ನವದೆಹಲಿ: ಅಫ್ಘಾನಿಸ್ತಾನದ ಖ್ಯಾತ ಸ್ಪಿನ್ನರ್ ರಶೀದ್ ಖಾನ್, ಭಾರತದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ವಿದೇಶಿ ಕ್ರಿಕೆಟಿಗರಲ್ಲಿ ಒಬ್ಬರು. ಐಪಿಎಲ್ ಮೂಲಕ ಭಾರತದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ರಶೀದ್ ಖಾನ್ ಅವರಿಗೆ ಭಾರತದ ಪೌರತ್ವ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಈ ಹಿಂದೆ ಹಲವು ಬಾರಿ ಒತ್ತಾಯಿಸಿದ್ದರು. ಇದೀಗ ಈ ಕುರಿತಾದ ಚರ್ಚೆಗೆ ರಶೀದ್ ಖಾನ್ ಸ್ವತಃ ಉತ್ತರ ನೀಡಿದ್ದಾರೆ.
ತಾನು ಭಾರತ ಮತ್ತು ಭಾರತೀಯರನ್ನು ತುಂಬಾ ಪ್ರೀತಿಸುತ್ತೇನೆ, ಆದರೆ ತನ್ನ ದೇಶ ಅಫ್ಘಾನಿಸ್ತಾನವೇ ತನಗೆ ಮೊದಲು ಎಂದು ರಶೀದ್ ಸ್ಪಷ್ಟಪಡಿಸಿದ್ದಾರೆ.ಕಳೆದ ಏಕದಿನ ವಿಶ್ವಕಪ್ ಮತ್ತು ಟಿ20 ಪಂದ್ಯಗಳ ವೇಳೆ ರಶೀದ್ ಅವರ ಅದ್ಭುತ ಪ್ರದರ್ಶನ ಕಂಡು, “ರಶೀದ್‌ಗೆ ಭಾರತದ ಪೌರತ್ವ ನೀಡಿ, ಅವರು ನಮ್ಮ ತಂಡದ ಪರ ಆಡಲಿ” ಎಂಬ ಅಭಿಯಾನ ಎಕ್ಸ್ (ಟ್ವಿಟರ್) ನಲ್ಲಿ ಜೋರಾಗಿತ್ತು.
ತಾನು ಇಂದು ಏನಾಗಿದ್ದೇನೋ ಅದು ಅಫ್ಘಾನಿಸ್ತಾನದಿಂದಾಗಿ. ಸಂಕಷ್ಟದಲ್ಲಿರುವ ತನ್ನ ದೇಶದ ಜನರ ಮುಖದಲ್ಲಿ ಕಿರುನಗೆ ಮೂಡಿಸುವುದು ಕ್ರಿಕೆಟಿಗನಾಗಿ ನನ್ನ ಮೊದಲ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.








