮುಖ ಕ್ಷೇತ್ರಗಳ ಒಟ್ಟು 15 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಆದೇಶಿಸಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಮತ್ತು ಮಾಗ್ರಾಹತ್ ಪಶ್ಚಿಮ ವಿಧಾನಸಭಾ ಕ್ಷೇತ್ರಗಳಲ್ಲಿ ಮರುಮತದಾನ ನಡೆಯಲಿದೆ.ಮಾಗ್ರಾಹತ್ ಪಶ್ಚಿಮ ಕ್ಷೇತ್ರದ 11 ಬೂತ್ಗಳಲ್ಲಿ ಹಾಗೂ ಡೈಮಂಡ್ ಹಾರ್ಬರ್ ಕ್ಷೇತ್ರದ 4 ಬೂತ್ಗಳಲ್ಲಿ ಮತದಾನ ಪ್ರಕ್ರಿಯೆ ಮತ್ತೆ ನಡೆಯಲಿದೆ.
ಏಪ್ರಿಲ್ 29 ರಂದು ನಡೆದ ಎರಡನೇ ಹಂತದ ಮತದಾನದ ವೇಳೆ ಇವಿಎಂ (EVM) ಯಂತ್ರಗಳಿಗೆ ಟೇಪ್ ಅಂಟಿಸಿರುವುದು ಮತ್ತು ಮತದಾನಕ್ಕೆ ಅಡ್ಡಿಪಡಿಸಿದ ದೂರುಗಳು ಕೇಳಿಬಂದಿದ್ದವು. ಈ ದೂರುಗಳನ್ನು ಪರಿಶೀಲಿಸಿದ ಆಯೋಗವು ಈ ನಿರ್ಧಾರ ಕೈಗೊಂಡಿದೆ.








