Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಾಗತಿಕ ಆಹಾರ ಬಿಕ್ಕಟ್ಟು: ಸಂಕಷ್ಟದಲ್ಲಿರುವ ಆಫ್ರಿಕಾ ರಾಷ್ಟ್ರಗಳ ನೆರವಿಗೆ ಧಾವಿಸಿದ ಭಾರತ !

19/04/2026 9:03 PM

ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ

19/04/2026 8:58 PM

Big Updates: ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಮಹಾ ಸ್ಫೋಟ; 23 ಕಾರ್ಮಿಕರ ಸಾವು, ಹಲವರಿಗೆ ಗಾಯ!

19/04/2026 8:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ
KARNATAKA

ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ

By kannadanewsnow0919/04/2026 8:58 PM

ಶಿವಮೊಗ್ಗ: ಸಾಗರ ತಾಲೂಕಿನ ಅದರಂತೆ ಗ್ರಾಮದಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣ ಮನೆಮಾಡಿದೆ. ಸುಮಾರು 300 ವರ್ಷಗಳ ಇತಿಹಾಸವಿರುವ, ಕೆಳದಿ ಅರಸರ ಕಾಲದ ಸಾಂಸ್ಕೃತಿಕ ಪರಂಪರೆಯ ಕಲ್ಲೇಶ್ವರ ದೇವಾಲಯವು ಈಗ ನೂತನ ರೂಪ ಪಡೆದಿದ್ದು, ಏಪ್ರಿಲ್ 20ರಿಂದ 23ರವರೆಗೆ ನಾಲ್ಕು ದಿನಗಳ ಕಾಲ ದೇವಾಲಯ ಪ್ರವೇಶ ಹಾಗೂ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮಗಳು ವೈಭವದಿಂದ ಜರುಗಲಿವೆ.

ಐತಿಹಾಸಿಕ ಹಿನ್ನೆಲೆ

ಕಲ್ಲೇಶ್ವರ ದೇವಸ್ಥಾನವನ್ನು ಸುಮಾರು ಮೂರು ಶತಮಾನಗಳ ಹಿಂದೆ ಕೆಳದಿ ಅರಸರು ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ. ಕಾಲಾನಂತರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಈ ದೇವಸ್ಥಾನವನ್ನು 2001ರಲ್ಲಿ ಒಮ್ಮೆ ಪುನರ್ ನಿರ್ಮಾಣ ಮಾಡಲಾಗಿತ್ತು. ಇದೀಗ ಗ್ರಾಮಸ್ಥರ ಒಗ್ಗಟ್ಟು ಮತ್ತು ದಾನಿಗಳ ಉದಾರ ಆರ್ಥಿಕ ಸಹಕಾರದಿಂದ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ನೂತನ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಲೋಕಾರ್ಪಣೆಗೆ ಸಿದ್ಧವಾಗಿದೆ.

ನಾಲ್ಕು ದಿನಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

ಏಪ್ರಿಲ್ 20 ಮತ್ತು 21: ಧಾರ್ಮಿಕ ವಿಧಿವಿಧಾನಗಳ ಆರಂಭ

  • ಏ. 20: ನೂತನ ವಿಗ್ರಹ ಉತ್ಸವ ಹಾಗೂ ವಿವಿಧ ಧಾರ್ಮಿಕ ವಿಧಿಗಳು ನಡೆಯಲಿವೆ.

  • ಏ. 21: ಪ್ರಧಾನ ಕಲಶ ಸ್ಥಾಪನೆ, ವಾಸ್ತುಹವನ, ಪೀಠಶುದ್ದಿ ಮತ್ತು ವಿಗ್ರಹ ಸ್ಥಾಪನೆಯಂತಹ ಪ್ರಮುಖ ಕಾರ್ಯಕ್ರಮಗಳು ಜರುಗಲಿವೆ.

ಏಪ್ರಿಲ್ 22: ಹೋಮ ಮತ್ತು ಮನರಂಜನೆ

  • ಬೆಳಿಗ್ಗೆ ಕಲಾವೃದ್ದಿ ಹೋಮ, ಬ್ರಹ್ಮಕಲಶ ಸ್ಥಾಪನೆ ನಡೆಯಲಿದೆ.

