Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆಯಿಂದ `ಗ್ಯಾಸ್ ಸಿಲಿಂಡರ್’ ಬುಕಿಂಗ್‌ ಗೆ ಹೊಸ ರೂಲ್ಸ್ ಜಾರಿ : ಈ 5 ನಿಯಮಗಳ ಪಾಲನೆ ಕಡ್ಡಾಯ.!

30/04/2026 8:17 AM

‘ಪಾಕಿಸ್ತಾನದ ಮಧ್ಯಸ್ಥಿಕೆ ಅಗತ್ಯವಿಲ್ಲ’: ಇರಾನ್ ಜೊತೆ ನೇರ ಫೋನ್ ಮಾತುಕತೆಗೆ ಟ್ರಂಪ್ ಒತ್ತು; ರಾಜತಾಂತ್ರಿಕ ಹಾದಿಯಲ್ಲಿ ಅಮೆರಿಕದ ಹೊಸ ನಡೆ!

30/04/2026 8:17 AM

BIG NEWS : ರಾಜ್ಯದಲ್ಲಿ ಇನ್ನು ‘ಕಾಗದರಹಿತ’ ಆಸ್ತಿ ನೋಂದಣಿ: ಇಂದು ಪ್ರಾಯೋಗಿಕ ಚಾಲನೆ.!

30/04/2026 8:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಇನ್ನು ‘ಕಾಗದರಹಿತ’ ಆಸ್ತಿ ನೋಂದಣಿ: ಇಂದು ಪ್ರಾಯೋಗಿಕ ಚಾಲನೆ.!
KARNATAKA

BIG NEWS : ರಾಜ್ಯದಲ್ಲಿ ಇನ್ನು ‘ಕಾಗದರಹಿತ’ ಆಸ್ತಿ ನೋಂದಣಿ: ಇಂದು ಪ್ರಾಯೋಗಿಕ ಚಾಲನೆ.!

By kannadanewsnow5730/04/2026 8:10 AM

ಬೆಂಗಳೂರು: ರಾಜ್ಯದ ಜನತೆಗೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯೊಂದು ಎದುರಾಗಲಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇನ್ನು ಮುಂದೆ ದಸ್ತಾವೇಜುಗಳ ನೋಂದಣಿ ಸಂಪೂರ್ಣವಾಗಿ ‘ಕಾಗದರಹಿತ’ (Paperless) ವಾಗಲಿದ್ದು, ಈ ಮಹತ್ವದ ಯೋಜನೆಗೆ ಇಂದು ಚಾಮರಾಜನಗರದಲ್ಲಿ ಚಾಲನೆ ಸಿಗಲಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾವೇರಿ 2.0 ತಂತ್ರಾಂಶವನ್ನು ಈ ನಿಟ್ಟಿನಲ್ಲಿ ಅಪ್‌ಡೇಟ್ ಮಾಡಿದ್ದು, ಚಾಮರಾಜನಗರ ಜಿಲ್ಲೆಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಗುರುವಾರದಿಂದ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಿದ ಬಳಿಕ ರಾಜ್ಯಾದ್ಯಂತ ಹಂತ ಹಂತವಾಗಿ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ಹೇಗಿರಲಿದೆ ಹೊಸ ವ್ಯವಸ್ಥೆ?
ಈ ಹೊಸ ಕ್ರಮದಡಿ, ಆಸ್ತಿ ನೋಂದಣಿಯಾದ ನಂತರ ಭೌತಿಕವಾಗಿ ಯಾವುದೇ ದಾಖಲೆ ಪತ್ರಗಳನ್ನು ಕೈಗೆ ನೀಡುವುದಿಲ್ಲ. ಬದಲಾಗಿ ಎಲ್ಲವೂ ಡಿಜಿಟಲ್ ರೂಪದಲ್ಲಿ ಇರಲಿದೆ.

ಡಿಜಿಟಲ್ ಶೇಖರಣೆ: ನೋಂದಾಯಿತ ದಾಖಲೆಗಳು ಸ್ವಯಂಚಾಲಿತವಾಗಿ ಕಂದಾಯ ಇಲಾಖೆಯ ‘ಕರ್ನಾಟಕ ನೋಂದಾಯಿತ ದಾಖಲೆ ಸಂಗ್ರಹಾಲಯ’ ಮತ್ತು ಡಿಜಿ ಲಾಕರ್ (DigiLocker) ನಲ್ಲಿ ಸಂಗ್ರಹವಾಗಲಿವೆ.

