ಮಂಡ್ಯ : ಮುಂದಿನ ವರ್ಷದಿಂದ ಮದ್ದೂರು ಉತ್ಸವವನ್ನು ಇನ್ನಷ್ಟು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮದ್ದೂರು ಉತ್ಸವದ ಅಂಗವಾಗಿ ಗುರುವಾರ ಸಂಜೆ ರಾಸುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರಪ್ರಥಮ ಬಾರಿಗೆ ಮದ್ದೂರಮ್ಮನ ಹಬ್ಬ ಹಾಗೂ ಶ್ರೀ ನರಸಿಂಹಸ್ವಾಮಿ ಬ್ರಹ್ಮೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಮದ್ದೂರು ಉತ್ಸವಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಗೆ ಮನಸೋತಿದ್ದೇನೆ. ಹೀಗಾಗಿ ಮುಂದಿನ ವರ್ಷದಿಂದ ಟ್ರಸ್ಟ್ ವತಿಯಿಂದಲೇ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ರೈತರು ತಮ್ಮ ರಾಸುಗಳಿಗೆ ಪೋಷಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮನೆ ಮಕ್ಕಳಂತೆ ರಾಸುಗಳನ್ನು ಪೋಷಣೆ ಮಾಡುತ್ತಾರೆ ಹೀಗಾಗಿ ಅವರಿಗೆ ಗೌರವ ಸಮರ್ಪಣೆ ಮಾಡಬೇಕು ಹಾಗೂ ಜಾತ್ರೆಗೆ ಹೆಚ್ಚಿನ ಪ್ರಮಾಣದಲ್ಲಿ ರಾಸುಗಳು ಬರಬೇಕು ಎಂಬ ಉದ್ದೇಶದಿಂದ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮದ್ದೂರಿನ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಮದ್ದೂರು ಉತ್ಸವ ಮಾಡುವ ಮೂಲಕ ರಾಸುಗಳನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಉತ್ತಮ ರಾಸುಗಳಿಗೆ 2 ಲಕ್ಷ ರೂ ನೀಡಿ ರೈತರ ಬೆನ್ನಿಗೆ ನಿಂತಿರುವುದು ಪ್ರಶಂಸನೀಯ ಸಂಗತಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಾಸುಗಳು ದಿನ ದಿನಕ್ಕೆ ಕ್ಷೀಣಿಸುತ್ತಿವೆ. ರೈತರು ರಸಗೊಬ್ಬರವನ್ನು ಉಪಯೋಗ ಮಾಡದೇ ಕೊಟ್ಟಿಗೆ ಗೊಬ್ಬರದಿಂದ ಬೇಸಾಯ ಮಾಡಿ ಭೂಮಿಯ ಫಲವತ್ತತೆಯನ್ನು ಕಾಪಾಡಬೇಕು ಇದರ ಜೊತೆಗೆ ಗಿಡ ಮರಗಳನ್ನು ಬೆಳೆಸುವ ಮೂಲಕ ಇಂದಿನ ಹವಾಮಾನ ವೈಪರಿತ್ಯಗಳಿಂದ ಪಾರಾಗಬಹುದು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪಟ್ಟಣ್ಣಯ್ಯ ಅವರು ತಂದೆ ಪುಟ್ಟಣ್ಣಯ್ಯ ಅವರ ಹೆಸರಿನಲ್ಲಿ ಮಾರಸಿಂಗನಹಳ್ಳಿ ಗ್ರಾಮದ ಕಿರಣ್ ಗೂಳಿ ಎಂಬ ರೈತರ ಉತ್ತಮ ಜೋಡಿ ಹಸುವಿಗೆ 25 ಸಾವಿರ ನಗದು ಬಹುಮಾನ ನೀಡಿ ಗೌರವಿಸಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಶಾಸಕ ಕೆ.ಎಂ.