ಹಾಸನ : ಪ್ರೇಯಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ಇದೀಗ ಜವಾವಧಿ ಶಿಕ್ಷೆ ವಿಧಿಸಿ ಹಾಸನದ 3ನೇ ಹೆಚ್ಚುವರಿ ಸೇಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ಹುಟ್ಟುಹಬ್ಬ ಆಚರಣೆಗೆ ಬಂದಿದ್ದ ಪ್ರೇಯಸಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ್ದು ಅಲ್ಲದೇ ಉಸಿರುಗಟ್ಟಿಸಿ ಕೊಲೆ ಮಾಡಿದ ಪಾಪಿ
ಕಳೆದ 2018ರ ಏಪ್ರಿಲ್ 22ರಂದು ಪ್ರಿಯಕರ ಪ್ರವೀಣ್ (29) ಎಂಬಾತ ಈ ಒಂದು ಕೃತ್ಯ ಎಸಗಿದ್ದ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು. ಪ್ರಕರಣದ A1ಹಾಡ್ಲಗಿರಿಯ ಪ್ರವೀಣ್ ಗೆ ಇದೀಗ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದ್ದು ಸಾಕ್ಷಿ ನಶಾ ಆರೋಪದಲ್ಲಿ A2 ತಿಮ್ಮಣ್ಣನಿಗೆ ಎರಡು ವರ್ಷ ಶಿಕ್ಷೆ ವಿಧಿಸಿದೆ. ಪ್ರಕರಣದ ತನಿಖೆ ನಡೆಸಿ ಇನ್ಸ್ಪೆಕ್ಟರ್ ಪಿಕೆ ರಾಜು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸದ್ದರು. ಏಪ್ರಿಲ್ 27 ರಂದು ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.








