Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ | Pahlaj Nihalani passes away

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೂರಕ್ಕೂ ಹೆಚ್ಚು ದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಆಚರಣೆ; ಮದ್ದೂರು ಶಾಸಕ ಕೆ.ಎಂ.ಉದಯ್
KARNATAKA

ನೂರಕ್ಕೂ ಹೆಚ್ಚು ದೇಶಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಆಚರಣೆ; ಮದ್ದೂರು ಶಾಸಕ ಕೆ.ಎಂ.ಉದಯ್

By ವಸಂತ ಬಿ ಈಶ್ವರಗೆರೆ

ಮಂಡ್ಯ : ಇಡೀ ವಿಶ್ವದಲ್ಲಿಯೇ ನೂರಕ್ಕಿಂತ ಹೆಚ್ಚು ದೇಶಗಳಲ್ಲಿ ಒಬ್ಬ ಮಹಾನ್ ನಾಯಕನ ಜಯಂತಿಯನ್ನು ಆಚರಣೆ ಮಾಡುತ್ತಿದೆ ಎಂದರೇ ಅದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರದ್ದು ಎಂದು ಶಾಸಕ ಕೆ.ಎಂ.ಉದಯ್ ಬಣ್ಣಿಸಿದರು.

ಮದ್ದೂರು ತಾಲೂಕು ಆಡಳಿತ, ತಾಲೂಕು ಪಂಚಾಯತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಹಿಳಾ ಸರ್ಕಾರಿ ಕಾಲೇಜು ಆವರಣದಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ವಿಶ್ವದಲ್ಲಿಯೇ ನೂರಕ್ಕಿಂತ ಹೆಚ್ಚು ದೇಶಗಳು ಇಂದು ಒಬ್ಬ ಮಹಾನ್ ನಾಯಕನ ಜಯಂತಿಯನ್ನು ಆಚರಣೆ ಮಾಡುತ್ತಿದೆ. ಇದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ಪಡೆದ ಶಿಕ್ಷಣ ಮತ್ತು ಜ್ಞಾನವನ್ನು ಇಂದು ಜಗತ್ತು ಗೌರವಿಸುತ್ತಿದ್ದು, ಅವರು ಕೇವಲ ವ್ಯಕ್ತಿಯಲ್ಲ ಈ ದೇಶದ ಶಕ್ತಿ ಎಂದರು.

ದೇಶದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡುವ ಮೂಲಕ ಭಾರತವನ್ನು ಒಂದು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ರೂಪಿಸಿದ ಕೀರ್ತಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅಂಬೇಡ್ಕರ್ ಅವರು ಶೋಷಿತರ ಧ್ವನಿಯಾಗಿ, ಜ್ಞಾನದ ಸಂಕೇತವಾಗಿ ಬೆಳೆದು ಅವರು ನೀಡಿದ ಕೊಡುಗೆಗಳು ಇಂದಿಗೂ ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ರವರು ನೀಡಿದ ಅದ್ಭುತ ಸಂದೇಶಗಳು, ಇಂದಿಗೂ ಸಹ ಜನಜನಿತವಾಗಿದ್ದು, ಸಂದೇಶಗಳನ್ನು ಪಾಲಿಸುವ ಪ್ರತಿ ಪ್ರಜೆಯೂ ಜೀವನದಲ್ಲಿ ಎಂದೂ ಕುಗ್ಗಲಾರ. ಬಾಬಾ ಸಾಹೇಬರು ಕೇವಲ ಸಂವಿಧಾನ ರಚನೆಗೆ ಸೀಮಿತವಾಗಿರದೆ, ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಮೌಲ್ಯಗಳನ್ನು ಬಿತ್ತಿದ ಮಹಾನ್‌ ನಾಯಕರಾಗಿದ್ದರು. ಆದರೆ, ಇತ್ತೀಚೆಗೆ ಕೆಲವು ಸಂಘಟಕರು ಅವರ ವೈಯಕ್ತಿಕ ಕಾರ್ಯಗಳಿಗೆ ಪೋಟೋ, ಹೆಸರನ್ನು ಬಳಸಿಕೊಂಡು ಮೇಲ್ವರ್ಗದ ಜನರಿಗೆ ಧಮ್ಕಿ, ದೂರು, ನ್ಯಾಯ ಪಂಚಾಯ್ತಿ ಮಾಡುತ್ತಿರುವುದು ವಿಷಾದಕರ ಸಂಗತಿಯಾಗಿದೆ
ಎಂದು ಶಾಸಕ ಕೆ.ಎಂ.ಉದಯ್ ಬೇಸರ ವ್ಯಕ್ತಪಡಿಸಿದರು.

ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಶಿಕ್ಷಣವನ್ನು ಶಕ್ತಿಯ ಮೂಲವೆಂದು ಪರಿಗಣಿಸಿ, ಶಿಕ್ಷಣ ಪಡೆದುಕೊಳ್ಳಿ, ಸಂಘಟಿತರಾಗಿ ನಂತರ ಹೋರಾಡಿ ಎಂಬ ಸಂದೇಶವನ್ನು ನೀಡಿದ್ದಾರೆ.

ಅಂಬೇಡ್ಕರ್ ಅವರು ಎಂತಹ ಕಠಿಣವಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಂಘಟನಾತ್ಮಕ ಸಂಕಷ್ಟಗಳನ್ನು ದಾಟಿ, ಜೀವನದಲ್ಲಿ ಜಯ ಸಾಧಿಸಿದರು ಎಂಬದನ್ನು ನಾವು ಗಮನಿಸಿದಾಗ, ಮನುಷ್ಯನ ಯಶಸ್ವಿಗೆ ಅವರ ಜೀವನ ಸಾಧನೆಗಳೇ ಪ್ರೇರಕ ಶಕ್ತಿಗಳಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಎಸ್.ಸತೀಶ್ ಕುಮಾರ್ ಮುಖ್ಯ ಭಾಷಣ ಮಾಡಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರಸಭೆ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಶಾಸಕ ಕೆ.ಎಂ.ಉದಯ್ , ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ್ ತಾಲೂಕು ಪಂಚಾಯತಿ ಇಓ ರಾಮಲಿಂಗಯ್ಯ, ಸಮಾಜ ಕಲ್ಯಾಣಾಧಿಕಾರಿ ನಾಗರಾಜ್,
ಬಿಇಓ ಧನಂಜಯ, ಸಿಪಿಐ ನವೀನ್ ಕುಮಾರ್, ಸಂಘಟನೆಗಳ ಮುಖಂಡರಾದ ಚಿದಂಬರ ಮೂರ್ತಿ, ರಾಜೇಂದ್ರ, ಸಿದ್ದರಾಜು, ಮಾದೇಶ್, ಕುಮಾರ್, ಮರಿದೇವರು, ಮಹದೇವಯ್ಯ, ಮಹದೇವು ಸೇರಿದಂತೆ ಮತ್ತಿತರರು ಇದ್ದರು.

ವರದಿ : ಗಿರೀಶ್ ರಾಜ್, ಮಂಡ್ಯ

ನಿರುದ್ಯೋಗಿ ಯುವಕರು ಬೀದಿಗಿಳಿದು ಹೋರಾಡಿ ಹೆಚ್.ಡಿ.ಕುಮಾರಸ್ವಾಮಿ ಕರೆ

BIG BREAKING: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಆಯ್ಕೆ: ನಾಳೆ ಪ್ರಮಾಣ ವಚನ ಸ್ವೀಕಾರ | Samrat Choudhary

Share. Facebook Twitter LinkedIn WhatsApp Email

Related Posts

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

2 Mins Read

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

2 Mins Read

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

1 Min Read
Recent News

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ಬಾಲಿವುಡ್ ಖ್ಯಾತ ಚಲನಚಿತ್ರ ನಿರ್ಮಾಪಕ ಪಹ್ಲಾಜ್ ನಿಹಲಾನಿ ನಿಧನ | Pahlaj Nihalani passes away

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

State News
KARNATAKA

ಜೂ.6ರಂದು ಸಾಗರದಲ್ಲಿ ಯುವ ಪ್ರತಿಭೆಗಳ ‘ಮೂವಿಂಗ್ ಫೋಟೋ’ ಕಿರುಚಿತ್ರ ರಿಲೀಸ್: ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಸನ್ನ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಇಲ್ಲಿನ ಲಯನ್ಸ್ ಕ್ಲಬ್ ಸಾಗರ ಮತ್ತು ಪಿನಾಕಿ ಸ್ಟುಡಿಯೋಸ್ ಸಹಯೋಗದಲ್ಲಿ ಸಾಗರದ ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ‘ಮೂವಿಂಗ್…

GOOD NEWS : ಅಸಂಘಟಿತ ವಲಯದ ಕಾರ್ಮಿಕರಿಗೆ ಬಂಪರ್ ಗಿಫ್ಟ್ : ತಿಂಗಳಿಗೆ ಕೇವಲ ₹55 ಹೂಡಿಕೆ ಮಾಡಿ ₹3000 ಪಿಂಚಣಿ ಪಡೆಯಿರಿ!

BREAKING : ವಿಜಯಪುರದಲ್ಲಿ 6 ಜನರ ಭೀಕರ ಹತ್ಯಾಕಾಂಡ ಕೇಸ್ : ಪ್ರಮುಖ ಆರೋಪಿ ಸೇರಿ ಮತ್ತೆ 6 ಜನರು ಅರೆಸ್ಟ್!

BIG NEWS: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ : ಅರ್ಜಿ ಸಲ್ಲಿಸುವುದು ಹೇಗೆ? ಯಾವ ದಾಖಲೆಗಳು ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.