Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಜೈ ಶ್ರೀ ರಾಮ್’ ಅಂದವರಿಗೆ ಚಿಕಿತ್ಸೆಯಲ್ಲಿ ಡಿಸ್ಕೌಂಟ್!: ವೈದ್ಯನ ವಿಭಿನ್ನ ಆಫರ್‌ಗೆ ವೈದ್ಯಕೀಯ ಮಂಡಳಿ ಗರಂ !

16/04/2026 7:25 PM

ಸಾಗರದಲ್ಲಿ ಸಿಪಿಐ ಪುಲ್ಲಯ್ಯ ರಾಥೋಡ್ ಕರ್ತವ್ಯಲೋಪ ಖಂಡಿಸಿ ಠಾಣೆ ಎದುರು ಮಲ್ಲಿಕಾರ್ಜುನ ಹಕ್ರೆ ದಿಢೀರ್ ಪ್ರತಿಭಟನೆ, ಆಕ್ರೋಶ

16/04/2026 7:19 PM

ಸನ್‌ರೈಸರ್ಸ್ ತಂಡಕ್ಕೆ ಭಾರಿ ಆಘಾತ: ಕೇವಲ ಎರಡು ಪಂದ್ಯಗಳ ಬೆನ್ನಲ್ಲೇ ಐಪಿಎಲ್‌ನಿಂದ ಹೊರಬಿದ್ದ ಇಂಗ್ಲೆಂಡ್ ವೇಗಿ!

16/04/2026 7:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ಸಿಪಿಐ ಪುಲ್ಲಯ್ಯ ರಾಥೋಡ್ ಕರ್ತವ್ಯಲೋಪ ಖಂಡಿಸಿ ಠಾಣೆ ಎದುರು ಮಲ್ಲಿಕಾರ್ಜುನ ಹಕ್ರೆ ದಿಢೀರ್ ಪ್ರತಿಭಟನೆ, ಆಕ್ರೋಶ
KARNATAKA

ಸಾಗರದಲ್ಲಿ ಸಿಪಿಐ ಪುಲ್ಲಯ್ಯ ರಾಥೋಡ್ ಕರ್ತವ್ಯಲೋಪ ಖಂಡಿಸಿ ಠಾಣೆ ಎದುರು ಮಲ್ಲಿಕಾರ್ಜುನ ಹಕ್ರೆ ದಿಢೀರ್ ಪ್ರತಿಭಟನೆ, ಆಕ್ರೋಶ

By kannadanewsnow0916/04/2026 7:19 PM

ಶಿವಮೊಗ್ಗ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರಿಂದ ದೂರು ಸ್ವೀಕರಿಸಲು ವಿಳಂಬ ಮಾಡಿದ ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ವೃತ್ತ ನಿರೀಕ್ಷಕ (ಸಿಪಿಐ) ಪುಲ್ಲಯ್ಯ ರಾಥೋಡ್ ಅವರ ಕ್ರಮವನ್ನು ಖಂಡಿಸಿ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಅವರು ಇಂದು ಸಾಗರ  ಪೇಟೆ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ಘಟನೆಯ ಹಿನ್ನೆಲೆ:

ಇಂದು ಬೆಳಿಗ್ಗೆ ಸಾಗರ ಪಟ್ಟಣದ ಸಿಗಂದೂರು ರಸ್ತೆಯಲ್ಲಿ ಕೆಲಸಕ್ಕೆ ಬರುತ್ತಿದ್ದ ಹುಲಿಮನೆ ಗ್ರಾಮದ ಲಕ್ಷ್ಮಣ (65) ಎಂಬುವವರಿಗೆ ಎದುರಿನಿಂದ ಬಂದ ಕ್ರೇನ್ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಲಕ್ಷ್ಮಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ದೂರು ನೀಡಲು ಮೃತರ ಸಂಬಂಧಿಕರು ಸಾಗರ ಪೇಟೆ ಠಾಣೆಗೆ ಬಂದಾಗ, ಸಿಪಿಐ ಪುಲ್ಲಯ್ಯ ರಾಥೋಡ್ ಅವರು ದೂರು ಪಡೆಯಲು ವಿಳಂಬ ಮಾಡಿ ಸತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಲ್ಲಿಕಾರ್ಜುನ ಹಕ್ರೆಗೆ ಬಂಧನದ ಬೆದರಿಕೆ:

