ಬೆಂಗಳೂರು : ಕಾಂತರಾಜ್ ಚಾಪ್ಟರ್ 1ರ ಬಗ್ಗೆ ಚಾಮುಂಡಿ ಪಾತ್ರದ ಬಗ್ಗೆ ನಟ ರಣವೀರ್ ಸಿಂಗ್ ಅವಹೇಳನಕಾರಿ ಸನ್ನೆ ಮಾಡಿದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ FIR ದಾಖಲಾಗಿತ್ತು. FIR ರದ್ದು ಕೋರಿ ಸಿಂಗ್ ಅರ್ಜಿ ಸಲ್ಲಿಸಿದ್ದು ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು.
ತನ್ನ ಹೇಳಿಕೆಗೆ ನಟ ರಣವೀರ್ ಸಿಂಗ್ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಕ್ಷಮೆಯಾಚನೆಯ ಪ್ರಮಾಣ ಪತ್ರವನ್ನು ಹೈಕೋರ್ಟಿಗೆ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ಶೀಘ್ರವೇ ಚಾಮುಂಡಿ ಬೆಟ್ಟಕ್ಕೂ ಭೇಟಿ ನೀಡುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದು, ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಪತ್ರ ಸಲ್ಲಿಸಿದ್ದಾರೆ. ಚಾಮುಂಡಿ ಬೆಟ್ಟ ಬೇಟಿಗೆ ಗಡುವು ನೀಡಬೇಕೆಂದು ಇದೇ ವೇಳೆ ಮನವಿ ಮಾಡಿದರು.
ಈ ವೇಳೆ ಹೈಕೋರ್ಟ್ ರಣವೀರ್ ಸಿಂಗ್ ಕ್ಷಮೆಯಾಚನೆ ಅಂಗೀಕರಿಸಿ ನ್ಯಾಯಾಲಯ ಅರ್ಜಿ ಇತ್ಯರ್ಥ ಪಡಿಸಿದೆ. ಚಾಮುಂಡಿ ಬೇಟಿಯ ಬಗ್ಗೆ ಆದೇಶ ನೀಡಲಾಗುವುದು ಎಂದು ಹೈಕೋರ್ಟ್ ಇದೆ ವೇಳೆ ತಿಳಿಸಿತು. ಪಂಜುರ್ಲಿ ದೈವ ಹಾಗೂ ಕಾಂತಾರ ಚಿತ್ರದ ಸಂಪ್ರದಾಯದ ಕುರಿತಾದ ವಿವಾದಕ್ಕೆ ಸಂಬಂಧಿಸಿದಂತೆ, ಬಾಲಿವುಡ್ ನಟ ರಣವೀರ್ ಸಿಂಗ್ ಈಗ ಬೇಷರತ್ ಕ್ಷಮೆಯಾಚಿಸಿದ್ದಾರೆ. ದೈವದ ನಂಬಿಕೆ ಹಾಗೂ ಕರಾವಳಿಯ ಜನರ ಭಾವನೆಗಳಿಗೆ ಧಕ್ಕೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ದೊಡ್ಡ ವಿವಾದಕ್ಕೆ ಈಗ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.








