ಕೊಪ್ಪಳ : ಕೊಪ್ಪಳದಲ್ಲಿ ಆರ್ಟಿಓ ಕಚೇರಿ ಸಿಬ್ಬಂದಿ ಒಬ್ಬ 21000 ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ವರದಿಯಾಗಿದೆ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ SDA ರಂಜಿತ್ ಬಿದ್ದಿದ್ದಾನೆ. ಶೋರೂಮ್ ಟ್ರೇಡ್ ಲೈಸೆನ್ಸ್ ನೀಡಲು ರಂಜಿತ್ ಲಂಚಕ್ಕೆ ಬೇಡಿಕೆ ಇಟ್ಟಿದ್ದ. 21000 ಲಂಚ ಪಡೆಯುವಾಗ SDA ರಂಜಿತ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ನಯಿಮ್ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಶೋರೂಮ್ ಓಪನ್ ಮಾಡುವುದಕ್ಕೆ ನಯಿಮ್ ಅರ್ಜಿ ಸಲ್ಲಿಸಿದ್ದ. ಕುಷ್ಟಗಿ, ಕಾರಟಗಿ ಮತ್ತು ಹುಲಿಗಿಯಲ್ಲಿ ಶೋರೂಮ್ ಪರವಾಗಿ ಅರ್ಜಿ ಸಲ್ಲಿಸಿದ್ದ. ರಾಯಚೂರು ಲೋಕಾಯುಕ್ತ ಡಿವೈಎಸ್ಪಿ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆದಿದೆ.