ಲಾಗಿನ್ ಐಡಿ ಮೂಲಕ ಲಭ್ಯ: ಗ್ರಾಹಕರಿಗೆ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ನೀಡಲಾಗುವುದು. ಯಾವುದೇ ವ್ಯವಹಾರವಿದ್ದರೂ ಇದರ ಮೂಲಕವೇ ನಡೆಸಬೇಕಾಗುತ್ತದೆ.

ವಿಶಿಷ್ಟ ಸಂಖ್ಯೆ: ದಾಖಲೆಗಳನ್ನು ಡೌನ್‌ಲೋಡ್ ಮಾಡಲು ಅಥವಾ ಮುದ್ರಿಸಲು ವಿಶಿಷ್ಟ ದಾಖಲೆ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಡಿಜಿಟಲ್ ದಾಖಲೆಯು ಕಾನೂನುಬದ್ಧವಾಗಿ ಮಾನ್ಯತೆ ಹೊಂದಿರುತ್ತದೆ.

ನೋಂದಣಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಆನ್‌ಲೈನ್ ಅಪ್‌ಲೋಡ್: ಮೊದಲು ಕಾವೇರಿ 2.0 ಸಿಟಿಜನ್ ಲಾಗಿನ್‌ನಲ್ಲಿ ದಸ್ತಾವೇಜುಗಳನ್ನು ಅಪ್‌ಲೋಡ್ ಮಾಡಬೇಕು.

ಅಧಿಕಾರಿಗಳ ಪರಿಶೀಲನೆ: ಸಬ್ ರಿಜಿಸ್ಟ್ರಾರ್ ದಾಖಲೆಗಳನ್ನು ಪರಿಶೀಲಿಸಿ ಸರಿ ಇದ್ದಲ್ಲಿ ಶುಲ್ಕ ಪಾವತಿಗೆ ಅನುಮೋದನೆ ನೀಡುತ್ತಾರೆ. ಏನಾದರೂ ದೋಷವಿದ್ದರೆ ವಾಪಸ್ ಕಳುಹಿಸುತ್ತಾರೆ.

ಡಿಜಿಟಲ್ ಸಹಿ: ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿದ ನಂತರ, ಪಕ್ಷಕಾರರು ಆಧಾರ್ ಆಧಾರಿತ ಡಿಜಿಟಲ್ ಸಿಗ್ನೇಚರ್ (E-Sign) ಮೂಲಕ ಸಹಿ ಮಾಡಬೇಕು.

ಅಂತಿಮ ಹಂತ: ಕಚೇರಿಯಲ್ಲಿ ಪಕ್ಷಕಾರರು ಮತ್ತು ಸಾಕ್ಷಿಗಳ ಫೋಟೋ ಹಾಗೂ ಬೆರಳಚ್ಚು ಗುರುತನ್ನು ಡಿಜಿಟಲ್ ಯಂತ್ರದ ಮೂಲಕ ಪಡೆಯಲಾಗುತ್ತದೆ. ಅಂತಿಮವಾಗಿ ಸಬ್ ರಿಜಿಸ್ಟ್ರಾರ್ ಕೂಡ ಡಿಜಿಟಲ್ ಸಹಿ ಮಾಡುವ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.

ಮುಖ್ಯ ಅಂಶ: ಕಂದಾಯ ಇಲಾಖೆಯ ಡೇಟಾಬೇಸ್‌ನಲ್ಲಿರುವ ಮಾಹಿತಿಯೇ ಇನ್ನು ಮುಂದೆ ‘ಅಸಲಿ ದಾಖಲೆ’ ಎಂದು ಪರಿಗಣಿತವಾಗುತ್ತದೆ. ಸಾರ್ವಜನಿಕರು ಅಗತ್ಯವಿದ್ದಾಗ ಅಧಿಕೃತವಾಗಿ ಸರ್ಟಿಫೈಡ್ ಕಾಪಿಗಳನ್ನು ಪಡೆದುಕೊಳ್ಳಬಹುದು.

