ಆಗ್ರಾ: ಬಾಲಿವುಡ್ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈ ನಿವಾಸದ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಆಗ್ರಾದಲ್ಲಿ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಮುಂಬೈ ಕ್ರೈಮ್ ಬ್ರಾಂಚ್ ಮತ್ತು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (UP STF) ಜಂಟಿ ಕಾರ್ಯಾಚರಣೆ ನಡೆಸಿ ಈ ಬಂಧನ ಮಾಡಿದೆ.
ಬಂಧಿತನನ್ನು ಆಗ್ರಾದ ಅಶೋಕ್ ನಗರದ ನಿವಾಸಿ ಪ್ರದೀಪ್ ಕುಮಾರ್ ಅಲಿಯಾಸ್ ‘ಗಾತ್’ (28) ಎಂದು ಗುರುತಿಸಲಾಗಿದೆ.
ಗ್ಯಾಂಗ್ ನಂಟು: ಈತ ಕುಖ್ಯಾತ ಗ್ಯಾಂಗ್ಸ್ಟರ್ ಶುಭಂ ಲೋಂಕರ್ ಗ್ಯಾಂಗ್ನ ಸದಸ್ಯನಾಗಿದ್ದು,Underworld ನಲ್ಲಿ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 1, 2026 ರಂದು ಜುಹು ಪ್ರದೇಶದಲ್ಲಿರುವ ರೋಹಿತ್ ಶೆಟ್ಟಿ ಅವರ ನಿವಾಸ ‘ಶೆಟ್ಟಿ ಟವರ್’ ಮುಂದೆ ದುಷ್ಕರ್ಮಿಗಳು ಐದು ಸುತ್ತು ಗುಂಡಿನ ದಾಳಿ ನಡೆಸಿದ್ದರು.ಈ ದಾಳಿಯು ಕೇವಲ ಬೆದರಿಕೆ ಹಾಕಲು ಮಾತ್ರವಲ್ಲದೆ, ಚಲನಚಿತ್ರರಂಗದಲ್ಲಿ ಭಯ ಹುಟ್ಟಿಸಿ ಹಣ ವಸೂಲಿ ಮಾಡುವ (Extortion) ಉದ್ದೇಶವನ್ನು ಹೊಂದಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.