  • ಸಂಜೆ 7ಕ್ಕೆ ಶ್ರೀದೇವಿ ಭಜನಾ ಮಂಡಳಿಯಿಂದ ಭಜನೆ.

  • ರಾತ್ರಿ 9ಕ್ಕೆ ಅದರಂತೆ ಕಲ್ಲೇಶ್ವರ ನಾಟ್ಯ ಸಂಘದಿಂದ ‘ಕುಡುಕ ಕಟ್ಟಿದ ತಾಳಿ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ಏಪ್ರಿಲ್ 23: ಶಿಖರ ಪ್ರತಿಷ್ಠಾಪನೆ ಮತ್ತು ಧಾರ್ಮಿಕ ಸಭೆ

  • ಬೆಳಿಗ್ಗೆ ರುದ್ರಾಭಿಷೇಕ, ಕಲಶರೋಹಣ ಮತ್ತು ಪೂರ್ಣಾಹುತಿ ನಡೆದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.

ಗಣ್ಯರ ಉಪಸ್ಥಿತಿ ಮತ್ತು ಸನ್ಮಾನ

ಏಪ್ರಿಲ್ 23ರಂದು ನಡೆಯಲಿರುವ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ನಿಟ್ಟೂರು ಮಠದ ಶ್ರೀ ರೇಣುಕಾನಂದ ಸ್ವಾಮಿಗಳು ವಹಿಸಲಿದ್ದಾರೆ.

  • ಉದ್ಘಾಟನೆ: ಪರಶುರಾಮ ಕೆ.ಎನ್. (ವ್ಯವಸ್ಥಾಪಕ ನಿರ್ದೇಶಕರು, ಕೊಡಚಾದ್ರಿ ಚಿಟ್ಸ್).

  • ಅಧ್ಯಕ್ಷತೆ: ಬಿಳೇಕಲ್ ಕನ್ನಪ್ಪ (ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು).

  • ಗೌರವ ಸನ್ಮಾನ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಸಿಗಂದೂರು ಧರ್ಮದರ್ಶಿ ಡಾ. ಎಸ್. ರಾಮಪ್ಪ ಅವರಿಗೆ ಸನ್ಮಾನ ಮಾಡಲಾಗುವುದು.

  • ಅತಿಥಿಗಳು: ಶಾಸಕ ಗೋಪಾಲಕೃಷ್ಣ ಬೇಳೂರು, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಸಮಾರೋಪ

ಏಪ್ರಿಲ್ 23ರ ರಾತ್ರಿ 9:30ಕ್ಕೆ ವಿಶ್ವವಿಖ್ಯಾತ ಹಟ್ಟಿಯಂಗಡಿ ಮೇಳದಿಂದ ‘ಸಿರಿಸಿಂಗಾರಿ ಮತ್ತು ಮೀನಾಕ್ಷಿ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.

ಗ್ರಾಮದ ಇತಿಹಾಸದಲ್ಲಿ ಮೈಲಿಗಲ್ಲಾಗಲಿರುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲ್ಲೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಹಾಗೂ ಗ್ರಾಮ ಸುಧಾರಣಾ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

ಸಾಗರದಲ್ಲಿ ‘ಕಾಗೋಡು ಚಳುವಳಿ’ಗೆ 75ರ ಸಂಭ್ರಮ: ‘ಬದುಕಿಗಾಗಿ ಭೂಮಿ’ ಹೋರಾಟ ಎಂದಿಗೂ ಪ್ರಸ್ತುತವೆಂದ ಬಿ.ಆರ್.ಜಯಂತ್

ನಿಮ್ಮ ಮೇಲಿನ ಆರೋಪ ಸುಳ್ಳಾಗಲಿ: ತಂದೆ ವಿನಯ್ ಕುಲಕರ್ಣಿ ಪರ ಪುತ್ರಿ ವೈಶಾಲಿ ಭಾವನಾತ್ಮಕ ಪೋಸ್ಟ್!

