Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪುಣೆ ನಿಲ್ದಾಣದಲ್ಲಿ ಹಳಿ ತಪ್ಪಿದ ವಂದೇ ಭಾರತ್ ರೈಲು: ಪ್ರಯಾಣಿಕರು ಸುರಕ್ಷಿತ

27/04/2026 9:53 PM

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ದ ವಿರುದ್ಧ ಮೊಳಗಿದ ಪ್ರತಿರೋಧದ ಶಂಖನಾದ!

27/04/2026 9:41 PM

ನಟ ಅಲ್ಲು ಅರ್ಜುನ್ ‘ಪರ್ಸನಾಲಿಟಿ ರೈಟ್ಸ್’ಗೆ ಹೈಕೋರ್ಟ್ ರಕ್ಷಣೆ: ಅನುಮತಿಯಿಲ್ಲದೇ ಹೆಸರು, ಧ್ವನಿ ಬಳಕೆಗೆ ಬ್ರೇಕ್

27/04/2026 9:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ದ ವಿರುದ್ಧ ಮೊಳಗಿದ ಪ್ರತಿರೋಧದ ಶಂಖನಾದ!
KARNATAKA

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ದ ವಿರುದ್ಧ ಮೊಳಗಿದ ಪ್ರತಿರೋಧದ ಶಂಖನಾದ!

By kannadanewsnow0927/04/2026 9:41 PM

ಶಿವಮೊಗ್ಗ: ಹಸಿರು ಸಿರಿಯ ಮಲೆನಾಡು ಈಗಾಗಲೇ ಶರಾವತಿ ಮತ್ತು ವರಾಹಿ ಅಣೆಕಟ್ಟುಗಳ ಮುಳುಗಡೆಯಿಂದಾಗಿ ಹಸಿಯಾಗಿರುವ ಗಾಯಗಳನ್ನು ಹೊತ್ತು ಕುಳಿತಿದೆ. ಹೀಗಿರುವಾಗ, ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣದ ಪ್ರಸ್ತಾವನೆ ಕೇಳಿಬರುತ್ತಿರುವುದು ಈ ಭಾಗದ ಜನರಲ್ಲಿ ಮರಣಶಾಸನದಂತೆ ಭಾಸವಾಗುತ್ತಿದೆ. ಈ ಯೋಜನೆಯ ವಿರುದ್ಧ ಈಗ ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ಪಕ್ಷಾತೀತವಾಗಿ ಬೀದಿಗಿಳಿಯಲು ಸಜ್ಜಾಗುತ್ತಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹುಲಿದೇವರಬನ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಸ್ಪಷ್ಟ ಎಚ್ಚರಿಕೆಯನ್ನು ರವಾನಿಸಿದೆ.

ನಮಗೆ ಅಣು ಸ್ಥಾವರ ಬೇಡ, ಬದುಕಲು ಬಿಡಿ

ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಯೋಜನೆಯ ಗಂಭೀರತೆಯನ್ನು ಬಿಚ್ಚಿಟ್ಟರು. “ಅಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಸುತ್ತಮುತ್ತಲಿನ 80 ಕಿ.ಮೀ. ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಲಿದೆ. ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿ-ಪಕ್ಷಿ, ಪವಿತ್ರ ನದಿಗಳು ಮತ್ತು ಮಣ್ಣು ಕೂಡ ವಿಕಿರಣದ ಸಂಕಷ್ಟಕ್ಕೆ ಸಿಲುಕಲಿವೆ. ಇದರ ವಿರುದ್ಧ ತಾಂತ್ರಿಕ ಸಮಿತಿ ರಚಿಸಿ, ಪರಿಸರವಾದಿಗಳ ಬೆಂಬಲದೊಂದಿಗೆ ಬೃಹತ್ ಹೋರಾಟ ರೂಪಿಸುವುದು ಅನಿವಾರ್ಯ,” ಎಂದು ಅವರು ಕರೆ ನೀಡಿದರು.

