ಬೆಂಗಳೂರು : ಕೋಳಿ ತಿನ್ನುವವರೇ ಇದೀಗ ಆದಷ್ಟು ಎಚ್ಚರದಿಂದ ಇರುವುದು ಒಳ್ಳೆಯದು ಏಕೆಂದರೆ ರಾಜ್ಯಕ್ಕೆ H5N1 (ಹಕ್ಕಿ ಜ್ವರ) ಎಂಟ್ರಿ ಕೊಟ್ಟಿದ್ದು ಬೆಂಗಳೂರಿನ ಹೆಸರಘಟ್ಟದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದೆ.ಕೋಳಿಗಳಲ್ಲಿ ಈ ಒಂದು ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಪೌಲ್ಟ್ರಿ ಫಾರಂ ನಲ್ಲಿ ತಪಾಸಣೆ ನಡೆಸಲಾಗಿದ್ದು ತಪಾಸನೆ ವೇಳೆ ಕೋಳಿಗಳಲ್ಲಿ H5N1 ವೈರಸ್ ಇರುವುದು ಪತ್ತೆಯಾಗಿದೆ.
ಹಾಗಾಗಿ ಫಾರಂ ನಲ್ಲಿರುವ 7,400ಕ್ಕೂ ಹೆಚ್ಚು ಕೋಳಿಗಳ ಜೀವಂತ ಸಮಾಧಿ ಮಾಡಲಾಗಿದ್ದು, ಸುಮಾರು 8 ಬಗೆಯ ತಳಿಯ ಸಾವಿರಾರು ಕೋಳಿಗಳ ಮಾರಣಹೋಮ ಆಗಿದೆ ಮೈಸೂರು ನಾಟಿಕೋಳಿ, ಕಾವೇರಿ, ಗಿರಿರಾಜ ಸೇರಿದಂತೆ 8 ತಳಿಗಳ ಸಾವಿರಾರು ಕೋಳಿಗಳನ್ನು ಜೀವಂತ ಸಮಾಧಿ ಮಾಡಲಾಗಿದೆ. ಸುಮಾರು 7400ಕ್ಕೂ ಹೆಚ್ಚು ಕೋಳಿಗಳನ್ನು ಜೀವಂತ ಸಮಾಧಿ ಮಾಡಲಾಗಿದ್ದು ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಈ ಒಂದು ಕ್ರಮ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಪಶು ವೈದ್ಯಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.







