Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಪ್ರಶಸ್ತಿಗಳ ಘೋಷಣೆ: ದೇವನೂರು ಮಹಾದೇವ ಅವರಿಗೆ ‘ಪಂಪ ಪ್ರಶಸ್ತಿ’, ಸಿದ್ದರಾಮ ಶರಣರಿಗೆ ‘ಬಸವ ಪುರಸ್ಕಾರ’

15/04/2026 7:59 PM

BIG NEWS: ಲಂಚ ಸ್ವೀಕರಿಸುತ್ತಿದ್ದ ಪಿಡಿಓಗೆ 7 ವರ್ಷ ಜೈಲು ಶಿಕ್ಷೆ: ಸುಳ್ಳು ಸಾಕ್ಷಿ ನುಡಿದ ರೈತನ ವಿರುದ್ಧವೂ ಕೇಸ್!

15/04/2026 7:53 PM

‘ನೌಕಾಪಡೆ ದಿಗ್ಬಂಧನ ಮುಂದುವರಿದರೆ ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿ ಬಂದ್!’: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

15/04/2026 7:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಲಂಚ ಸ್ವೀಕರಿಸುತ್ತಿದ್ದ ಪಿಡಿಓಗೆ 7 ವರ್ಷ ಜೈಲು ಶಿಕ್ಷೆ: ಸುಳ್ಳು ಸಾಕ್ಷಿ ನುಡಿದ ರೈತನ ವಿರುದ್ಧವೂ ಕೇಸ್!
KARNATAKA

BIG NEWS: ಲಂಚ ಸ್ವೀಕರಿಸುತ್ತಿದ್ದ ಪಿಡಿಓಗೆ 7 ವರ್ಷ ಜೈಲು ಶಿಕ್ಷೆ: ಸುಳ್ಳು ಸಾಕ್ಷಿ ನುಡಿದ ರೈತನ ವಿರುದ್ಧವೂ ಕೇಸ್!

By kannadanewsnow0915/04/2026 7:53 PM

ರಾಯಚೂರು: ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ (PDO) ಜಿಲ್ಲಾ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಘಟನೆಯ ಹಿನ್ನೆಲೆ:

2017ರಲ್ಲಿ ಲಿಂಗಸುಗೂರು ತಾಲೂಕಿನ ಗೊರೇಬಾಳ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹ್ಮದ ಖಾಜಾ, ಶೇಡ್ ನಿರ್ಮಾಣಕ್ಕೆ ಸಹಾಯಧನ ಬಿಡುಗಡೆ ಮಾಡಲು ಚೇತನ್ ಎಂಬ ರೈತನಿಂದ 15 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಈ ಬಗ್ಗೆ ರೈತ ನೀಡಿದ ದೂರಿನ ಆಧಾರದ ಮೇಲೆ ಅಂದಿನ ಎಸಿಬಿ (ACB) ಪೊಲೀಸರು ದಾಳಿ ನಡೆಸಿ, ಲಂಚದ ಹಣದೊಂದಿಗೆ ಪಿಡಿಓನನ್ನು ವಶಕ್ಕೆ ಪಡೆದಿದ್ದರು.

ನ್ಯಾಯಾಲಯದ ತೀರ್ಪು:

ದೀರ್ಘಕಾಲ ನಡೆದ ಈ ಪ್ರಕರಣದ ವಿಚಾರಣೆಯ ನಂತರ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ನ್ಯಾಯಾಲಯವು ಆರೋಪಿಗೆ ಶಿಕ್ಷೆ ಪ್ರಕಟಿಸಿದೆ. ಶಿಕ್ಷೆಯ ವಿವರ ಹೀಗಿದೆ:

  • 7 ವರ್ಷ ಜೈಲು ಶಿಕ್ಷೆ.

  • 75,000 ರೂಪಾಯಿ ದಂಡ.

ಸುಳ್ಳು ಸಾಕ್ಷಿ ನುಡಿದವನಿಗೂ ಸಂಕಷ್ಟ:

ಈ ಪ್ರಕರಣದಲ್ಲಿ ಒಂದು ವಿಶೇಷ ಬೆಳವಣಿಗೆ ನಡೆದಿದೆ. ಮೊದಲು ದೂರು ನೀಡಿದ್ದ ಚೇತನ್, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಪಿಡಿಓ ಪರವಾಗಿ ಅಂದರೆ ‘ಪ್ರತಿಕೂಲ ಸಾಕ್ಷಿ’ (Hostile Witness) ನುಡಿದಿದ್ದನು. ಅಂದರೆ, ಲಂಚ ಕೇಳಿಲ್ಲವೆಂದು ಸುಳ್ಳು ಹೇಳಿದ್ದನು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ನ್ಯಾಯಪೀಠದ ಮುಂದೆ ಸುಳ್ಳು ಸಾಕ್ಷಿ ನೀಡಿದ ಚೇತನ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನ್ಯಾಯಾಲಯದ ಶಿರಸ್ತೇದಾರರಿಗೆ ಆದೇಶ ನೀಡಿದೆ.

ಈ ತೀರ್ಪು ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದರ ಜೊತೆಗೆ, ನ್ಯಾಯಾಲಯದಲ್ಲಿ ಸುಳ್ಳು ಸಾಕ್ಷಿ ನುಡಿಯುವವರಿಗೂ ಕಾನೂನಿನ ಬಿಸಿ ಮುಟ್ಟಿಸಿದೆ.

