Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಾವಣಗೆರೆಯ MCH ಆಸ್ಪತ್ರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೇಟಿ, ಪರಿಶೀಲನೆ

24/04/2026 10:02 PM

ಡಾ.ಸಿದ್ಧನಗೌಡ ಪಾಟೀಲರಿಗೆ ಕೆಯುಡಬ್ಲೂಜೆ ಅಭಿನಂದನೆ ಚಳವಳಿ ಬದ್ಧತೆಯನ್ನು ಹೆಚ್ಚಿಸಿದ ಪಾಟೀಲರು: ಕೇಸರಿ ಶ್ಲಾಘನೆ

24/04/2026 9:59 PM

ಕದನ ವಿರಾಮದ ನಡುವೆಯೂ ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಮುಂದುವರಿದ ಅಸ್ಥಿರತೆ!

24/04/2026 9:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಡಾ.ಸಿದ್ಧನಗೌಡ ಪಾಟೀಲರಿಗೆ ಕೆಯುಡಬ್ಲೂಜೆ ಅಭಿನಂದನೆ ಚಳವಳಿ ಬದ್ಧತೆಯನ್ನು ಹೆಚ್ಚಿಸಿದ ಪಾಟೀಲರು: ಕೇಸರಿ ಶ್ಲಾಘನೆ
KARNATAKA

ಡಾ.ಸಿದ್ಧನಗೌಡ ಪಾಟೀಲರಿಗೆ ಕೆಯುಡಬ್ಲೂಜೆ ಅಭಿನಂದನೆ ಚಳವಳಿ ಬದ್ಧತೆಯನ್ನು ಹೆಚ್ಚಿಸಿದ ಪಾಟೀಲರು: ಕೇಸರಿ ಶ್ಲಾಘನೆ

By kannadanewsnow0924/04/2026 9:59 PM

ಬೆಂಗಳೂರು: ರಾಜ್ಯ ಸರ್ಕಾರ ಕೊಡ ಮಾಡುವ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವ, ಕೆಯುಡಬ್ಲೂಜೆ ಹಿರಿಯ ಸದಸ್ಯರು, ಹೊಸತು ಪತ್ರಿಕೆ ಸಂಪಾದಕರಾದ ಕಾಮ್ರೆಡ್ ಡಾ.ಸಿದ್ಧನಗೌಡ ಪಾಟೀಲ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ವತಿಯಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

ಕಳೆದ ನಾಲ್ಕು ದಶಕಗಳಿಂದಲೂ ಸಾರ್ವಜನಿಕ ಜೀವನದಲ್ಲಿರುವ ಡಾ.ಸಿದ್ಧನಗೌಡ ಪಾಟೀಲರು, ಒಬ್ಬ ಪತ್ರಕರ್ತರಾಗಿ, ಸಾಹಿತಿಯಾಗಿ, ಜನಪರ ಚಳವಳಿಗಾರರಾಗಿ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಸದಾ ಕಾಪಿಟ್ಟುಕೊಂಡು ಬಂದಿರುವುದನ್ನು ಸಭೆಯಲ್ಲಿ ಶ್ಲಾಸಲಾಯಿತು.

ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕರಾದ ಕೇಸರಿ ಹರವು ಮಾತನಾಡಿ, ಬದ್ಧತೆಗೆ ಮತ್ತೊಂದು ಹೆಸರೇ ಸಿದ್ದನಗೌಡ ಪಾಟೀಲರು. ವಿದ್ಯಾರ್ಥಿ ಚಳವಳಿಯಿಂದ ಹಿಡಿದು, ಬಾಗೂರು ನವಿಲೆ ಸುರಂಗ ಸಂತ್ರಸ್ತರ ಚಳವಳಿ ಸೇರಿದಂತೆ ನೂರಾರು ಚಳವಳಿಯನ್ನು ಸಂಘಟಿಸಿದವರು, ಈಗಲೂ ಅಷ್ಟೇ ಸರಳವಾಗಿರುವುದು ವಿಶೇಷ. ಸಿದ್ದನಗೌಡ ಅವರಿಗೆ ಪ್ರಶಸ್ತಿ ನೀಡಿದ್ದರಿಂದ ಈ ಪ್ರಶಸ್ತಿ ಮೌಲ್ಯವೇ ಹೆಚ್ಚಾಗಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಮಾನವೀಯ ತುಡಿತ ಹೊಂದಿರುವ ಸಿದ್ದನಗೌಡರು, ಎಂದೂ ಸ್ವಾರ್ಥಿಯಾಗಲಿಲ್ಲ. ಜನಮುಖಿಯಾಗಿ ನಿಸ್ವಾರ್ಥದಿಂದಲೇ ಚಳವಳಿಗಾರರಾಗಿ ಉಳಿದವರು ಎಂದು ಶ್ಲಾಸಿದರು.

ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಕೆಯುಡಬ್ಲ್ಯೂಜೆ ಉಪಾಧ್ಯಕ್ಷರಾದ ಎಚ್.ಬಿ.ಮದನಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ಘಟಕದ ಅಧ್ಯಕ್ಷ ಸೋಮಶೇಖರ ಗಾಂಧಿ ಮತ್ತು ಪದಾಧಿಕಾರಿಗಳು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಬೀದರ್ ಸಮ್ಮೇಳನಕ್ಕೆ ಕಾರಣಾಂತರದಿಂದ ಬರಲು ಸಾಧ್ಯವಾಗದಿದ್ದ ಈ ಸಂಜೆ ಪತ್ರಿಕೆಯ ಹಿರಿಯ ಪತ್ರಕರ್ತರಾದ ಜನಾರ್ಧನಚಾರಿ, ಹೊಸದಿಗಂತ ಪತ್ರಿಕೆಯ ನವ್ಯಜ್ಯೋತಿ ಅವರಿಗೆ ಕೆಯುಡಬ್ಲೂೃಜೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

BREAKING: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ: ತನಿಖೆಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ

ಅತ್ಯಾಚಾರ ಆರೋಪಿಗೆ ಹೈಕೋರ್ಟ್ ತಪರಾಕಿ: ಸಂತ್ರಸ್ತೆಗೆ ಪ್ರತಿ ತಿಂಗಳು ₹75,000 ಪಾವತಿಸಲು ಆದೇಶ

Share. Facebook Twitter LinkedIn WhatsApp Email

Related Posts

ದಾವಣಗೆರೆಯ MCH ಆಸ್ಪತ್ರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೇಟಿ, ಪರಿಶೀಲನೆ

24/04/2026 10:02 PM2 Mins Read

BREAKING: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ: ತನಿಖೆಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ

24/04/2026 9:13 PM1 Min Read

ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: ಮೈಸೂರಿನ ಮಾಧುರಿಯ ಸಾಧನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ

24/04/2026 8:54 PM2 Mins Read
Recent News

ದಾವಣಗೆರೆಯ MCH ಆಸ್ಪತ್ರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೇಟಿ, ಪರಿಶೀಲನೆ

24/04/2026 10:02 PM

ಡಾ.ಸಿದ್ಧನಗೌಡ ಪಾಟೀಲರಿಗೆ ಕೆಯುಡಬ್ಲೂಜೆ ಅಭಿನಂದನೆ ಚಳವಳಿ ಬದ್ಧತೆಯನ್ನು ಹೆಚ್ಚಿಸಿದ ಪಾಟೀಲರು: ಕೇಸರಿ ಶ್ಲಾಘನೆ

24/04/2026 9:59 PM

ಕದನ ವಿರಾಮದ ನಡುವೆಯೂ ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಮುಂದುವರಿದ ಅಸ್ಥಿರತೆ!

24/04/2026 9:18 PM

BREAKING: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ: ತನಿಖೆಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ

24/04/2026 9:13 PM
State News
KARNATAKA

ದಾವಣಗೆರೆಯ MCH ಆಸ್ಪತ್ರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭೇಟಿ, ಪರಿಶೀಲನೆ

By kannadanewsnow0924/04/2026 10:02 PM KARNATAKA 2 Mins Read

ದಾವಣಗೆರೆ : ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಗುರುವಾರ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಭೇಟಿ…

ಡಾ.ಸಿದ್ಧನಗೌಡ ಪಾಟೀಲರಿಗೆ ಕೆಯುಡಬ್ಲೂಜೆ ಅಭಿನಂದನೆ ಚಳವಳಿ ಬದ್ಧತೆಯನ್ನು ಹೆಚ್ಚಿಸಿದ ಪಾಟೀಲರು: ಕೇಸರಿ ಶ್ಲಾಘನೆ

24/04/2026 9:59 PM

BREAKING: ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿಚಾರ: ತನಿಖೆಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ

24/04/2026 9:13 PM

ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: ಮೈಸೂರಿನ ಮಾಧುರಿಯ ಸಾಧನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ

24/04/2026 8:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.