ದಾವಣಗೆರೆ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳನ್ನು ಪೀಠದಿಂದ ಇತ್ತೀಚಿಗೆ ಉದ್ಘಾಟನೆ ಗೊಳಿಸಲಾಗಿತ್ತು ಇದೀಗ ಶ್ರೀಗಳ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ.
ಹೌದು ವಚನಾನಂದ ಶ್ರೀಗಳು ವಿರುದ್ಧ ಮಕ್ಕಳ ಕಲ್ಯಾಣ ಮಂಡಳಿಗೆ ಇದೀಗ ದೂರು ನೀಡಲಾಗಿದೆ ಇದಕ್ಕೆ ಕಾರಣ ಮಕ್ಕಳಿಂದ ಶ್ರೀಗಳು ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿದೆ ಮಕ್ಕಳಿಗೆ ಶ್ರೀಗಳು ಹಿಂಸೆ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ ಕೆಲ ಮಕ್ಕಳು ಹಾಗೂ ಪಾಲಕರಿಂದ ಶ್ರೀಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದು ದೂರು ನೀಡಿದ್ದಾರೆ.
ಈ ಹಿನ್ನೆಲೆ ಪಂಚಮಸಾಲಿ ಗುರು ಪೀಠಕ್ಕೆ ಮಕ್ಕಳ ಕಲ್ಯಾಣ ಮಂಡಳಿ ಸದಸ್ಯರು ಭೇಟಿ ನೀಡಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ಐವರು ಸದಸ್ಯರು ಇದೀಗ ಪಂಚಮಸಾಲಿ ಗುರುಪೀಠಕ್ಕೆ ಭೇಟಿ ನೀಡಿದ್ದಾರೆ. ಸಮಿತಿ ಸದಸ್ಯರಿಂದ ವಚನಾನಂದ ಶ್ರೀಗಳ ವಿಚಾರಣೆ ನಡೆಯುತ್ತಾ ಎಂದು ಕಾದು ನೋಡಬೇಕಾಗಿದೆ.








