ಮೈಸೂರು : ಕೆಲಸದ ಸಮಯದಲ್ಲಿಯೇ ಮದ್ಯ ಸೇವಿಸಿ ವೈದ್ಯನೊಬ್ಬ ರಂಪಾಟ ಮಾಡಿದ್ದಾನೆ. ಆಸ್ಪತ್ರೆ ಆವರಣದಲ್ಲಿ ನಿಂತು ಸಿಗರೇಟ್ ಸೇದಿದ್ದಾನೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನೋಬ್ಬ ಈ ರೀತಿ ರಂಪಾಟ ಮಾಡಿದ್ದಾನೆ.
ಮೈಸೂರು ತಾಲೂಕಿನ ನೆಲಹಳ್ಳಿ ಗ್ರಾಮದ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದ್ದು ಕುಡುಕ ವೈದ್ಯ ಡಾ. ಅನಿಲ್ ಕುಮಾರ್ ಮೇಲೆ ಹಲ್ಲೆ ನಡೆದಿದೆ. ಮಹಿಳಾ ಸಿಬ್ಬಂದಿಗಳಿಗೂ ಕೂಡ ಅಶ್ಲೀಲವಾಗಿ ಮೆಸೇಜ್ ಮಾಡಿ ಕಿರುಕುಳ ಕೊಡುತ್ತಿದ್ದನಂತೆ. ಕುಡುಕ ವೈದ್ಯನ ರಂಪಾಟಕ್ಕೆ ಸಾರ್ವಜನಿಕರು ಸಹ ಬೇಸತ್ತು ಹೋಗಿದ್ದಾರೆ. ಹಾಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ಸಹ ನೀಡಲಾಗಿದೆ.








