ನವದೆಹಲಿ: ಐಪಿಎಲ್ 2026ರ 39ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡಿ, 9 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಅನುಭವಿ ವೇಗಿಗಳಾದ ಜೋಶ್ ಹೇಜಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ನಲುಗಿದ ಡೆಲ್ಲಿ, ತನ್ನ ತವರಿನ ಮೈದಾನದಲ್ಲೇ ಹೀನಾಯ ಸೋಲು ಅನುಭವಿಸಿದೆ.
ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ಬೌಲರ್‌ಗಳ ಸ್ವಿಂಗ್ ಮತ್ತು ಸೀಮ್ ದಾಳಿಗೆ ತತ್ತರಿಸಿ ಕೇವಲ 75 ರನ್‌ಗಳಿಗೆ ಆಲ್‌ಔಟ್ ಆಯಿತು. ಇದು ಐಪಿಎಲ್ ಇತಿಹಾಸದ ಅಲ್ಪ ಮೊತ್ತಗಳಲ್ಲಿ ಒಂದಾಗಿದೆ.
ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ಡೆಲ್ಲಿ, ಐಪಿಎಲ್ ಇತಿಹಾಸದಲ್ಲೇ ಪವರ್‌ಪ್ಲೇ ಅವಧಿಯಲ್ಲಿ ಅತ್ಯಂತ ಕಡಿಮೆ ಸ್ಕೋರ್ ಮಾಡಿದ ಕೆಟ್ಟ ದಾಖಲೆ ಬರೆಯಿತು.ಆರ್‌ಸಿಬಿ ಪರ ಜೋಶ್ ಹೇಜಲ್‌ವುಡ್ (4/12) ಮತ್ತು ಭುವನೇಶ್ವರ್ ಕುಮಾರ್ (3/5) ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಭುವಿ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದು ಶುಭಾರಂಭ ನೀಡಿದರೆ, ಹೇಜಲ್‌ವುಡ್ ಮಧ್ಯಮ ಕ್ರಮಾಂಕವನ್ನು ಧೂಳೀಪಟ ಮಾಡಿದರು.
76 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ, ಕೇವಲ 6.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿದೆ. ವಿರಾಟ್ ಕೊಹ್ಲಿ ಅಜೇಯ ಆಟದೊಂದಿಗೆ ತಂಡವನ್ನು ಗುರಿ ಮುಟ್ಟಿಸಿದರು.








