ಬಿಹಾರ್ : ಬಿಹಾರದ ನೂತನ ಸಿಎಂ ಆಗಿ ಸಾಮ್ರಾಟ್ ಚೌದರಿ ಆಯ್ಕೆಯಾಗಿದ್ದಾರೆ. ಬಿಹಾರ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಗಿ ಸಾಮ್ರಾಟ್ ಚೌದರಿ ಇದೀಗ ಆಯ್ಕೆ ಆಗಿದ್ದಾರೆ. ಬಿಹಾರದ ಮೊದಲ ಬಿಜೆಪಿ ಸಿಎಂ ಎಂಬ ಹೆಗ್ಗಳಿಕೆಗೆ ಸಾಮ್ರಾಟ್ ಚೌದರಿ ಪಾತ್ರರಾಗಿದ್ದಾರೆ. ಸದ್ಯ ಅವರು ಬಿಹಾರ ರಾಜ್ಯದ ಹಾಲಿ ಉಪ ಮುಖ್ಯಮಂತ್ರಿ ಆಗಿದ್ದಾರೆ.
ನಾಳೆ ಬಿಹಾರದ ನೂತನ ಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭ ಚೌದ್ರಿ ಬಿಹಾರದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದು ಅದರ ಬೆನ್ನಲ್ಲೇ ಬಿಹಾರದ ನೂತನ ಮುಖ್ಯಮಂತ್ರಿ ಯಾಗಿ ಬಿಜೆಪಿಯ ಸಾಮ್ರಾಟ್ ಚೌದರಿ ಆಯ್ಕೆಯಾಗಿದ್ದಾರೆ.
ಯಾರಿದು ಸಾಮ್ರಾಟ ಚೌದರಿ?
ಬಿಹಾರದಲ್ಲಿ ಬಿಜೆಪಿ ‘ಮೇಲ್ವರ್ಗ ಪರ’ ಎಂಬ ಆರೋಪಗಳನ್ನು ತೊಡೆದು ಹಾಕಲು ನೆರವಾಗುತ್ತಿರುವ ಒಬಿಸಿ ನಾಯಕ ಸಾಮ್ರಾಟ್ ಚೌಧರಿ, ಸುಮಾರು ಏಳು ವರ್ಷಗಳ ಹಿಂದೆ ಪಕ್ಷ ಸೇರ್ಪಡೆಯಾದ ಬಳಿಕ ತ್ವರಿತವಾಗಿ ಪ್ರಮುಖ ನಾಯಕರಾಗಿ ಬೆಳೆದವರು. ಸಾಮ್ರಾಟ್ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಭಾನುವಾರ ಬೆಳಿಗ್ಗೆ ನೇಮಕ ಮಾಡಲಾಗಿದೆ. ಅದೇ ವೇಳೆ ಉಪ ಮುಖ್ಯಮಂತ್ರಿ ಹುದ್ದೆಗೂ ಆಯ್ಕೆ ಮಾಡಲಾಗಿದೆ.
ಸಾಮ್ರಾಟ್ ಚೌಧರಿ ಅವರ ತಂದೆ ಶಕುನಿ ಚೌಧರಿ ಅವರು ಭಾರತೀಯ ಸೇನೆಯಲ್ಲಿ ಯೋಧರಾಗಿದ್ದು, ಬಳಿಕ ರಾಜಕೀಯಕ್ಕೆ ಸೇರಿದ್ದರು. ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದ ಅವರು, ಆಗ ಪ್ರಬಲ ಎದುರಾಳಿಗಳಾಗಿದ್ದ ಲಾಲು ಪ್ರಸಾದ್ ಅವರ ಆರ್‌ಜೆಡಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಗಳ ನಡುವೆ ಹಲವು ಬಾರಿ ‘ಜಂಪ್’ ಮಾಡಿದ್ದರು. ಏಳು ಬಾರಿ ಶಾಸಕ ಮತ್ತು ಸಂಸದರಾಗಿದ್ದರು. ಸಾಮ್ರಾಟ್ ಅವರ ತಾಯಿ ಪಾರ್ವತಿ ದೇವಿ ಕೂಡ ಶಾಸಕಿಯಾಗಿದ್ದರು.
ಕೊಯೆರಿ ಜಾತಿಗೆ ಸೇರಿದ ಸಾಮ್ರಾಟ್, ಉತ್ತಮ ವಾಗ್ಮಿ. ಬಿಜೆಪಿ ಸೇರ್ಪಡೆಯಾದ ಕೆಲವೇ ಸಮಯದಲ್ಲಿ ಬಿಹಾರ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡರು. 2020ರಲ್ಲಿ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಲಾಗಿತ್ತು. 2020ರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ- ಜೆಡಿಯು ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವ ಸ್ಥಾನ ಪಡೆದುಕೊಂಡಿದ್ದರು.
ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಬಿಜೆಪಿ ಮೈತ್ರಿ ಮುರಿದುಕೊಂಡು ಆರ್‌ಜೆಡಿ ಜತೆ ಸೇರಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಅವರನ್ನು ಟೀಕಿಸಿದ್ದ ಅವರು, ಮುಂಡಾಸು ಧರಿಸಲು ಆರಂಭಿಸಿದ್ದರು. ತಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುವವರೆಗೂ ಅದನ್ನು ಕಳಚುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.








