Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ, ಹಲವರನ್ನು ಪೊಲೀಸರು ವಶಕ್ಕೆ

14/04/2026 2:57 PM

ಮತ್ತೆ ಬಂದಿದೆ ಕಾಗ್ನಿಜೆಂಟ್‌ ‘ಟೆಕ್ನೋವರ್ಸ್ ಹ್ಯಾಕಥಾನ್ 2026’: 400ಕ್ಕೂ ಹೆಚ್ಚು ಕಾಲೇಜುಗಳ 20,000 ವಿದ್ಯಾರ್ಥಿಗಳು ಭಾಗಿ

14/04/2026 2:50 PM

SHOCKING: ಚಿಕ್ಕಮಗಳೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 10 ವರ್ಷದ ಬಾಲಕಿ ಸಾವು

14/04/2026 2:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮತ್ತೆ ಬಂದಿದೆ ಕಾಗ್ನಿಜೆಂಟ್‌ ‘ಟೆಕ್ನೋವರ್ಸ್ ಹ್ಯಾಕಥಾನ್ 2026’: 400ಕ್ಕೂ ಹೆಚ್ಚು ಕಾಲೇಜುಗಳ 20,000 ವಿದ್ಯಾರ್ಥಿಗಳು ಭಾಗಿ
KARNATAKA

ಮತ್ತೆ ಬಂದಿದೆ ಕಾಗ್ನಿಜೆಂಟ್‌ ‘ಟೆಕ್ನೋವರ್ಸ್ ಹ್ಯಾಕಥಾನ್ 2026’: 400ಕ್ಕೂ ಹೆಚ್ಚು ಕಾಲೇಜುಗಳ 20,000 ವಿದ್ಯಾರ್ಥಿಗಳು ಭಾಗಿ

By kannadanewsnow0914/04/2026 2:50 PM

ಬೆಂಗಳೂರು: ನೈಜ ಜಗತ್ತಿನ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು, ಪ್ರಮುಖ ಐಟಿ ಸಂಸ್ಥೆ ‘ಕಾಗ್ನಿಜೆಂಟ್‌’ ತನ್ನ ಪ್ರತಿಷ್ಠಿತ ‘ಟೆಕ್ನೋವರ್ಸ್ ಹ್ಯಾಕಥಾನ್ 2026’ಗೆ ಚಾಲನೆ ನೀಡಿದೆ.

ಈ ಹಿಂದೆ ಪ್ರಾದೇಶಿಕ ಮಟ್ಟಕ್ಕೆ ಸೀಮಿತವಾಗಿದ್ದ ಈ ಸ್ಪರ್ಧೆಯು, ತನ್ನ ಮೂರನೇ ಆವೃತ್ತಿಯಲ್ಲಿ ರಾಷ್ಟ್ರೀಯ ಮಟ್ಟಕ್ಕೇರಿದೆ. ಭಾರತದಾದ್ಯಂತ 400ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿಂದ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 20,000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಹ್ಯಾಕಥಾನ್‌ನಲ್ಲಿ ಪಾಲ್ಗೊಂಡು ತಮ್ಮ ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ.

ನೈಜ ಜಗತ್ತಿನ ಸಮಸ್ಯೆಗಳಿಗೆ ಎಐ ಪರಿಹಾರ

ಈ ಹ್ಯಾಕಥಾನ್ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಜ್ಞಾನವನ್ನು ನೈಜ ಜಗತ್ತಿನ ಅನ್ವಯಿಕಗಳಿಗೆ ಅಪ್ಲಿಕೇಷನ್‌ಗಳಿಗೆ ಬಳಸುವ ಅಪೂರ್ವ ಅವಕಾಶವನ್ನು ನೀಡುತ್ತದೆ. ಸ್ಪರ್ಧಿಗಳು ಕಾಗ್ನಿಜೆಂಟ್‌‌ನ ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸಿ, ಉದ್ಯಮಗಳು ಹೊಸತನವನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದನ್ನು ಕಲಿಯಲಿದ್ದಾರೆ.

ಬ್ಯಾಂಕಿಂಗ್, ವಿಮೆ, ಆರೋಗ್ಯ, ಜೀವ ವಿಜ್ಞಾನ, ಚಿಲ್ಲರೆ ವ್ಯಾಪಾರ (ರೀಟೇಲ್), ಉತ್ಪಾದನೆ, ಸಂವಹನ, ಮಾಧ್ಯಮ ಮತ್ತು ತಂತ್ರಜ್ಞಾನ ಹಾಗೂ ಇಂಧನ ಕ್ಷೇತ್ರಗಳ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ ಬಳಸಿ ಪರಿಹಾರ ರೂಪಿಸುವುದು ಈ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ.