ವಿಷಯ ತಿಳಿದು ಠಾಣೆಗೆ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಅವರು ಆಗಮಿಸಿ ದೂರು ಪಡೆಯಲು ಏಕೆ ವಿಳಂಬ ಎಂಬುದಾಗಿ ಪ್ರಶ್ನಿಸಿದಾಗ, ಸಿಪಿಐ ಅವರು ಹಕ್ರೆ ಅವರ ಮೇಲೆ ಕೂಗಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, “ನಿಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಲ್ಲಿಕಾರ್ಜುನ ಹಕ್ರೆ ದೂರಿದ್ದಾರೆ.

ಪ್ರತಿಭಟನಾಕಾರರ ಗಂಭೀರ ಆರೋಪಗಳು:

ಇಂದು ಸಾಗರ ಪೇಟೆ ಠಾಣೆ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಹಕ್ರೆ ಅವರು ಈ ಕೆಳಗಿನ ಆರೋಪಗಳನ್ನು ಮಾಡಿದ್ದಾರೆ:

  • ಹಣ ವಸೂಲಿಯ ಸಂಚು: ಮೃತ ವ್ಯಕ್ತಿಯ ಕುಟುಂಬಸ್ಥರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದಲೇ ದೂರು ಸ್ವೀಕರಿಸಲು ವಿಳಂಬ ಮಾಡಲಾಗಿದೆ.

  • ಅಸಭ್ಯ ವರ್ತನೆ: ಜನಪರ ಹೋರಾಟಗಾರನಾದ ನನ್ನ ಮೇಲೆ ಕೆಟ್ಟ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ ಮತ್ತು ಹಲ್ಲೆಗೆ ಮುಂದಾಗಿದ್ದಾರೆ.

  • ತಾರತಮ್ಯ: ಮೃತ ಲಕ್ಷ್ಮಣ ಅವರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದರಿಂದಲೇ ಹೀಗೆ ನಡೆಸಿಕೊಳ್ಳಲಾಗಿದೆಯೇ? ಎಂದು ಹಕ್ರೆ ಪ್ರಶ್ನಿಸಿದ್ದಾರೆ.

ನಾನು ಯಾವುದೇ ಸಂವಿಧಾನ ವಿರೋಧಿ ಪದ ಬಳಸಿಲ್ಲ. ಸಂವಿಧಾನಾತ್ಮಕವಾಗಿ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ದರ್ಪ ತೋರಿದ್ದಾರೆ. ಕೂಡಲೇ ಕರ್ತವ್ಯಲೋಪ ಎಸಗಿದ ಸಾಗರ ಪೇಟೆ ಠಾಣೆಯ ಸಿಪಿಐ ಪುಲ್ಲಯ್ಯ ರಾಥೋಡ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಚಂದ್ರು ಹುಲಿಮನೆ, ವಿರೂಪಾಕ್ಷ, ಅರುಣ ಪೂಜಾರಿ, ಮಾಪು ಇಕ್ಕೇರಿ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ವರದಿ; ವಸಂತ ಬಿ ಈಶ್ವರಗೆರೆ ಸಂಪಾದಕರು…

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2: ಏ.18ರವರೆಗೆ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ ವಿಸ್ತರಣೆ

BIG BREAKING: ಕ್ಷೇತ್ರ ಪುನರ್ವಿಂಗಡಣೆ ನಂತರ ಕರ್ನಾಟಕದ ಸಂಸದರ ಸಂಖ್ಯೆ 28ರಿಂದ 42ಕ್ಕೆ ಏರಿಕೆ: ಅಮಿತ್ ಶಾ ಮಾಹಿತಿ

ಸಿನಿಮಾ ಪೈರಸಿಗೆ ಬ್ರೇಕ್: ‘ಜನ ನಾಯಕನ್’ ಚಿತ್ರದ ಅಕ್ರಮ ಪ್ರಸಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ!

