ನವದೆಹಲಿ: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ. ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ದೇಶಾದ್ಯಂತ ಇರುವ ತನ್ನ ವಿವಿಧ ಕಚೇರಿಗಳಲ್ಲಿ ಖಾಲಿ ಇರುವ 180 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ lichousing.com ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು:
-
ಅರ್ಜಿ ಸಲ್ಲಿಕೆ ಆರಂಭ: ಏಪ್ರಿಲ್ 16, 2026
-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 30, 2026
-
ಆನ್‌ಲೈನ್ ಪರೀಕ್ಷೆ ನಡೆಯುವ ಅಂದಾಜು ಸಮಯ: ಜೂನ್ 2026ರ ಮೊದಲ ವಾರ
ಅರ್ಹತೆ ಮತ್ತು ವಯೋಮಿತಿ:
-
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಕನಿಷ್ಠ ಶೇ. 55 ರಷ್ಟು ಅಂಕಗಳೊಂದಿಗೆ ಪದವಿ (Graduate) ಪೂರ್ಣಗೊಳಿಸಿರಬೇಕು. ಪತ್ರವ್ಯವಹಾರ ಅಥವಾ ಅರೆಕಾಲಿಕ ಶಿಕ್ಷಣದ ಮೂಲಕ ಪದವಿ ಪಡೆದವರು ಅರ್ಹರಲ್ಲ.
-
ವಯೋಮಿತಿ: ಏಪ್ರಿಲ್ 1, 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 21 ರಿಂದ 30 ವರ್ಷಗಳ ಒಳಗಿರಬೇಕು (ಅಂದರೆ, 02.04.1996 ಕ್ಕಿಂತ ಮೊದಲು ಮತ್ತು 01.04.2005 ರ ನಂತರ ಜನಿಸಿರಬಾರದು).
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
-
ಆನ್‌ಲೈನ್ ಪರೀಕ್ಷೆ: ಇದು 200 ಅಂಕಗಳ ವಸ್ತುನಿಷ್ಠ (Objective) ಮಾದರಿಯ ಪರೀಕ್ಷೆಯಾಗಿದ್ದು, ಇಂಗ್ಲಿಷ್ ಭಾಷೆ, ಲಾಜಿಕಲ್ ರೀಸನಿಂಗ್, ಸಾಮಾನ್ಯ ಜ್ಞಾನ, ನ್ಯೂಮರಿಕಲ್ ಎಬಿಲಿಟಿ ಮತ್ತು ಕಂಪ್ಯೂಟರ್ ಕೌಶಲ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆಯ ಅವಧಿ 120 ನಿಮಿಷಗಳು.
-
ನೆಗೆಟಿವ್ ಮಾರ್ಕಿಂಗ್: ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
-
ಸಂದರ್ಶನ: ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಅರ್ಜಿ ಶುಲ್ಕ:
-
ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 800 ರೂ. ಇರಲಿದೆ. ಇದರ ಜೊತೆಗೆ ಶೇ. 18ರಷ್ಟು ಜಿಎಸ್‌ಟಿ ಅನ್ವಯವಾಗುತ್ತದೆ. ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕವೇ ಪಾವತಿಸಬೇಕು.
ಹೆಚ್ಚಿನ ವಿವರಗಳಿಗಾಗಿ ಮತ್ತು ಅಧಿಕೃತ ಅಧಿಸೂಚನೆಯನ್ನು ಓದಲು ಅಭ್ಯರ್ಥಿಗಳು ಎಲ್‌ಐಸಿ ಎಚ್‌ಎಫ್‌ಎಲ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಕೋರಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ ಆಘಾತ; ಗಾಯದ ಸಮಸ್ಯೆಯಿಂದ ಸ್ಟಾರ್ ವೇಗಿ ಖಲೀಲ್ ಅಹ್ಮದ್ ಐಪಿಎಲ್ 2026ರ ಟೂರ್ನಿಯಿಂದ ಔಟ್!