BIG NEWS: 'Paperless' property registration in the state: Trial run today!
Share. Facebook Twitter LinkedIn WhatsApp Email

Related Posts

ಖಾಸಗಿ ಶಾಲೆಯ ಸಿಬ್ಬಂದಿಗಳು ಜನಗಣತಿಯಲ್ಲಿ ಭಾಗಿಯಾಗುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ನಿರ್ದೇಶನ

30/04/2026 8:01 AM2 Mins Read

PPF v/s NPS: ಹೆಚ್ಚಿನ ಆದಾಯಕ್ಕಾಗಿ ನೀವು ಯಾವುದರಲ್ಲಿ ಹೂಡಿಕೆ ಮಾಡುವುದು ಬೆಸ್ಟ್? ಇಲ್ಲಿದೆ ಮಾಹಿತಿ

30/04/2026 7:51 AM2 Mins Read

BREAKING : ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ.!

30/04/2026 7:23 AM1 Min Read
Recent News

ನಾಳೆಯಿಂದ `ಗ್ಯಾಸ್ ಸಿಲಿಂಡರ್’ ಬುಕಿಂಗ್‌ ಗೆ ಹೊಸ ರೂಲ್ಸ್ ಜಾರಿ : ಈ 5 ನಿಯಮಗಳ ಪಾಲನೆ ಕಡ್ಡಾಯ.!

30/04/2026 8:17 AM

‘ಪಾಕಿಸ್ತಾನದ ಮಧ್ಯಸ್ಥಿಕೆ ಅಗತ್ಯವಿಲ್ಲ’: ಇರಾನ್ ಜೊತೆ ನೇರ ಫೋನ್ ಮಾತುಕತೆಗೆ ಟ್ರಂಪ್ ಒತ್ತು; ರಾಜತಾಂತ್ರಿಕ ಹಾದಿಯಲ್ಲಿ ಅಮೆರಿಕದ ಹೊಸ ನಡೆ!

30/04/2026 8:17 AM

BIG NEWS : ರಾಜ್ಯದಲ್ಲಿ ಇನ್ನು ‘ಕಾಗದರಹಿತ’ ಆಸ್ತಿ ನೋಂದಣಿ: ಇಂದು ಪ್ರಾಯೋಗಿಕ ಚಾಲನೆ.!

30/04/2026 8:10 AM

ಬಾಯಾರಿಕೆ ಎಂದು 5 ಲೀಟರ್ ನೀರು ಕುಡಿದ ವ್ಯಕ್ತಿ ಐಸಿಯು ಪಾಲು! ಅತಿಯಾದ ನೀರು ಜೀವಕ್ಕೆ ಕಂಟಕವಾಗಿದ್ದು ಹೇಗೆ? ವೈದ್ಯರ ವಿವರಣೆ

30/04/2026 8:09 AM
State News
KARNATAKA

BIG NEWS : ರಾಜ್ಯದಲ್ಲಿ ಇನ್ನು ‘ಕಾಗದರಹಿತ’ ಆಸ್ತಿ ನೋಂದಣಿ: ಇಂದು ಪ್ರಾಯೋಗಿಕ ಚಾಲನೆ.!

By kannadanewsnow5730/04/2026 8:10 AM KARNATAKA 2 Mins Read

ಬೆಂಗಳೂರು: ರಾಜ್ಯದ ಜನತೆಗೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯೊಂದು ಎದುರಾಗಲಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇನ್ನು ಮುಂದೆ ದಸ್ತಾವೇಜುಗಳ…

ಖಾಸಗಿ ಶಾಲೆಯ ಸಿಬ್ಬಂದಿಗಳು ಜನಗಣತಿಯಲ್ಲಿ ಭಾಗಿಯಾಗುವುದು ಕಡ್ಡಾಯ : ಹೈಕೋರ್ಟ್ ಮಹತ್ವದ ನಿರ್ದೇಶನ

30/04/2026 8:01 AM

PPF v/s NPS: ಹೆಚ್ಚಿನ ಆದಾಯಕ್ಕಾಗಿ ನೀವು ಯಾವುದರಲ್ಲಿ ಹೂಡಿಕೆ ಮಾಡುವುದು ಬೆಸ್ಟ್? ಇಲ್ಲಿದೆ ಮಾಹಿತಿ

30/04/2026 7:51 AM

BREAKING : ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ.!

30/04/2026 7:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.