ನವದೆಹಲಿ: ಆದಾಯ ತೆರಿಗೆ ಇಲಾಖೆಯು ಪ್ಯಾನ್ (PAN) ಕಾರ್ಡ್ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದ್ದು, ಇದು 2026ರ ಮೇ 1 ರಿಂದ ಅನ್ವಯವಾಗಲಿದೆ. ನೀವಿನ್ನು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ ದೊಡ್ಡ ಮಟ್ಟದ ತೊಂದರೆ ಎದುರಿಸಬೇಕಾಗಬಹುದು.
ಆಧಾರ್-ಪ್ಯಾನ್ ಲಿಂಕ್ ಕಡ್ಡಾಯ: ಮೇ 1 ರೊಳಗೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯಗೊಳ್ಳುವ ಸಾಧ್ಯತೆಯಿದೆ.
ಭಾರೀ ದಂಡದ ಎಚ್ಚರಿಕೆ: ನಿಗದಿತ ಸಮಯದೊಳಗೆ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ದಂಡ ಪಾವತಿಸಬೇಕಾಗಬಹುದು. ಅಲ್ಲದೆ, ಕಾರ್ಡ್ ನಿಷ್ಕ್ರಿಯಗೊಂಡರೆ ಬ್ಯಾಂಕಿಂಗ್ ಮತ್ತು ತೆರಿಗೆ ಸಂಬಂಧಿತ ಕೆಲಸಗಳಿಗೆ ಅಡಚಣೆಯಾಗಲಿದೆ.
ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ: ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಬ್ಯಾಂಕ್ ಖಾತೆ ತೆರೆಯುವುದು, ಹೆಚ್ಚಿನ ಮೊತ್ತದ ಹಣದ ವಹಿವಾಟು ಮಾಡುವುದು ಅಥವಾ ಸಾಲ ಪಡೆಯುವುದು ಕಷ್ಟವಾಗಲಿದೆ.
ಆಕ್ಟಿವೇಶನ್ ಸಮಯ: ಒಮ್ಮೆ ನಿಷ್ಕ್ರಿಯಗೊಂಡ ಪ್ಯಾನ್ ಕಾರ್ಡ್ ಅನ್ನು ಮತ್ತೆ ಸಕ್ರಿಯಗೊಳಿಸಲು 30 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಆದ್ದರಿಂದ ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣ ಲಿಂಕ್ ಮಾಡುವುದು ಉತ್ತಮ ಎಂದು ತಿಳಿಸಲಾಗಿದೆ.
ಸಾರ್ವಜನಿಕರಿಗೆ ಸೂಚನೆ:
ನಿಮ್ಮ ಹಣಕಾಸಿನ ವ್ಯವಹಾರಗಳು ಸುಗಮವಾಗಿ ನಡೆಯಲು ಮತ್ತು ದಂಡದಿಂದ ಪಾರಾಗಲು ತಕ್ಷಣವೇ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಪ್ಯಾನ್-ಆಧಾರ್ ಲಿಂಕ್ ಮಾಡಿಕೊಳ್ಳಿ.








