Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

BREAKING : ವನ್ಯಜೀವಿ ಬೇಟೆಯಾಡಲು ಸಂಚು : ಬೆಂಗಳೂರಲ್ಲಿ 7 ಆರೋಪಿಗಳು ಅರೆಸ್ಟ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ತಳವಾರ ಸೇರಿ ಎಲ್ಲ ಅರ್ಹ ಸಮುದಾಯಗಳಿಗೂ `ST’ ಪ್ರಮಾಣಪತ್ರ: ಸಚಿವ ಪ್ರಿಯಾಂಕ್ ಖರ್ಗೆ
KARNATAKA

BIG NEWS : ರಾಜ್ಯದಲ್ಲಿ ತಳವಾರ ಸೇರಿ ಎಲ್ಲ ಅರ್ಹ ಸಮುದಾಯಗಳಿಗೂ `ST’ ಪ್ರಮಾಣಪತ್ರ: ಸಚಿವ ಪ್ರಿಯಾಂಕ್ ಖರ್ಗೆ

By kannadanewsnow57

ಬೆಂಗಳೂರು : ತಳವಾರ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಎಸ್ಟಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದು ರಾಜಕೀಯ ಪ್ರೇರಿತ ಆರೋಪವಾಗಿದ್ದು, ತಳವಾರ ಸಮುದಾಯ ಸೇರಿದಂತೆ ಎಲ್ಲ ಅರ್ಹ ಸಮುದಾಯಗಳಿಗೂ ಪರಿಶಿಷ್ಟ ಪಂಗಡ ಪ್ರಮಾಣಪತ್ರ ದೊರಕಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, ತಳವಾರ ಸಮುದಾಯದವರಿಗೆ ST ಜಾತಿ ಪ್ರಮಾಣ ಪತ್ರ ವಿತರಣೆಯಲ್ಲಿ ಇರುವ ಸಮಸ್ಯೆ ಕುರಿತು ಮಾನ್ಯ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಇತರೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಳಗಾವಿ ಅಧಿವೇಶನದ ಸಮಯದಲ್ಲಿ ಒಂದು ಸಭೆ ನಡೆದಿದೆ. ಇದಲ್ಲದೆ ಇದೇ ವಿಷಯವಾಗಿ ಬೆಂಗಳೂರಿನಲ್ಲಿ 03 ಬಾರಿ ಸಭೆ ಸೇರಲಾಗಿದೆ. ಒಟ್ಟಾರೆ 04 ಸಭೆಗಳನ್ನು ನಡೆಸಿ, ಸಂಬಂಧಿಸಿದ ಇಲಾಖೆಯಿಂದ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ST ಪ್ರಮಾಣ ಪತ್ರ ವಿತರಿಸಲು ಸ್ಪಷ್ಟ ಸೂಚನೆ ನೀಡಲಾಗಿರುತ್ತದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಸಭೆ ನಂತರವೂ ಹೋರಾಟ ಮಾಡುವ ಮುಂಚೂಣಿಯಲ್ಲಿರುವ ನಾಯಕರಿಗೆ ಹಾಗೂ ಸಮಾಜದ ಮುಖಂಡರಿಗೆ ಇಲಾಖೆಯ ಕಾರ್ಯದರ್ಶಿಗಳಿಗೆ 2-3 ಬಾರಿ ಭೇಟಿ ಮಾಡಿಸಿ, ಸಮಾಲೋಚಿಸಿ, ಸಲಹೆ ನೀಡಿದ ನಂತರವೇ ಸರ್ಕಾರಿ ಆದೇಶವನ್ನು ಹೊರಡಿಸಲಾಯಿತು.

ದಿನಾಂಕ: 01.01.2023 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 14,282 ಜನರಿಗೆ Naikda (including Parivara and Talawara) ST ಜಾತಿ ಪ್ರಮಾಣಪತ್ರ ನೀಡಲಾಗಿರುತ್ತದೆ.

ದಿನಾಂಕ: 01.01.2023 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1,624 ಜನರಿಗೆ Talwar_Boya CAT-1 ನಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿರುತ್ತದೆ.

ದಿನಾಂಕ: 01.03.2020 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 29,306 ಜನರಿಗೆ Naikda (including Parivara and Talawara) ST ಜಾತಿ ಪ್ರಮಾಣ ಪತ್ರ ನೀಡಲಾಗಿರುತ್ತದೆ.

ದಿನಾಂಕ: 01.03.2020 ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 12,126 ಜನರಿಗೆ Talwar_Boya CAT-1 ನಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿರುತ್ತದೆ.