BREAKING: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹತ್ವದ ಬದಲಾವಣೆ: ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗೆ ರಾಜ್ಯಪಾಲರ ಅಂಕಿತ!

ಸಾಗರದಲ್ಲಿ ಶಿಕ್ಷಕರ ಸಂಘದ ಚುನಾವಣಾ ಕಣ ಸಜ್ಜು; ‘ಸ್ವಾಭಿಮಾನಿ ಶಿಕ್ಷಕ ಬಳಗ’ದಿಂದ ಭರ್ಜರಿ ಪ್ರಚಾರ

Share. Facebook Twitter LinkedIn WhatsApp Email

Related Posts

ರಾಜ್ಯ ಪ್ರಶಸ್ತಿಗಳ ಘೋಷಣೆ: ದೇವನೂರು ಮಹಾದೇವ ಅವರಿಗೆ ‘ಪಂಪ ಪ್ರಶಸ್ತಿ’, ಸಿದ್ದರಾಮ ಶರಣರಿಗೆ ‘ಬಸವ ಪುರಸ್ಕಾರ’

15/04/2026 7:59 PM2 Mins Read

BREAKING: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹತ್ವದ ಬದಲಾವಣೆ: ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗೆ ರಾಜ್ಯಪಾಲರ ಅಂಕಿತ!

15/04/2026 7:51 PM1 Min Read

ಸಾಗರದಲ್ಲಿ ಶಿಕ್ಷಕರ ಸಂಘದ ಚುನಾವಣಾ ಕಣ ಸಜ್ಜು; ‘ಸ್ವಾಭಿಮಾನಿ ಶಿಕ್ಷಕ ಬಳಗ’ದಿಂದ ಭರ್ಜರಿ ಪ್ರಚಾರ

15/04/2026 7:33 PM1 Min Read
Recent News

ರಾಜ್ಯ ಪ್ರಶಸ್ತಿಗಳ ಘೋಷಣೆ: ದೇವನೂರು ಮಹಾದೇವ ಅವರಿಗೆ ‘ಪಂಪ ಪ್ರಶಸ್ತಿ’, ಸಿದ್ದರಾಮ ಶರಣರಿಗೆ ‘ಬಸವ ಪುರಸ್ಕಾರ’

15/04/2026 7:59 PM

BIG NEWS: ಲಂಚ ಸ್ವೀಕರಿಸುತ್ತಿದ್ದ ಪಿಡಿಓಗೆ 7 ವರ್ಷ ಜೈಲು ಶಿಕ್ಷೆ: ಸುಳ್ಳು ಸಾಕ್ಷಿ ನುಡಿದ ರೈತನ ವಿರುದ್ಧವೂ ಕೇಸ್!

15/04/2026 7:53 PM

‘ನೌಕಾಪಡೆ ದಿಗ್ಬಂಧನ ಮುಂದುವರಿದರೆ ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿ ಬಂದ್!’: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

15/04/2026 7:53 PM

BREAKING: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹತ್ವದ ಬದಲಾವಣೆ: ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗೆ ರಾಜ್ಯಪಾಲರ ಅಂಕಿತ!

15/04/2026 7:51 PM
State News
KARNATAKA

ರಾಜ್ಯ ಪ್ರಶಸ್ತಿಗಳ ಘೋಷಣೆ: ದೇವನೂರು ಮಹಾದೇವ ಅವರಿಗೆ ‘ಪಂಪ ಪ್ರಶಸ್ತಿ’, ಸಿದ್ದರಾಮ ಶರಣರಿಗೆ ‘ಬಸವ ಪುರಸ್ಕಾರ’

By kannadanewsnow0915/04/2026 7:59 PM KARNATAKA 2 Mins Read

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನೀಡುವ 2025-26ನೇ ಸಾಲಿನ ವಿವಿಧ ಪ್ರತಿಷ್ಠಿತ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು…

BIG NEWS: ಲಂಚ ಸ್ವೀಕರಿಸುತ್ತಿದ್ದ ಪಿಡಿಓಗೆ 7 ವರ್ಷ ಜೈಲು ಶಿಕ್ಷೆ: ಸುಳ್ಳು ಸಾಕ್ಷಿ ನುಡಿದ ರೈತನ ವಿರುದ್ಧವೂ ಕೇಸ್!

15/04/2026 7:53 PM

BREAKING: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹತ್ವದ ಬದಲಾವಣೆ: ಇವಿಎಂ ಬದಲು ಬ್ಯಾಲೆಟ್ ಪೇಪರ್‌ಗೆ ರಾಜ್ಯಪಾಲರ ಅಂಕಿತ!

15/04/2026 7:51 PM

ಸಾಗರದಲ್ಲಿ ಶಿಕ್ಷಕರ ಸಂಘದ ಚುನಾವಣಾ ಕಣ ಸಜ್ಜು; ‘ಸ್ವಾಭಿಮಾನಿ ಶಿಕ್ಷಕ ಬಳಗ’ದಿಂದ ಭರ್ಜರಿ ಪ್ರಚಾರ

15/04/2026 7:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.