ಚಾಮರಾಜನಗರ : ಮದುವೆ ಮನೆಯಲ್ಲಿ ಚಿನ್ನದ ವಿಚಾರವಾಗಿ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಆರ್‌ಎಸ್ ಫಂಕ್ಷನ್ ಹಾಲ್ ನಲ್ಲಿ ಘಟನೆ ನಡೆದಿದೆ ಇಂದು ಮುದಾಸಿರ ಜೊತೆಗೆ ಗುಲ್ರಾಜ್ ಭಾನು ವಿವಾಹ ನಿಶ್ಚಯ ಆಗಿತ್ತು. ಆದರೆ ನಿನ್ನೆ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ಗಲಾಟೆ ಶುರುವಾಗಿದೆ ಮಾತಿಗೆ ಮಾತು ಬೆಳೆದು ಚಾಕುವಿನಿಂದ ವಧುವಿನ ಸಂಬಂಧಿಕರು ಇರಿದಿದ್ದಾರೆ.
ಮಾತುಕತೆಯಂತೆ ವರನಿಗೆ ಚಿನ್ನಾಭರಣ ವನ್ನು ವಧುವಿನ ಕುಟುಂಬಸ್ಥರು ನೀಡಿದ್ದರು. ಆದರೆ ವಧುವಿಗೆ ನೀಡಬೇಕಿದೆ ಚಿನ್ನಾಭರಣ ವರನ ಕಡೆಯವರು ನೀಡಿಲ್ಲ ಹಾಗಾಗಿ ವಧು ಮತ್ತು ವರನ ಕುಟುಂಬಸ್ಥರ ನಡುವೆ ಗಲಾಟೆ ಶುರುವಾಗಿದೆ. ವರನ ಸಂಬಂಧಿಗಳಾದ ಸಮೀರ್ ಅಯಾಜ್, ಶೋಯಬ್ ಮೇಲೆ ಹಲ್ಲೆ ನಡೆಸಲಾಗಿದೆ. ರೊಚ್ಚಿಗೆದ್ದ ವರನ ಸಂಬಂಧಿಗಳಿಂದ ಮಧುವಿನ ಸಂಬಂಧಿ ಮೇಲು ಹಲ್ಲೆ ನಡೆದಿದೆ.
ಫೈರೋಜ್ ಖಾನ್, ಅಬ್ದುಲ್ ವಾಹಿದ್, ಅಬ್ದುಲ್ ಆರಿಫ್ ಮೇಲೆ ಹಲ್ಲೆ ನಡೆದಿದೆ. ಸದ್ಯ ಗಾಯಾಳುಗಳಿಗೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ. ಘಟನೆ ಕುಡಿತಂತೆ, ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








