ಬೆಂಗಳೂರು : ಕಳೆದ ಕೆಲವು ತಿಂಗಳಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ, ಕೈದಿಗಳು ಮೊಬೈಲ್ ಬಳಕೆ ಮಾಡುವುದು ಸೇವನೆ ಸಿಗರೇಟ್ ಸೇರದಂತೆ ಇತರೆ ಅಕ್ರಮ ಚಟುವಟಿಕೆಗಳು ನಡೆಸುತ್ತಿದ್ದು ಬೆಳಕಿಗೆ ಬಂದಿದ್ದು, ಅಲ್ಲದೆ ಪೊಲೀಸರು ದಾಳಿ ಮಾಡಿ ಪ್ರಕರಣಗಳನ್ನು ದಾಖಲು ಮಾಡಿದ್ದರು.
ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಕೈದಿ ಒಬ್ಬ ಮೊಬೈಲ್ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಜೈಲಲ್ಲಿ ಇದ್ದುಕೊಂಡೆ ವಿಚಾರಣಾ ದೀನ ಕೈದಿ ಒಬ್ಬ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಸೆಲ್ ನಲ್ಲಿ ಕುಳಿತು ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಮತ್ತೆ ಮೊಬೈಲ್ ಬಳಕೆ ಆಗಿದೆ ವಿಚಾರಣಾಧೀನ ಕೈದಿ ಅಕ್ಬರ್ ನಿಂದ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ.
ಏಪ್ರಿಲ್ 9ರಂದು ಇನ್ಸ್ಟಾಗ್ರಾಮ್ ನಲ್ಲಿ ತನ್ನ ಪತಿಯ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವಂತಹ ವಿಡಿಯೋವನ್ನು ಪತ್ನಿ ಶೇರ್ ಮಾಡಿದ್ದಾಳೆ. ಆದರೆ ಅಕ್ಬರ್ ಏಪ್ರಿಲ್ 28ರಂದು ಜೈಲಿನಿಂದ ರಿಲೀಸ್ ಆಗಿದ್ದಾನೆ. ಆದರೆ ವಿಚಾರಣೆಯನ್ನು ಎದುರಿಸುತ್ತಿದ್ದ ಜೈಲಿನಲ್ಲಿದ್ದಾಗಲೇ ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮಾಡಿದ್ದಾನೆ. ಅಂದರೆ ಈತನಿಗೆ ಮೊಬೈಲ್ ಕೊಟ್ಟಿದ್ದು ಯಾರು ಎನ್ನುವ ಪ್ರಶ್ನೆ ಉದ್ಭವಿಸಿದೆ.








