ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಅಷ್ಟೇ, ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಫ್ಲೆಕ್ಸ್ ಬ್ಯಾನರ್ ಗಳಿದ್ದ ಅಂಗಡಿಗೆ ಬೆಂಕಿ ತಗುಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಸಂಭವಿಸಿತ್ತು.ಇದೀಗ ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಗಡ ಸಂಭವಿಸಿದ್ದು, ಕಾರ್ಮಿಕರು ವಾಸವಿದ್ದ 12 ಶೆಡ್ ಗಳಿಗೆ ಬೆಂಕಿ ಬಿದ್ದಿದೆ.
ತಡರಾತ್ರಿ 2:00 ಸುಮಾರಿಗೆ ಬೆಂಗಳೂರಿನ ಸೋಮಸುಂದರ ಪಾಳ್ಯದಲ್ಲಿ ಈ ಒಂದು ಘಟನೆ ನಡೆದಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಕಾರ್ಮಿಕರು ಹೋಗಿದ್ದಾರೆ. ಹಾಗಾಗಿ ಆ ಒಂದು ಶೆಡ್ ಗಳಲ್ಲಿ ಯಾರು ಇಲ್ಲದ ಕಾರಣ ಬಹುದೊಡ್ಡ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಬಂಡೆಪಾಳ್ಯ ಠಾಣೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ.








