Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಸ್ತಿ ಖರೀದಿಗೂ ಮುನ್ನ ಎಚ್ಚರ: ನಿಮ್ಮ ಸೈಟ್ ಯಾವ ವರ್ಗಕ್ಕೆ ಸೇರಿದೆ? ಇಲ್ಲಿದೆ ಮಹತ್ವದ ಮಾಹಿತಿ

30/04/2026 2:04 PM

BREAKING : ಗಂಗಾವತಿಯಲ್ಲಿ ಬಿಜೆಪಿ ಮುಖಂಡನ ಕೊಲೆ ಕೇಸ್ : 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

30/04/2026 2:03 PM

ALERT : ಚೆಕ್ ಬರೆಯುವಾಗ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಚ್ಚರ.!

30/04/2026 1:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಗಂಗಾವತಿಯಲ್ಲಿ ಬಿಜೆಪಿ ಮುಖಂಡನ ಕೊಲೆ ಕೇಸ್ : 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು
KARNATAKA

BREAKING : ಗಂಗಾವತಿಯಲ್ಲಿ ಬಿಜೆಪಿ ಮುಖಂಡನ ಕೊಲೆ ಕೇಸ್ : 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

By kannadanewsnow0530/04/2026 2:03 PM

ಕೊಪ್ಪಳ : ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ಇಂದು ಶಿಕ್ಷೆ ತೀರ್ಪು ಪ್ರಕಟಿಸಿದರು. ರವಿ, ಮೈಲಾರಿ, ಧನರಾಜ್, ಭೀಮಾ, ಸಲೀಂ ಮತ್ತು ಗಂಗಾಧರ ಗೌಳಿ ಶಿಕ್ಷೆಗೊಳಗಾದ ಅಪರಾಧಿಗಳು.

ಕಳೆದ ಕೆಲವು ವರ್ಷಗಳ ಹಿಂದೆ ನಗರದ ಸಾರ್ವಜನಿಕ ಪ್ರದೇಶದಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅವರ ಭೀಕರ ಕೊಲೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕೊಪ್ಪಳದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈ ತೀರ್ಪು ನೀಡಿದೆ. ಅಪರಾಧದ ತೀವ್ರತೆ ಮತ್ತು ಕ್ರೌರ್ಯವನ್ನು ಪರಿಗಣಿಸಿದ ನ್ಯಾಯಾಧೀಶರು, ಇದು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಅಭಿಪ್ರಾಯಪಟ್ಟು ಆರು ಜನರಿಗೆ ಮರಣದಂಡನೆ ವಿಧಿಸಿದ್ದಾರೆ.

ಗಂಗಾವತಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಲ್ಲದೇ ಮಾರುತಿ ಚಿಕಿತ್ಸೆಗೆ ಕೊನೆಯವರೆಗೂ ಬೆಂಬಲವಾಗಿ ನಿಂತಿದ್ದ ಎಂಬ ಕಾರಣಕ್ಕೆ ವೆಂಕಟೇಶನನ್ನು ಕೊಲೆ ಮಾಡಿದ್ದೀರಿ. ಸಭ್ಯ ನಾಗರಿಕ ಸಮಾಜದ ಇಂತಹ ಕೃತ್ಯಗಳನ್ನು ಒಪ್ಪುವುದಿಲ್ಲ. ಅಪರಾಧ ಕೃತ್ಯಗಳ ಹಿನ್ನೆಲೆ ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು.

ವೆಂಕಟೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಪ್ರಕರಣ ಸಂಬಂಧ ಆರು ಜನ ಅರೋಪಿಗಳನ್ನು ದೋಷಿ ಎಂದು ಈ ಹಿಂದೆ ಕೋರ್ಟ್ ತೀರ್ಪು ನೀಡಿ, ಇಂದಿಗೆ ಶಿಕ್ಷೆ ಪ್ರಮಾಣ ಕಾಯ್ದಿರಿಸಿತ್ತು. ಅಂತೆಯೇ ಇಂದು ನ್ಯಾಯಾಧೀಶರು, ಆರು ಜನರಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ. ಅಪರಾಧಿಗಳು ಅಗತ್ಯವಿದ್ದರೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ನ್ಯಾಯಾಧೀಶರು ಸಲಹೆ ತಿಳಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕಿ ಎಸ್. ನಾಗಲಕ್ಷ್ಮಿ ಮಾಹಿತಿ ನೀಡಿದರು.

Share. Facebook Twitter LinkedIn WhatsApp Email

Related Posts

ಆಸ್ತಿ ಖರೀದಿಗೂ ಮುನ್ನ ಎಚ್ಚರ: ನಿಮ್ಮ ಸೈಟ್ ಯಾವ ವರ್ಗಕ್ಕೆ ಸೇರಿದೆ? ಇಲ್ಲಿದೆ ಮಹತ್ವದ ಮಾಹಿತಿ

30/04/2026 2:04 PM2 Mins Read

ALERT : ಚೆಕ್ ಬರೆಯುವಾಗ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಚ್ಚರ.!

30/04/2026 1:46 PM2 Mins Read

ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಭೇಟಿ

30/04/2026 1:31 PM1 Min Read
Recent News

ಆಸ್ತಿ ಖರೀದಿಗೂ ಮುನ್ನ ಎಚ್ಚರ: ನಿಮ್ಮ ಸೈಟ್ ಯಾವ ವರ್ಗಕ್ಕೆ ಸೇರಿದೆ? ಇಲ್ಲಿದೆ ಮಹತ್ವದ ಮಾಹಿತಿ

30/04/2026 2:04 PM

BREAKING : ಗಂಗಾವತಿಯಲ್ಲಿ ಬಿಜೆಪಿ ಮುಖಂಡನ ಕೊಲೆ ಕೇಸ್ : 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

30/04/2026 2:03 PM

ALERT : ಚೆಕ್ ಬರೆಯುವಾಗ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಚ್ಚರ.!

30/04/2026 1:46 PM

ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಭೇಟಿ

30/04/2026 1:31 PM
State News
KARNATAKA

ಆಸ್ತಿ ಖರೀದಿಗೂ ಮುನ್ನ ಎಚ್ಚರ: ನಿಮ್ಮ ಸೈಟ್ ಯಾವ ವರ್ಗಕ್ಕೆ ಸೇರಿದೆ? ಇಲ್ಲಿದೆ ಮಹತ್ವದ ಮಾಹಿತಿ

By kannadanewsnow5730/04/2026 2:04 PM KARNATAKA 2 Mins Read

ಬೆಂಗಳೂರು : ಆಸ್ತಿ ಅಥವಾ ನಿವೇಶನವನ್ನು ಖರೀದಿಸುವುದು ಪ್ರತಿಯೊಬ್ಬರ ಜೀವನದ ದೊಡ್ಡ ಕನಸು. ಆದರೆ, ದಾಖಲೆಗಳ ಸರಿಯಾದ ಜ್ಞಾನವಿಲ್ಲದೆ ಆಸ್ತಿ…

BREAKING : ಗಂಗಾವತಿಯಲ್ಲಿ ಬಿಜೆಪಿ ಮುಖಂಡನ ಕೊಲೆ ಕೇಸ್ : 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು

30/04/2026 2:03 PM

ALERT : ಚೆಕ್ ಬರೆಯುವಾಗ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗಬಹುದು ಎಚ್ಚರ.!

30/04/2026 1:46 PM

ಬೌರಿಂಗ್ ಆಸ್ಪತ್ರೆ ಕಂಪೌಂಡ್ ಕುಸಿದು 7 ಜನ ಸಾವು ಕೇಸ್ : ಸ್ಥಳಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ್ ಭೇಟಿ

30/04/2026 1:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.