ನ್ಯೂಕ್ಲಿಯರ್ ಬಾಂಬ್ ತಯಾರಿಕೆಯ ಸುದ್ದಿ: ಹೆಚ್ಚಾದ ಆತಂಕ

ಹೋರಾಟ ಸಮಿತಿಯ ಅಧ್ಯಕ್ಷರಾದ ಬಿ.ಎ. ಇಂದೂಧರ ಬೇಸೂರು ಅವರು ಆತಂಕಕಾರಿ ವಿಷಯವೊಂದನ್ನು ಸಭೆಯ ಗಮನಕ್ಕೆ ತಂದರು. ಈ ಭಾಗದ ಭೂಮಿ ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ ಪೂರಕವಾಗಿದೆ ಎಂಬ ಸುದ್ದಿ ಹರಡುತ್ತಿರುವುದು ಜನರ ನಿದ್ದೆಗೆಡಿಸಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ವಿಮಾನಗಳ ಹಾರಾಟ ನಿರಂತರವಾಗಿ ನಡೆಯುತ್ತಿದ್ದು, ಇದು ಯಾವುದೋ ದೊಡ್ಡ ದುರಂತದ ಮುನ್ಸೂಚನೆಯೇ ಎಂಬ ಭಯ ಕಾಡುತ್ತಿದೆ. ಬೆನಗೋಡಿನಿಂದ ಬೇಸೂರುವರೆಗಿನ ಹಳ್ಳಿಗಳು ಖಾಲಿಯಾಗುವ ಭೀತಿಯಲ್ಲಿವೆ.

ಪಕ್ಷಾತೀತ ಹೋರಾಟದ ಕರೆ

ಈ ಹೋರಾಟವನ್ನು ಕೇವಲ ಒಂದು ಪಕ್ಷಕ್ಕೆ ಸೀಮಿತಗೊಳಿಸದೆ, ಮಲೆನಾಡಿನ ಉಳಿವಿಗಾಗಿ ಎಲ್ಲರೂ ಒಂದಾಗಬೇಕು ಎಂಬ ಧ್ವನಿ ಸಭೆಯಲ್ಲಿ ಬಲವಾಗಿ ಕೇಳಿಬಂದಿತು.

  • ಪ್ರಸನ್ನ ಕೆರೆಕೈ (ಕೇಂದ್ರ ಸಾಂಬಾರು ಮಂಡಳಿ ಸದಸ್ಯ): ಬಹುರಾಷ್ಟ್ರೀಯ ಕಂಪನಿಗಳ ಲಾಬಿಯನ್ನು ಎದುರಿಸಲು ನಾವು ಈಗಲೇ ಶಕ್ತಿ ಕ್ರೋಢೀಕರಿಸಿಕೊಳ್ಳಬೇಕು. ಮಲೆನಾಡಿನ ಜನರ ಬದುಕಿನ ಜೊತೆ ಚೆಲ್ಲಾಟವಾಡುವ ಇಂತಹ ಯೋಜನೆಗಳು ನಮಗೆ ಬೇಡ ಎಂದರು..

  • ಟಿ.ಡಿ. ಮೇಘರಾಜ್ (ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ): ಯೋಜನೆಯಿಂದ 200 ಕಿ.ಮೀ. ವ್ಯಾಪ್ತಿಯ ಜನರಿಗೆ ತೊಂದರೆಯಾಗಲಿದೆ. ಅದು ರದ್ದಾಗುವವರೆಗೂ ನಮ್ಮ ಹೋರಾಟ ವಿಶ್ರಮಿಸುವುದಿಲ್ಲ ಎಂದು ಗುಡುಗಿದರು.

  • ಸೋಮಶೇಖರ ಲ್ಯಾವಿಗೆರೆ: “ಹೋರಾಟ ಜೈಲು, ಅನ್ಯಾಯ ಬೈಲು” ಎನ್ನುವ ಕಾಗೋಡು ತಿಮ್ಮಪ್ಪನವರ ಹೋರಾಟದ ಹಾದಿಯೇ ನಮಗೆ ಸ್ಫೂರ್ತಿ ಎಂದು ಹೇಳಿದರು.

