ಬೆಂಗಳೂರು: 2026-27ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆಗಳು ಆರಂಭವಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ವಯೋಮಿತಿಯ ಕುರಿತಾದ ಈ ಹೊಸ ಮಾರ್ಗಸೂಚಿಯನ್ನು ಗಮನಿಸುವುದು ಅತ್ಯಗತ್ಯವಾಗಿದೆ.
01 ಜೂನ್ 2026ಕ್ಕೆ ಅನ್ವಯವಾಗುವಂತೆ ವಿವಿಧ ತರಗತಿಗಳಿಗೆ ನಿಗದಿಪಡಿಸಲಾದ ಕನಿಷ್ಠ ವಯೋಮಿತಿಯ ವಿವರಗಳು ಈ ಕೆಳಗಿನಂತಿವೆ:
ತರಗತಿವಾರು ವಯೋಮಿತಿ ವಿವರ:
ಎಲ್.ಕೆ.ಜಿ (LKG): ಮಗುವಿಗೆ ಕನಿಷ್ಠ 4 ವರ್ಷ ಪೂರ್ಣಗೊಂಡಿರಬೇಕು.
ಯು.ಕೆ.ಜಿ (UKG): ಮಗುವಿಗೆ ಕನಿಷ್ಠ 5 ವರ್ಷ ಪೂರ್ಣಗೊಂಡಿರಬೇಕು.
1ನೇ ತರಗತಿ: ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಕನಿಷ್ಠ 6 ವರ್ಷ ತುಂಬಿರಬೇಕು. (ಗರಿಷ್ಠ 8 ವರ್ಷಗಳವರೆಗೆ ಅವಕಾಶವಿರುತ್ತದೆ).
ಹುಟ್ಟಿದ ವರ್ಷ ಮತ್ತು ತಿಂಗಳ ಆಧಾರದ ಮೇಲೆ ವಯಸ್ಸಿನ ಲೆಕ್ಕಾಚಾರ:
ದಾಖಲಾತಿಯ ಸಮಯದಲ್ಲಿ ಗೊಂದಲವನ್ನು ತಪ್ಪಿಸಲು, ಮಗು ಹುಟ್ಟಿದ ವರ್ಷ ಮತ್ತು ತಿಂಗಳಿಗನುಗುಣವಾಗಿ 01-06-2026ಕ್ಕೆ ಎಷ್ಟು ವಯಸ್ಸಾಗುತ್ತದೆ ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ನೋಡಬಹುದು:
| ಹುಟ್ಟಿದ ತಿಂಗಳು | 2021ರಲ್ಲಿ ಜನಿಸಿದವರಿಗೆ | 2020ರಲ್ಲಿ ಜನಿಸಿದವರಿಗೆ | 2019ರಲ್ಲಿ ಜನಿಸಿದವರಿಗೆ | 2018ರಲ್ಲಿ ಜನಿಸಿದವರಿಗೆ |
|---|---|---|---|---|
| ಜನವರಿ | 5.4 ವರ್ಷ | 6.4 ವರ್ಷ | 7.4 ವರ್ಷ | 8.4 ವರ್ಷ |
| ಫೆಬ್ರವರಿ | 5.3 ವರ್ಷ | 6.3 ವರ್ಷ | 7.3 ವರ್ಷ | 8.3 ವರ್ಷ |
| ಮಾರ್ಚ್ | 5.2 ವರ್ಷ | 6.2 ವರ್ಷ | 7.2 ವರ್ಷ | 8.2 ವರ್ಷ |
| ಏಪ್ರಿಲ್ | 5.1 ವರ್ಷ | 6.1 ವರ್ಷ | 7.1 ವರ್ಷ | 8.1 ವರ್ಷ |
| ಮೇ | 5 ವರ್ಷ | 6 ವರ್ಷ | 7 ವರ್ಷ | 8 ವರ್ಷ |
| ಜೂನ್ | 4.11 ವರ್ಷ | 5.11 ವರ್ಷ | 6.11 ವರ್ಷ |









