ಲಂಡನ್:ವಿಶ್ವದ ವಿವಿಧ ದೇಶಗಳ ಜನರ ಬೌದ್ಧಿಕ ಸಾಮರ್ಥ್ಯವನ್ನು ಅಳೆಯುವ 2026ನೇ ಸಾಲಿನ ‘ಜಾಗತಿಕ ಐಕ್ಯೂ ಶ್ರೇಯಾಂಕ’ (Global IQ Ranking) ಪ್ರಕಟವಾಗಿದೆ. ಈ ಬಾರಿಯ ವರದಿಯಲ್ಲಿ ಪೂರ್ವ ಏಷ್ಯಾದ ರಾಷ್ಟ್ರಗಳು ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದು, ದಕ್ಷಿಣ ಕೊರಿಯಾ ವಿಶ್ವದ ಅತ್ಯಂತ ಹೆಚ್ಚಿನ ಐಕ್ಯೂ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.
ದಕ್ಷಿಣ ಕೊರಿಯಾ ನಂ. 1: ಕಳೆದ ಬಾರಿಗಿಂತ ತನ್ನ ಸಾಮರ್ಥ್ಯವನ್ನು ಉತ್ತಮಪಡಿಸಿಕೊಂಡಿರುವ ದಕ್ಷಿಣ ಕೊರಿಯಾ, 106.97 ಸರಾಸರಿ ಐಕ್ಯೂ ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ. ಅಲ್ಲಿನ ಶಿಸ್ತುಬದ್ಧ ಶಿಕ್ಷಣ ಪದ್ಧತಿ ಮತ್ತು ವಿಜ್ಞಾನ-ಗಣಿತಕ್ಕೆ ನೀಡುವ ಆದ್ಯತೆ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ.
ಕಳೆದ ಬಾರಿ ಅಗ್ರಸ್ಥಾನದಲ್ಲಿದ್ದ ಚೀನಾ (106.48) ಈ ಬಾರಿ ಸ್ವಲ್ಪ ಕುಸಿತ ಕಂಡು ಎರಡನೇ ಸ್ಥಾನಕ್ಕೆ ತಲುಪಿದೆ. ಜಪಾನ್ (106.30) ಮೂರನೇ ಸ್ಥಾನದಲ್ಲಿ ಸ್ಥಿರವಾಗಿದೆ.
ಈಬಾರಿಯ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಗಮನಾರ್ಹ ಪ್ರಗತಿ ಸಾಧಿಸಿ 5ನೇ ಸ್ಥಾನಕ್ಕೇರಿದೆ. ವಿಯೆಟ್ನಾಂ ಕೂಡ ಮೊದಲ ಬಾರಿಗೆ ಅಗ್ರ 10ರ ಪಟ್ಟಿಗೆ ಲಗ್ಗೆ ಇಡುವ ಮೂಲಕ ಅಚ್ಚರಿ ಮೂಡಿಸಿದೆ.
ಐಕ್ಯೂ ಅಳೆಯುವ ಮಾನದಂಡ: ಶಿಕ್ಷಣದ ಲಭ್ಯತೆ, ತರ್ಕಬದ್ಧ ಚಿಂತನೆ, ಗಣಿತದ ಸಾಮರ್ಥ್ಯ ಮತ್ತು ಸ್ಮರಣಶಕ್ತಿಯನ್ನು ಆಧರಿಸಿ ಈ ಶ್ರೇಯಾಂಕವನ್ನು ನೀಡಲಾಗುತ್ತದೆ.
2026ರ ಟಾಪ್ 10 ಐಕ್ಯೂ ರಾಷ್ಟ್ರಗಳ ಪಟ್ಟಿ:
ಶ್ರೇಯಾಂಕ ದೇಶ ಸರಾಸರಿ ಐಕ್ಯೂ (IQ)
1 ದಕ್ಷಿಣ ಕೊರಿಯಾ 106.97
2 ಚೀನಾ 106.48
3 ಜಪಾನ್ 106.30
4 ಇರಾನ್ 104.80
5 ಆಸ್ಟ್ರೇಲಿಯಾ 104.45
6 ರಷ್ಯಾ 103.78
7 ತೈವಾನ್ 103.60
8 ಸಿಂಗಾಪುರ 103.45
9 ವಿಯೆಟ್ನಾಂ 102.80
10 ಜರ್ಮನಿ 102.10