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ‘ಕಾಗೋಡು ಚಳುವಳಿ’ಗೆ 75ರ ಸಂಭ್ರಮ: ‘ಬದುಕಿಗಾಗಿ ಭೂಮಿ’ ಹೋರಾಟ ಎಂದಿಗೂ ಪ್ರಸ್ತುತವೆಂದ ಬಿ.ಆರ್.ಜಯಂತ್

19/04/2026 8:16 PM2 Mins Read

ಸಾಗರದ ಮಾರಿಕಾಂಬಾ ರುದ್ರಭೂಮಿಯಲ್ಲಿ ವಿವಿಧ ಸಂಘಟನೆಗಳಿಂದ ಶ್ರಮದಾನ: ಸ್ವಚ್ಛತೆಗೆ ಸಾರ್ವಜನಿಕರಿಗೆ ಮನವಿ

19/04/2026 8:07 PM2 Mins Read

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

19/04/2026 8:05 PM2 Mins Read
Recent News

ಜಾಗತಿಕ ಆಹಾರ ಬಿಕ್ಕಟ್ಟು: ಸಂಕಷ್ಟದಲ್ಲಿರುವ ಆಫ್ರಿಕಾ ರಾಷ್ಟ್ರಗಳ ನೆರವಿಗೆ ಧಾವಿಸಿದ ಭಾರತ !

19/04/2026 9:03 PM

ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ

19/04/2026 8:58 PM

Big Updates: ತಮಿಳುನಾಡು ಪಟಾಕಿ ಕಾರ್ಖಾನೆಯಲ್ಲಿ ಮಹಾ ಸ್ಫೋಟ; 23 ಕಾರ್ಮಿಕರ ಸಾವು, ಹಲವರಿಗೆ ಗಾಯ!

19/04/2026 8:44 PM

‘ರಾಷ್ಟ್ರದ ಹಕ್ಕನ್ನು ಕಸಿದುಕೊಳ್ಳಲು ಇವನ್ಯಾರು?’: ಟ್ರಂಪ್ ವಿರುದ್ಧ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಕೆಂಡಾಮಂಡಲ!

19/04/2026 8:25 PM
State News
KARNATAKA

ಸಾಗರದ ಅದರಂತೆ ಗ್ರಾಮದಲ್ಲಿ ಕಲ್ಲೇಶ್ವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆ: ನಾಳೆ ನೂತನ ಆಲಯ ಲೋಕಾರ್ಪಣೆ

By kannadanewsnow0919/04/2026 8:58 PM KARNATAKA 2 Mins Read

ಶಿವಮೊಗ್ಗ: ಸಾಗರ ತಾಲೂಕಿನ ಅದರಂತೆ ಗ್ರಾಮದಲ್ಲಿ ಭಕ್ತಿ ಮತ್ತು ಸಂಭ್ರಮದ ವಾತಾವರಣ ಮನೆಮಾಡಿದೆ. ಸುಮಾರು 300 ವರ್ಷಗಳ ಇತಿಹಾಸವಿರುವ, ಕೆಳದಿ…

ಸಾಗರದಲ್ಲಿ ‘ಕಾಗೋಡು ಚಳುವಳಿ’ಗೆ 75ರ ಸಂಭ್ರಮ: ‘ಬದುಕಿಗಾಗಿ ಭೂಮಿ’ ಹೋರಾಟ ಎಂದಿಗೂ ಪ್ರಸ್ತುತವೆಂದ ಬಿ.ಆರ್.ಜಯಂತ್

19/04/2026 8:16 PM

ಸಾಗರದ ಮಾರಿಕಾಂಬಾ ರುದ್ರಭೂಮಿಯಲ್ಲಿ ವಿವಿಧ ಸಂಘಟನೆಗಳಿಂದ ಶ್ರಮದಾನ: ಸ್ವಚ್ಛತೆಗೆ ಸಾರ್ವಜನಿಕರಿಗೆ ಮನವಿ

19/04/2026 8:07 PM

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

19/04/2026 8:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.