ಮಾನ್ಯ ಉಚ್ಚ ನ್ಯಾಯಾಲಯ, ಬೆಂಗಳೂರಿನಲ್ಲಿ ರಿಟ್ ಪಿಟಿಷನ್ ನಂ. 13777/2023 ರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದು ಪಡಿಸುವ ಕುರಿತು ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಲಬುರಗಿ ಜಿಲ್ಲೆಯಲ್ಲಿ 17 ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರವಾಗಿರುವ ಸಹಾಯಕ ಆಯುಕ್ತರು ಉಪವಿಭಾಗ ಕಲಬುರಗಿ ಮತ್ತು ಸೇಡಂ ಅವರಿಂದ ರದ್ದುಗೊಳಿಸಲಾಗಿರುತ್ತದೆ.

ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘ (ರಿ) ಇವರು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಕೆಲವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಲು ಪುಯತ್ನಿಸುತ್ತಿದ್ದು, ಇದರಿಂದ ನಿಜವಾದ ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುತ್ತಾರೆ. ಜಾತಿ ಪ್ರಮಾಣ ಪತ್ರ ಕೋರಿ ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಯನ್ನು ತಹಸೀಲ್ದಾರರ ಹಂತದಲ್ಲಿ ನಿಯಮಾವಳಿಗಳ ಪ್ರಕಾರ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಸ್ಪಷ್ಟವಾದ ಸೂಚನೆ ನೀಡಲಾಗಿರುತ್ತದೆ.

ಸರ್ಕಾರದಿಂದ ಅರ್ಹರಿಗೆ ST ಜಾತಿ ಪ್ರಮಾಣ ಪತ್ರ ನೀಡಲು ನಮ್ಮ ಸರ್ಕಾರ ಮತ್ತು ನಾನು ಪ್ರಾಮಾಣಿಕ ಪ್ರಯತ್ನ ಮಾಡಿದಾಗಲೂ ಸಹ ಕೆಲವು ಸಂಘ-ಸಂಸ್ಥೆಗಳು, ಹೋರಾಟಗಾರರು ವಾಸ್ತವಿಕ ಸತ್ಯ ಅರಿಯದೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿರುವುದು ನೋಡಿದರೆ ಇದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ.

ತಳವಾರ ಸಮುದಾಯದ ಜನರು ತಪ್ಪಾಗಿ ರಾಜಕೀಯ ಪ್ರೇರಣೆಗೆ ಬಲಿಯಾಗದೆ ಸತ್ಯವನ್ನು ಅರಿಯಬೇಕು. ಗ್ಯಾರಂಟಿ ಸರ್ಕಾರವು ಸದಾ ನಿಮ್ಮೊಂದಿಗೆ ಇರಲಿದೆ ಎಂದು ತಿಳಿಸಿದ್ದಾರೆ.

BIG NEWS: `ST` certificate to be issued to all eligible communities including Talawaras in the state: Minister Priyank Kharge
Share. Facebook Twitter LinkedIn WhatsApp Email

Related Posts

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

1 Min Read

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

2 Mins Read

BREAKING : ವನ್ಯಜೀವಿ ಬೇಟೆಯಾಡಲು ಸಂಚು : ಬೆಂಗಳೂರಲ್ಲಿ 7 ಆರೋಪಿಗಳು ಅರೆಸ್ಟ್!

2 Mins Read
Recent News

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

BREAKING : ವನ್ಯಜೀವಿ ಬೇಟೆಯಾಡಲು ಸಂಚು : ಬೆಂಗಳೂರಲ್ಲಿ 7 ಆರೋಪಿಗಳು ಅರೆಸ್ಟ್!

ರಾಜ್ಯ `ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : `ವಾರ್ಷಿಕ ವೇತನ ಬಡ್ತಿ’ ಬಗ್ಗೆ ಸರ್ಕಾರದ ಮಹತ್ವದ ಆದೇಶ

State News
KARNATAKA

BREAKING: `ನಮ್ಮ ಮೆಟ್ರೋ’ದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ.ಶಿವಕುಮಾರ್ : ವಿಡಿಯೋ ವೈರಲ್ | WATCH VIDEO

By kannadanewsnow57 KARNATAKA 1 Min Read

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಕನಕಪುರಕ್ಕೆ ಭೇಟಿ ನೀಡಿರುವ ಸಿಎಂ ಡಿ.ಕೆ. ಶಿವಕುಮಾರ್…

ನಿಮ್ಮ ಮನೆಯ `ಅಡುಗೆ ಎಣ್ಣೆ’ ಬಳಕೆಗೆ ಯೋಗ್ಯವಾಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ 6 ಸುಲಭ ವಿಧಾನಗಳು!

BREAKING : ವನ್ಯಜೀವಿ ಬೇಟೆಯಾಡಲು ಸಂಚು : ಬೆಂಗಳೂರಲ್ಲಿ 7 ಆರೋಪಿಗಳು ಅರೆಸ್ಟ್!

ರಾಜ್ಯ `ಸರ್ಕಾರಿ ನೌಕರರಿಗೆ’ ಗುಡ್ ನ್ಯೂಸ್ : `ವಾರ್ಷಿಕ ವೇತನ ಬಡ್ತಿ’ ಬಗ್ಗೆ ಸರ್ಕಾರದ ಮಹತ್ವದ ಆದೇಶ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.