ದಕ್ಷಿಣಕನ್ನಡ : ದಕ್ಷಿಣ ಕನ್ನಡದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ ಒಂದು ಕುಸಿದು ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುಚ್ಚೆ ಮೊಗರು ಭಾಗದ ಬಾವದಬೈಲು ಎಂಬಲ್ಲಿ ಕಾಲು ಸಂಕ ಕುಸಿದಿರುವ ಘಟನೆ ವರದಿಯಾಗಿದೆ.
ಕಾಲು ಸಂಕ ಮುರಿದು ಬಿದ್ದ ಪರಿಣಾಮ 8 ಮಂದಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ನಿತ್ಯ ಕಾಲು ಸಂಕದ ಮೇಲೆ ಜನರು ಓಡಾಡುತ್ತಿದ್ದರು. ಈ ಒಂದು ಕಾಲು ಸಂಕ ಸುಮಾರು ಐವತ್ತು ವರ್ಷಗಳ ಹಿಂದಿನ ಹಳೆಯದಾಗಿದ್ದು ಶಿಥಿಲಗೊಂಡ ಪರಿಣಾಮ ಇಂದು ದೈವದ ಭಂಡಾರ ಬರವಣಿಗೆ ವೇಳೆ ಕಾಲು ಸಂಕ ಕುಸಿದು ಬಿದ್ದಿದೆ. ಘಟನೆಯಲ್ಲಿ 8 ಜನರಿಗೆ ಗಂಭೀರ, ಗಾಯಗಳಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.








