ಬೆಂಗಳೂರು : ಕಬ್ಬಡಿ ಪಂದ್ಯ ಒಂದರಲ್ಲಿ 500 ರೂಪಾಯಿ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೌದು ಪರಮೇಶ್ವರ ಅವರ ವಿರುದ್ಧದ ಕೇಸ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಸುನಿಲ್ ಯಾದವ್ ಅವರಿದ್ದ ಪೀಠ ಆದೇಶ ನೀಡಿದೆ.
ಈ ಕೇಸ್ ಗೆ ಸಬಂಧಿಸಿದಂತೆ ವಕೀಲ ಫಣಿಂದ್ರ ಅವರು ವಾದ ಮಂಡಿಸಿದರು. ಸಚಿವರು ಕಬ್ಬಡಿ ಟೂರ್ನಿ ಮುಖ್ಯ ಅತಿಥಿಯಾಗಿ ಹೋಗಿದ್ದರು. ವಿಜಯಪುರ ತಂಡ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟಿದ್ರು. ಸೋತ ತಂಡಕ್ಕೆ ಬೇಸರವಾಗಬಾರದೆಂದು ಹೀಗೆ ಹೇಳಿದ್ದಾರೆ ಇದನ್ನೇ ಅಪರಾಧವೆಂಬಂತೆ ಖಾಸಗಿ ದೂರು ದಾಖಲಿಸಿದ್ದಾರೆ. ಕೋರ್ಟ್ fir ಗೆ ಆದೇಶಿಸುವ ಮುನ್ನ ಪ್ರಕ್ರಿಯೆ ಪಾಲಿಸಿಲ್ಲ ಎಂದು ವಾದಿಸಿದರು.
ಇದೇ ವೇಳೆ ಹೈಕೋರ್ಟ್ ಜಡ್ಜ್ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು ತಮಾಷೆಗೆ ಮಾತನಾಡಿದರು ಕೂಡ ಕೇಸ್ ದಾಖಲಿಸಬಹುದಾ?ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡಿದಂತೆ ಕಾಣುತ್ತಿಲ್ಲ ತನಿಖೆಗೆ ಆದೇಶಿಸುವ ಮುನ್ನ ಪೊಲೀಸರ ವಿವರಣೆ ಪಡೆಯಬೇಕಿತ್ತು ಎಂದು ಸುನೀಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತು. ಬಳಿಕ ಪ್ರಕರಣಕ್ಕೆ ತಡೆ ನೀಡಿ ವಿಚಾರಣೆಯನ್ನು ಮುಂದೂಡಿತು.








