ಬೆಂಗಳೂರು : ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ 10 ಆರೋಪಿಗಳನ್ನು ಇದೀಗ ಪೊಲೀಸ್ ಮಾಡಿದ್ದಾರೆ. ಶುಕ್ರವಾರ ಬೆಂಗಳೂರಿನ ಚೆನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ನಡುವೆ ಪಂದ್ಯ ನಡೆದಿತ್ತು. ಒಂದೇ ಮ್ಯಾಚ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ 7 fir ದಾಖಲಾಗಿದ್ದು., ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಸಂಬಂಧ ಪಟ್ಟಂತೆ ಒಟ್ಟು 10 ಆರೋಪಿಗಳನ್ನು ಇದುವರೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳ ಬಳಿ ಇದ್ದ 19 ಐಪಿಎಲ್ ಟಿಕೆಟ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ ಎಸ್ ಎಸ್ ಸಿ ಎ ಸದಸ್ಯರಿಗೆ ನೀಡಿದ ಕಾಂಪ್ಲಿಮೆಂಟರಿ ಟಿಕೆಟ್ಗಳೇ ಮಾರಾಟ ಮಾಡಲಾಗಿದೆ. ಕಾಂಪ್ಲಿಮೆಂಟರಿ ಟಿಕೆಟ್ ಮೇಲೆ ಹಣ ನಮದು ಅಥವಾ ಸೊನ್ನೆ ಬರೆದಿರುತ್ತದೆ. ತಮ್ಮಲ್ಲಿರುವ ಟಿಕೆಟ್ ಮೌಲ್ಯದ ಅರಿವಿಲ್ಲದೆ ಆರೋಪಿಗಳು ಮಾರಾಟ ಮಾಡುತ್ತಿದ್ದರು. P-3 ಸ್ಟಾಂಡ್ ನ 30 ರಿಂದ 40,000 ಬಿಳಿಯ ಟಿಕೆಟ್ 8 ರಿಂದ 10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.
ಇನ್ನೊಂದೆಡೆ ನಾಲ್ಕರಿಂದ ಐದು ಸಾವಿರ ಮೌಲ್ಯದ ಟಿಕೆಟ್ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಆನ್ಲೈನ್ ಟಿಕೆಟ್ ಗಳನ್ನು ಖರೀದಿಸಿ ಸ್ಥಳದಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು. ಮಫ್ತಿಯಲ್ಲಿ ಟಿಕೆಟ್ ಕೊಡುವವರ ಸೋಗಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು ಏಳು ಕೇಸ್ ದಾಖಲಿಸಿ ಹತ್ತು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂದಿತ ಆರೋಪಿಗಳನ್ನು ಪ್ರದೀಪ್, ಸಾಗರ್, ಕಿರಣ್, ಜೀವನ್, ಭರತೇಶ, ಶಶಿಕುಮಾರ್, ಸೋನು, ಕುಮಾರ್, ಶ್ರೀಕಾಂತ್ ಹಾಗೂ ಕಿರಣ್ ಬಂದಿತ ಆರೋಪಿಗಳು ಎಂದು ತಿಳಿದು ಬಂದಿದೆ. ಟಿಕೆಟ್ ನೀಡಿದವರ ಬಗ್ಗೆ ಪೊಲೀಸರಿಂದ ತನಿಖೆ ಮುಂದುವರೆದಿದೆ.