ಎರಡು ಬಾರಿ ಮುಳುಗಡೆಯಾಗಿದ್ದೇವೆ, ಇನ್ನೊಮ್ಮೆ ಬೇಡ

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರ ಮಾತುಗಳು ಮಲೆನಾಡಿಗರ ನೋವನ್ನು ಪ್ರತಿಬಿಂಬಿಸಿದವು. “ನಾವು ಈಗಾಗಲೇ ಎರಡು ಬಾರಿ ಮುಳುಗಡೆ ಸಂತ್ರಸ್ತರಾಗಿ ಅಲೆದಾಡುತ್ತಿದ್ದೇವೆ. ಸರ್ಕಾರ ನಮಗೆ ಇಂತಹ ಯೋಜನೆಗಳನ್ನು ಕೊಡುವ ಬದಲು ಒಂದು ತೊಟ್ಟು ವಿಷ ಕೊಡಲಿ. ಯಾವುದೇ ಕಾರಣಕ್ಕೂ ಅಣು ಸ್ಥಾವರಕ್ಕೆ ಅವಕಾಶ ನೀಡುವುದಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯ ಪ್ರಮುಖ ನಿರ್ಣಯಗಳು:

  1. ಲಿಖಿತ ಭರವಸೆ ಬೇಕು: ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಮಾಡುವುದಿಲ್ಲ ಎಂದು ಸರ್ಕಾರದಿಂದ ಲಿಖಿತ ಭರವಸೆ ಪಡೆಯುವುದು.

  2. ಅಭಿವೃದ್ಧಿ ಬೇಕು, ಅಣು ಸ್ಥಾವರವಲ್ಲ: ಸ್ಥಾವರದ ಬದಲು ಗ್ರಾಮಕ್ಕೆ ಸುಸಜ್ಜಿತ ಆಸ್ಪತ್ರೆ, ಶಾಲೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯ.

  3. ಏಕ ವಿಷಯಾಧಾರಿತ ಹೋರಾಟ: ಕೇವಲ ಅಣು ಸ್ಥಾವರ ವಿರೋಧವನ್ನೇ ಪ್ರಮುಖ ಅಜೆಂಡಾವಾಗಿಟ್ಟುಕೊಂಡು ಸಾಗರ, ಸೊರಬ, ಹೊಸನಗರ ಹಾಗೂ ಅಕ್ಕಪಕ್ಕದ ಜಿಲ್ಲೆಯ ಜನರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದು.

ಒಟ್ಟಾರೆಯಾಗಿ, ಬೇಸೂರು ಅಣು ವಿದ್ಯುತ್ ಸ್ಥಾವರದ ವಿಷಯವು ಸಾಗರ ತಾಲ್ಲೂಕಿನಲ್ಲಿ ದೊಡ್ಡ ಕಿಚ್ಚು ಹಚ್ಚಿದೆ. ಮಲೆನಾಡಿನ ಅಸ್ಮಿತೆ ಮತ್ತು ಪರಿಸರವನ್ನು ಉಳಿಸಿಕೊಳ್ಳಲು ಜನಸಾಮಾನ್ಯರು ಕಂಕಣಬದ್ಧರಾಗಿ ನಿಂತಿರುವುದು ಈ ಹೋರಾಟಕ್ಕೆ ಹೊಸ ಬಲ ತುಂಬಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

ರಾಜ್ಯದ ‘KAS ಅಧಿಕಾರಿ’ಗಳಿಗೆ ಗುಡ್ ನ್ಯೂಸ್: ಶೀಘ್ರವೇ ಶೇ.33% ಅಧಿಕಾರಿಗಳನ್ನು ಪದೋನ್ನತಿ – ಸಿಎಂ ಭರವಸೆ

ನಟ ಅಲ್ಲು ಅರ್ಜುನ್ ‘ಪರ್ಸನಾಲಿಟಿ ರೈಟ್ಸ್’ಗೆ ಹೈಕೋರ್ಟ್ ರಕ್ಷಣೆ: ಅನುಮತಿಯಿಲ್ಲದೇ ಹೆಸರು, ಧ್ವನಿ ಬಳಕೆಗೆ ಬ್ರೇಕ್

Share. Facebook Twitter LinkedIn WhatsApp Email

Related Posts

ಸೂರ್ಯನ ಕೆಂಗಣ್ಣಿಗೆ ರಾಜ್ಯ ತತ್ತರ: ವರುಣನ ಕೃಪೆಗಾಗಿ ಮೇ.15ರವರೆಗೆ ಕಾಯಲೇಬೇಕು!

