ಬೆಂಗಳೂರು : ಧಾರವಾಡದ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಮಹತ್ವದ ತೀರ್ಪು ನೀಡಿತು.
ಇದೀಗ ಈ ಒಂದು ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಶಾಸಕ ವಿನಯ್ ಕುಲಕರ್ಣಿ ಕಳೆದ ಎರಡು ದಿನಗಳ ಹಿಂದೆ ಹೈಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ ಮೇಲ್ಮನವಿಯ ಅರ್ಜಿ ವಿಚಾರಣೆ ನಡೆಯಿತು. ಕುಲಕರ್ಣಿ ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಎಸ್ ನಾಗಮುತ್ತು ಅವರು ವಾದ ಮಂಡಿಸಿದರು.
ಕೋರ್ಟ್ನಲ್ಲಿ ಸಾಕ್ಷಿ ವಿಚಾರಣೆ ನಡೆಯುವಾಗ ಜಾಮೀನಿನ ಮೇಲೆ ಇದ್ದರು 7 ಸಾಕ್ಷಿಗಳಿದ್ದಾರೆ, ಎಲ್ಲರೂ ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ ಎಂದು ವಿನಯ್ ಕುಲಕರ್ಣಿ ಪರ ಹಿರಿಯ ವಕೀಲ ಸಿವಿ ನಾಗೇಶ್ ಅವರು ವಾದ ಮಾಡಿಸಿದರು. ಇದೆ ಮೊದಲ ಬಾರಿಗೆ ವಿಚಾರಣೆಗೆ ಬರುತ್ತಿದೆಯಲ್ಲವೇ ಎಂದು ಹೈಕೋರ್ಟ್ ಪ್ರಶ್ನೆ ಮಾಡಿತು. ಪ್ರತಿವಾದಿ ಸಿಬಿಐ ವಾದ ಕೇಳಬೇಕಿದೆ ಎಂದು ಹೈಕೋರ್ಟ್ ತಿಳಿಸಿತು. ಈ ವೇಳೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರ ಕಾಲಾವಕಾಶ ಕೋರಿದ ಸಿಬಿಐ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ಇದೆ ವೇಳೆ ಸ್ವೀಕರಿಸಿತು. ವಿಚಾರಣಾ ನ್ಯಾಯಾಲಯದ ದಾಖಲೆ ಹಾಜರುಪಡಿಸಲು ಹೈಕೋರ್ಟ್ ಸೂಚಿಸಿತು.
680 ಪುಟಗಳ ತೀರ್ಪು ಇರುವುದರಿಂದ ಆಕ್ಷೇಪಣೆ ಸಮಯಕ್ಕೆ ಸಿಬಿಐ ಮನವಿ ಮಾಡಿತು. ಇದೆ ವೇಳೆ ವಿನಯ್ ಕುಲಕರ್ಣಿ ಪರ ವಕೀಲರು ಸಹ ರಜಾ ಕಾಲದ ಪೀಠದಲ್ಲಿ ವಿಚಾರಣೆಗೆ ಅನುಮತಿ ನೀಡಲು ಮನವಿ ಮಾಡಿದರು. ವಿನಯ್ ಕುಲಕರ್ಣಿ ಪರ ವಕೀಲರು ಕೋರ್ಟಿಗೆ ಮನವಿ ಮಾಡಿದರು. ರಜಾಕಾಲದ ಪೀಠದಲ್ಲಿ ಅಹವಾಲು ಮಂಡಿಸಲುಹೈಕೋರ್ಟ್ ವಿಭಾಗೀಯ ಪೀಠ ಅರ್ಜಿದಾರರಿಗೆ ಅವಕಾಶ ನೀಡಿತು. ಬಳಿಕ ಏಪ್ರಿಲ್ 30ರಂದು ವಿಚಾರಣೆಗೆ ವಿನಯ್ ಕುಲಕರ್ಣಿ ಪರ ವಕೀಲರು ಜಡ್ಜ್ ಗೆ ಮನವಿ ಮಾಡಿದರು.