ಉದಯ್ ಅವರು ತಮ್ಮದೆಯಾದ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೊದಲ ಬಾರಿಗೆ ಮದ್ದೂರು ಉತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿರುವುದು ಹಬ್ಬದ ಖುಷಿಯನ್ನು ಮತ್ತಷ್ಟು ಇಮ್ಮಡಿಗೊಳ್ಳಲು ಕಾರಣವಾಗಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕ ಕೆ.ಎಂ.ಉದಯ್ ರಾಸುಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು ಬಳಿಕ ನಗರದ ಪ್ರವಾಸಿ ಮಂದಿರದಿಂದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಾಲಯದವರೆಗೆ ಪ್ರಮುಖ ಬೀದಿಗಳಲ್ಲಿ ಬಹುಮಾನ ಪಡೆದ ರಾಸುಗಳು ಬೃಹತ್ ಮೆರವಣಿಗೆ ನಡೆಸಿದ್ದು, ಸಾರ್ವಜನಿಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಮನ್ ಮುಲ್ ನಿರ್ದೆಶಕ ಹರೀಶ್ ಬಾಬು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೆಶಕ ಪಿ.ಸಂದರ್ಶ, ನಗರಸಭಾ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಮಾಜಿ ಸದಸ್ಯರಾದ ಸರ್ವಮಂಗಳ, ಎಂ.ಬಿ.ಸಚ್ಚಿನ್, ಸಿದ್ದರಾಜು, ವನಿತಾ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬಸವರಾಜು, ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಮನ್ ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಶಿವಲಿಂಗಯ್ಯ, ತಾಪಂ ಇಓ ರಾಮಲಿಂಗಯ್ಯ, ಸಹಾಯಕ ನಿರ್ದೇಶಕ ಗೋವಿಂದ್, ಕಾಂಗ್ರೆಸ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ, ಮುಖಂಡರಾದ ಎಂ.ಡಿ.ಮಹಾಲಿಂಗಯ್ಯ, ಕೆ.ಎಂ.ರವಿ, ಅಜ್ಜಹಳ್ಳಿ ರಾಮಕೃಷ್ಣ ಮತ್ತಿತರರು ಇದ್ದರು.

ಬಹುಮಾನ ಪಡೆದ ರಾಸುಗಳು ಹಾಗೂ ಟಗರುಗಳ ವಿವರ:
ಚಾಂಪಿನ್ ರಾಸುಗಳು: ಸುರೇಶ್ ನೀಲಕಂಠನಹಳ್ಳಿ ಮದ್ದೂರು ತಾಲೂಕು (ಪ್ರಥಮ ಚಾಂಪಿಯನ್), ಶ್ರೀನಿವಾಸ್ ತೊರೆಶೆಟ್ಟಿಹಳ್ಳಿ ಮದ್ದೂರು ತಾಲೂಕು (ದ್ವಿತೀಯ ಚಾಂಪಿಯನ್), ಬಿ.ಟಿ.ಸುನೀಲ್ ಕುಮಾರ್ ಬಿದರಕೋಟೆ ಮದ್ದೂರು ತಾಲೂಕು ತೃತೀಯ ಚಾಂಪಿಯನ್.
ಎರಡು ಹಲ್ಲಿನ ಜೋಡಿ ಎತ್ತುಗಳು
ಬೈರೇಗೌಡ ಮಾಯಪ್ಪನಹಳ್ಳಿ ಮಂಡ್ಯ (ಪ್ರ), ಅಂಜದ್ಪಾಷ ದುಬ್ಬಗಟ್ಟಿ ಮಾಗಡಿ (ದ್ವಿ), ಚಂದ್ರ ನಾಗಮಂಗಲ (ತೃ).
ಬಾಯಿ ಗೂಡಿನ ಜೋಡಿ ಎತ್ತುಗಳು:
ಸಂದೀಪ್ ಗೌಡ ತಿಂಡ್ಳು ಆನೇಕಲ್ (ಪ್ರ), ಮಂಜುನಾಥ್ ಕೆ.ದೊಮ್ಮಸಂದ್ರ ಬೆಂಗಳೂರು (ದ್ವಿ), ಕಿರಣ್ ಮಾರಸಿಂಗನಹಳ್ಳಿ (ತೃ).
