ಚಾಮರಾಜನಗರ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ನಿಧಿ ಆಸೆಗಾಗಿ ಸ್ವಂತ ತಾಯಿಯನ್ನೇ ಬಲಿ ಕೊಡಲು ಪಾಪಿ ಪುತ್ರ ಯತ್ನಿಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಹುಣ್ಣಿಮೆಯ ದಿನ ನರಬಲಿ ನೀಡಿದರೆ ನಿಧಿ ಸಿಗುವ ಆಸೆ ಹಿನ್ನೆಲೆಯಲ್ಲಿ ಪಾಪಿ ಮಗನೊಬ್ಬ 80 ವರ್ಷದ ಹೆತ್ತ ತಾಯಿಯನ್ನೇ ಬಲಿಕೊಡಲು ಮುಂದಾಗಿದ್ದಾನೆ.
ಮನೆಯಲ್ಲಿಯೇ ನಾಲ್ಕು ಅಡಿ ಗುಂಡಿ ತೆಗೆದು ನಿಂಬೆಹಣ್ಣು ಇಟ್ಟು ಮಾಟ ಮಂತ್ರ ಮಾಡಿ ಅರಿಶಿಣ, ಕುಂಕುಮ, ವಿಭೂತಿ, ಕಳಶ ಇಟ್ಟು ಕ್ಷುದ್ರ ಪೂಜೆ ಮಾಡಿದ್ದಾರೆ. ಕೊಂಡಯ್ಯನ ಮಾದಶೆಟ್ಟಿ ಎಂಬ ವ್ಯಕ್ತಿಯಿಂದ ಈ ಒಂದು ಕೃತ್ಯ ನಡೆದಿದೆ. ಕಣ್ಣು ಕಾಣದೆ ಇರೋ ಕಿವಿ ಕೇಳದೆ ಇರೋ ತಾಯಿಯನ್ನು ಬಲಿಕೊಡಲು ಮುಂದಾಗಿದ್ದಾನೆ. ಇಂದು ಹುಣ್ಣಿಮೆ ಆಗಿದ್ದರಿಂದ ತಾಯನ್ನು ಬಲಿಕುಟರೆ ನಿಧಿ ಸಿಗುತ್ತದೆ ಎನ್ನುವ ಆಸೆಗಾಗಿ ಹೆತ್ತಿರುವ ತಾಯನೇ ಬಲಿಕೊಡುವುದಕ್ಕೆ ಈ ರೀತಿ ಮಾಟ ಮಂತ್ರ ಮಾಡಿ ಬಲಿಕೊಡಲು ಮುಂದಾಗಿದ್ದಾನೆ.








