ಬೆಂಗಳೂರು : ಇತ್ತೀಚಿಗೆ ಅಕ್ರಮ ಸಂಬಂಧ ವಿವಾಹೇತರ ಸಂಬಂಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದು ಸಮಾಜದ ಮೇಲೆ ಬಹಳಷ್ಟು ಕೆಟ್ಟ ಪರಿಣಾಮ ಬೀರುತ್ತದೆ. ಇದೀಗ ಬೆಂಗಳೂರಿನಲ್ಲಿ ಅಂತಹದ್ದೆ ಘಟನೆ ನಡೆದಿದ್ದು ಕಸ ಹಾಕಿ ಬರುತ್ತೇನೆ ಎಂದ ಮಹಿಳೆ ಗಂಡ ಮತ್ತು ತನ್ನ ಮಕ್ಕಳಿಗೆ ನಿದ್ರೆ ಮಾತ್ರ ಹಾಕಿ ಕಟಿಂಗ್ ಶಾಪ್ ದವನ ಜೊತೆಗೆ ಮಹಿಳೆ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಹೌದು ವಿವಾಹಿತ ಮಹಿಳೆಯೊಬ್ಬಳು, ಗಂಡ ಮಕ್ಕಳನ್ನು ಬಿಟ್ಟು ಕಟ್ಟಿಂಗ್ ಶಾಪ್ ಹೊಂದಿದ್ದ ವ್ಯಕ್ತಿ ಜೊತೆ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾಳೆ. ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿವಾಹಿತ ಮಹಿಳೆಯ ಮಾಡಿದ ಈ ಕಿತಾಪತಿಯಿಂದ ಆಕೆಯ ಗಂಡ ಮಕ್ಕಳು ಕಂಗಾಲಾಗಿದ್ದಾರೆ. ಪ್ರಿಯಾಂಕಾ ಎಂಬಾಕೆಯೇ ಗಂಡ ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿರುವ ಮಹಿಳೆ ಎಂದು ತಿಳಿದುಬಂದಿದೆ.
ರಾತ್ರಿ ಮನೆಯಲ್ಲಿದ್ದ ಕಸ ಎಸೆದು ಬರ್ತೀನಿ ಅಂತ ಹೇಳಿ ಪ್ರಿಯಾಂಕಾ ಮನೆಯಿಂದ ಹೊರಗೆ ಹೋಗಿದ್ದು, ಮತ್ತೆ ಆಕೆ ವಾಪಸ್ ಬಂದಿಲ್ಲ, ಹೋಗುವ ಮೊದಲು ಆಕೆ ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿದ್ದಾಳೆ.ಪ್ರಿಯಾಂಕಾ ಒಂದು ಕೈಯಲ್ಲಿ ಕಸದ ಬಕೆಟ್, ಮತ್ತೊಂದು ಕೈಯಲ್ಲಿ ಬ್ಯಾಗ್ ತೆಗೆದುಕೊಂಡು ಹೋಗಿದ್ದಾಳೆ. ಪ್ರಿಯಾಂಕಾ ಮನೆಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪತ್ನಿಗಾಗಿ ಹಲವು ಕಡೆಗಳಲ್ಲಿ ಹುಡುಕಾಡಿದ ನಂತರ ಆಕೆ ಸಿಗದೇ ಹೋದ ಹಿನ್ನೆಲೆ ಶರತ್ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಗಲಗುಂಟೆ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ಪ್ರಿಯಾಂಕಾಗೆ ಮನೆ ಪಕ್ಕದಲ್ಲೇ ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದ ಪ್ರಭು ಎಂಬಾತನ ಜೊತೆ ಅನೈತಿಕ ಸಂಬಂಧವಿತ್ತು. ಪ್ರಿಯಾಂಕಾಗೆ ಕೆಲ ದಿನಗಳ ಹಿಂದಷ್ಟೇ ಈ ಕಟ್ಟಿಂಗ್ ಶಾಪ್ ಹೊಂದಿದ್ದ ಪ್ರಭು ಪರಿಚಯವಾಗಿದ್ದ. ಈ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿದೆ. ಪ್ರಿಯಾಂಕಾ ಪತಿ ಶರತ್ಕುಮಾರ್ ಕೆಲಸಕ್ಕೆ ಹೋಗ್ತಿದ್ದ ಸಮಯದಲ್ಲಿಯೇ ಪರಸ್ಪರ ಭೇಟಿಯಾಗ್ತಿದ್ದರು.
ಪ್ರಭು ಪ್ರಿಯಾಂಕಾ ಮೊಬೈಲ್ಗೆ ರಿಚಾರ್ಜ್ ಮಾಡ್ತಿದ್ದ.ತನ್ನ ಪತ್ನಿಗೆ ಮೊಬೈಲ್ ರಿಚಾರ್ಜ್ ಯಾರು ಮಾಡ್ತಿದ್ದಾರೆಂದು ಪತಿ ಶರತ್ಕುಮಾರ್ ಚೆಕ್ ಮಾಡಿದಾಗ ಇವರಿಬ್ಬರ ಪಲ್ಲಂಗದಾಟ ಬೆಳಕಿಗೆ ಬಂದಿತ್ತು. ವಿಚಾರ ಬೆಳಕಿಗೆ ಬಂದ ನಂತರ ಪತಿ ಶರತ್ಕುಮಾರ್ ಪತ್ನಿ ಪ್ರಿಯಾಂಕಳಿಗೆ ಎರಡ್ಮೂರು ಬಾರಿ ಬುದ್ದಿ ಹೇಳಿದ್ದ. ಆದರೂ ಕೇಳದ ಪ್ರಿಯಾಂಕಾ ಗೆಳೆಯ ಪ್ರಭು ಜೊತೆ ಓಡಿ ಹೋಗಿದ್ದಾಳೆ ಎಂದು ಪತಿ ಶರತ್ಕುಮಾರ್ ಆರೋಪಿಸಿದ್ದಾರೆ.








