ಧಾರವಾಡ : ಧಾರವಾಡದ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ ಮೃತದೇಹ ಒಂದು ಪತ್ತೆಯಾಗಿದೆ. ಟಿಬೆಟಿಯನ್ ಮೂಲದ ಸನ್ಯಾಸಿಯ ಥಾಶಿದೊಂಡು (39) ಎನ್ನುವ ಸನ್ಯಾಸಿಯ ಮೃತದೇಹ ಪತ್ತೆಯಾಗಿದೆ. ಇವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ನಿವಾಸಿಯಾಗಿದ್ದಾರೆ.
ಇನ್ನು ಮೃತ ಥಾಶಿದೊಂಡು ಅವರ ಮುಖದ ಮೇಲೆ ಗಾಯಗಳಾಗಿರುವ ಹಿನ್ನೆಲೆಯಲ್ಲಿ ಕೊಲೆ ಮಾಡಿ ಬಿಸಾಕಿರುವ ಶಂಕೆ ವ್ಯಕ್ತವಾಗುತ್ತಿದೆ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.