Share. Facebook Twitter LinkedIn WhatsApp Email

Related Posts

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2: ಏ.18ರವರೆಗೆ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ ವಿಸ್ತರಣೆ

16/04/2026 6:48 PM1 Min Read

ತುಮಕೂರಿನ ಮಧುಗಿರಿಯಲ್ಲಿ ಹೃದಯಾಘಾತದಿಂದ ನ್ಯಾಯಧೀಶೆ ಕಾಂತಮ್ಮ ಸಾವು

16/04/2026 6:18 PM1 Min Read

ರಾಜ್ಯದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಾದಂತೆ ಕ್ರಮ ಕೈಗೊಳ್ಳಿ: ಡಿಸಿಗಳಿಗೆ ಸಿಎಂ ಸೂಚನೆ

16/04/2026 6:06 PM3 Mins Read
Recent News

‘ಜೈ ಶ್ರೀ ರಾಮ್’ ಅಂದವರಿಗೆ ಚಿಕಿತ್ಸೆಯಲ್ಲಿ ಡಿಸ್ಕೌಂಟ್!: ವೈದ್ಯನ ವಿಭಿನ್ನ ಆಫರ್‌ಗೆ ವೈದ್ಯಕೀಯ ಮಂಡಳಿ ಗರಂ !

16/04/2026 7:25 PM

ಸಾಗರದಲ್ಲಿ ಸಿಪಿಐ ಪುಲ್ಲಯ್ಯ ರಾಥೋಡ್ ಕರ್ತವ್ಯಲೋಪ ಖಂಡಿಸಿ ಠಾಣೆ ಎದುರು ಮಲ್ಲಿಕಾರ್ಜುನ ಹಕ್ರೆ ದಿಢೀರ್ ಪ್ರತಿಭಟನೆ, ಆಕ್ರೋಶ

16/04/2026 7:19 PM

ಸನ್‌ರೈಸರ್ಸ್ ತಂಡಕ್ಕೆ ಭಾರಿ ಆಘಾತ: ಕೇವಲ ಎರಡು ಪಂದ್ಯಗಳ ಬೆನ್ನಲ್ಲೇ ಐಪಿಎಲ್‌ನಿಂದ ಹೊರಬಿದ್ದ ಇಂಗ್ಲೆಂಡ್ ವೇಗಿ!

16/04/2026 7:10 PM

BREAKING: ದೆಹಲಿ ವಿಮಾನ ನಿಲ್ದಾಣದಲ್ಲಿ ಆತಂಕ: ನಿಂತಿದ್ದ ಅಕಾಸಾ ಏರ್ ವಿಮಾನಕ್ಕೆ ಡಿಕ್ಕಿ ಹೊಡೆದ ಸ್ಪೈಸ್‌ಜೆಟ್!

16/04/2026 7:01 PM
State News
KARNATAKA

ಸಾಗರದಲ್ಲಿ ಸಿಪಿಐ ಪುಲ್ಲಯ್ಯ ರಾಥೋಡ್ ಕರ್ತವ್ಯಲೋಪ ಖಂಡಿಸಿ ಠಾಣೆ ಎದುರು ಮಲ್ಲಿಕಾರ್ಜುನ ಹಕ್ರೆ ದಿಢೀರ್ ಪ್ರತಿಭಟನೆ, ಆಕ್ರೋಶ

By kannadanewsnow0916/04/2026 7:19 PM KARNATAKA 2 Mins Read

ಶಿವಮೊಗ್ಗ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರಿಂದ ದೂರು ಸ್ವೀಕರಿಸಲು ವಿಳಂಬ ಮಾಡಿದ ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ವೃತ್ತ ನಿರೀಕ್ಷಕ…

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2: ಏ.18ರವರೆಗೆ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ ವಿಸ್ತರಣೆ

16/04/2026 6:48 PM

ತುಮಕೂರಿನ ಮಧುಗಿರಿಯಲ್ಲಿ ಹೃದಯಾಘಾತದಿಂದ ನ್ಯಾಯಧೀಶೆ ಕಾಂತಮ್ಮ ಸಾವು

16/04/2026 6:18 PM

ರಾಜ್ಯದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಗಾದಂತೆ ಕ್ರಮ ಕೈಗೊಳ್ಳಿ: ಡಿಸಿಗಳಿಗೆ ಸಿಎಂ ಸೂಚನೆ

16/04/2026 6:06 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.