ಆರು ಹಲ್ಲಿನ ಜೋಡಿ ಎತ್ತುಗಳು:
ಆದರ್ಶ ತಗ್ಗಹಳ್ಳಿ (ಪ್ರ), ಎಂ.ಎಸ್.ಕಿರಣ್ ಮಂಡ್ಯ ಗಾಂಧಿನಗರ (ದ್ವಿ), ಎಚ್.ಎನ್. ಉಮೇಶ್ ಹೊಳಲು ಮಂಡ್ಯ (ತೃ).
ನಾಲ್ಕು ಹಲ್ಲಿನ ಜೋಡಿ ಎತ್ತುಗಳು:
ಸಂದೀಪ್ ಇರಿಸೇವೆ ಚನ್ನರಾಯಪಟ್ಟಣ (ಪ್ರ), ಸುನಿಲ್ ಸಾತನೂತು ಮಂಡ್ಯ (ದ್ವಿ), ಜಿತೇಂದ್ರ ಹೆಬ್ಬೂರು ತುಮಕೂರು ಜಿಲ್ಲೆ (ತೃ).
ಬಾಯಿ ಗೂಡಿನ ಜೋಡಿ ಹಸುಗಳು:
ಅರಸೇಗೌಡ ಬನ್ನೂರು ಮೈಸೂರು, ಚನ್ನೇಗೌಡ ಮದ್ದೂರು (ದ್ವಿ), ಪ್ರೀತುಕುಮಾರ್ ಕಿರಗಂದೂರು ಮಂಡ್ಯ (ತೃ).
ಹಾಲು ಹಲ್ಲಿನ ಜೋಡಿ ಎತ್ತುಗಳು:
ಸಿದ್ದೇಗೌಡ ಯಲಾದಹಳ್ಳಿ ಮದ್ದೂರು (ಪ್ರ), ಮನು ಕಲ್ಲಹಳ್ಳಿ ಮಂಡ್ಯ (ದ್ವಿ), ನಿರಂಜನ್ ಗೋಪಾಲಪುರ ಮಂಡ್ಯ (ತೃ).
ಬೀಜದ ಹೋರಿ:
ರೇವಣ್ಣ ಅಂಜನಾಪುರ ರಾಮನಗರ ತಾಲೂಕು (ಪ್ರ), ಸಿ.ಡಿ.ಅರಕೇಶ್ ಚನ್ನಪ್ಪನದೊಡ್ಡಿ ಮಂಡ್ಯ (ದ್ವಿ) ಎನ್.ಎಲ್. ಬಲರಾಜು ನಗರಕೆರೆ ಮದ್ದೂರು (ತೃ)
ಟಗರು: ಪ್ರವೀಣ್ಕುಮಾರ್ ನಗರಕೆರೆ (ಪ್ರ), ಸೋಮೇಶ್ ನೀಲಕಂಠನಹಳ್ಳಿ (ದ್ವಿ), ನಿರಂಜನ್ ಚಾಮನಹಳ್ಳಿ (ತೃ).
ಮೊದಲ ಚಾಂಪಿಯನ್ಗೆ 2 ಲಕ್ಷ ರೂ.ನಗದು ಟ್ರೋಪಿ, ಎರಡೇ ಚಾಂಪಿಯನ್ಗೆ 1 ಲಕ್ಷ ರೂ. ನಗದು ಟ್ರೋಪಿ, ಮೂರನೇ ಚಾಂಪಿಯನ್ಗೆ 50 ಸಾವಿರ ನಗದು ಟ್ರೋಪಿ ಹಾಗೂ ಉಳಿದ ಎಲ್ಲಾ ರೀತಿ ಎತ್ತುಗಳು, ಜೋಡಿ ಹಸುಗಳು ಹಾಗೂ ಟಗರು ಸೇರಿ 36 ಬಹುಮಾನಗಳು ತಲಾ 10 ಸಾವಿರ ರೂಗಳಂತೆ ನಗದು ಬಹುಮಾನವನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು.
ವರದಿ : ಗಿರೀಶ್ ರಾಜ್, ಮಂಡ್ಯ