27/04/2026 9:17 PM2 Mins Read

ರಾಜ್ಯದ ‘KAS ಅಧಿಕಾರಿ’ಗಳಿಗೆ ಗುಡ್ ನ್ಯೂಸ್: ಶೀಘ್ರವೇ ಶೇ.33% ಅಧಿಕಾರಿಗಳನ್ನು ಪದೋನ್ನತಿ – ಸಿಎಂ ಭರವಸೆ

27/04/2026 9:13 PM2 Mins Read

ಕುಮಾರಸ್ವಾಮಿ ಅವರಲ್ಲಿ ಏನೋ ಸಮಸ್ಯೆಯಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

27/04/2026 9:06 PM1 Min Read
Recent News

BREAKING: ಪುಣೆ ನಿಲ್ದಾಣದಲ್ಲಿ ಹಳಿ ತಪ್ಪಿದ ವಂದೇ ಭಾರತ್ ರೈಲು: ಪ್ರಯಾಣಿಕರು ಸುರಕ್ಷಿತ

27/04/2026 9:53 PM

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ದ ವಿರುದ್ಧ ಮೊಳಗಿದ ಪ್ರತಿರೋಧದ ಶಂಖನಾದ!

27/04/2026 9:41 PM

ನಟ ಅಲ್ಲು ಅರ್ಜುನ್ ‘ಪರ್ಸನಾಲಿಟಿ ರೈಟ್ಸ್’ಗೆ ಹೈಕೋರ್ಟ್ ರಕ್ಷಣೆ: ಅನುಮತಿಯಿಲ್ಲದೇ ಹೆಸರು, ಧ್ವನಿ ಬಳಕೆಗೆ ಬ್ರೇಕ್

27/04/2026 9:35 PM

ಸೂರ್ಯನ ಕೆಂಗಣ್ಣಿಗೆ ರಾಜ್ಯ ತತ್ತರ: ವರುಣನ ಕೃಪೆಗಾಗಿ ಮೇ.15ರವರೆಗೆ ಕಾಯಲೇಬೇಕು!

27/04/2026 9:17 PM
State News
KARNATAKA

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ದ ವಿರುದ್ಧ ಮೊಳಗಿದ ಪ್ರತಿರೋಧದ ಶಂಖನಾದ!

By kannadanewsnow0927/04/2026 9:41 PM KARNATAKA 2 Mins Read

ಶಿವಮೊಗ್ಗ: ಹಸಿರು ಸಿರಿಯ ಮಲೆನಾಡು ಈಗಾಗಲೇ ಶರಾವತಿ ಮತ್ತು ವರಾಹಿ ಅಣೆಕಟ್ಟುಗಳ ಮುಳುಗಡೆಯಿಂದಾಗಿ ಹಸಿಯಾಗಿರುವ ಗಾಯಗಳನ್ನು ಹೊತ್ತು ಕುಳಿತಿದೆ. ಹೀಗಿರುವಾಗ,…

ಸೂರ್ಯನ ಕೆಂಗಣ್ಣಿಗೆ ರಾಜ್ಯ ತತ್ತರ: ವರುಣನ ಕೃಪೆಗಾಗಿ ಮೇ.15ರವರೆಗೆ ಕಾಯಲೇಬೇಕು!

27/04/2026 9:17 PM

ರಾಜ್ಯದ ‘KAS ಅಧಿಕಾರಿ’ಗಳಿಗೆ ಗುಡ್ ನ್ಯೂಸ್: ಶೀಘ್ರವೇ ಶೇ.33% ಅಧಿಕಾರಿಗಳನ್ನು ಪದೋನ್ನತಿ – ಸಿಎಂ ಭರವಸೆ

27/04/2026 9:13 PM

ಕುಮಾರಸ್ವಾಮಿ ಅವರಲ್ಲಿ ಏನೋ ಸಮಸ್ಯೆಯಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

27/04/2026 9:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.