ಕಾಗ್ನಿಜೆಂಟ್‌ ಇಂಡಿಯಾದ ಗ್ಲೋಬಲ್ ಆಪರೇಷನ್ಸ್ ಅಧ್ಯಕ್ಷ ಹಾಗೂ ಸಿಎಂಡಿ ರಾಜೇಶ್ ವಾರಿಯರ್ ಈ ಕುರಿತು ಮಾತನಾಡಿ, “ಐಟಿ ಉದ್ಯಮವು ಪ್ರಸ್ತುತ ಮಹತ್ವದ ಘಟ್ಟದಲ್ಲಿದೆ. ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ ಭವಿಷ್ಯದ ತಂತ್ರಜ್ಞಾನದ ಬದಲಾವಣೆಗಳನ್ನು ಮುನ್ನಡೆಸುವ ಮುಂದಿನ ಪೀಳಿಗೆಯ ಪ್ರತಿಭೆಗಳನ್ನು ರೂಪಿಸಲು ಕಾಗ್ನಿಜೆಂಟ್‌ ಬದ್ಧವಾಗಿದೆ. ವಿದ್ಯಾರ್ಥಿಗಳು ನೈಜ ಉದ್ಯಮದ ಸವಾಲುಗಳನ್ನು ಎದುರಿಸಲು ಮತ್ತು ಭವಿಷ್ಯದ ತಂತ್ರಜ್ಞಾನ ನಾಯಕರಾಗಿ ಬೆಳೆಯಲು ಟೆಕ್ನೋವರ್ಸ್ ಹ್ಯಾಕಥಾನ್ 2026 ಅತ್ಯುತ್ತಮ ವೇದಿಕೆಯಾಗಿದೆ” ಎಂದು ತಿಳಿಸಿದರು.

ತನ್ನ ಸೇರ್ಪಡೆ ಮತ್ತು ವೈವಿಧ್ಯತಾ ನೀತಿಯ ಭಾಗವಾಗಿ, ಕಾಗ್ನಿಜೆಂಟ್‌ ಈ ಹ್ಯಾಕಥಾನ್‌ನಲ್ಲಿ ಶೇ. 50ರಷ್ಟು ಮಹಿಳಾ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸಿದೆ. ಪ್ರತಿ ಕಾಲೇಜಿನಿಂದ ಎಷ್ಟು ತಂಡಗಳು ಬೇಕಾದರೂ ಭಾಗವಹಿಸಬಹುದು. ಆದರೆ, ನಾಲ್ಕು ಸದಸ್ಯರ ಪ್ರತಿಯೊಂದು ತಂಡದಲ್ಲಿ ಕನಿಷ್ಠ ಇಬ್ಬರು ಮಹಿಳಾ ವಿದ್ಯಾರ್ಥಿಗಳು ಇರುವುದು ಕಡ್ಡಾಯವಾಗಿದೆ.

ಮೇ ತಿಂಗಳಿನಲ್ಲಿ ಫಿನಾಲೆ

ಈ ಬೃಹತ್ ಹ್ಯಾಕಥಾನ್ ಪ್ರಕ್ರಿಯೆಗಳು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಪುಣೆಯಲ್ಲಿರುವ ಕಾಗ್ನಿಜೆಂಟ್‌ ಕ್ಯಾಂಪಸ್‌ನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಅಗ್ರ ಮೂರು ತಂಡಗಳನ್ನು ವಿಜೇತರೆಂದು ಘೋಷಿಸಿ ಸನ್ಮಾನಿಸಲಾಗುತ್ತದೆ.

2030ರೊಳಗೆ 20 ಲಕ್ಷ ಜನರಿಗೆ ಕೌಶಲ್ಯ ತರಬೇತಿ

ಜನರೇಟಿವ್ ಎಐ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಜನರಿಗೆ ಕೌಶಲ್ಯ ಒದಗಿಸುವ ಉದ್ದೇಶದಿಂದ ಕಾಗ್ನಿಜೆಂಟ್‌ 2023 ರಲ್ಲಿ ‘ಸಿನಾಪ್ಸ್’ ಎಂಬ ಉಪಕ್ರಮವನ್ನು ಆರಂಭಿಸಿತ್ತು. ವಿಶ್ವಾದ್ಯಂತ 10 ಲಕ್ಷ ಜನರಿಗೆ ತರಬೇತಿ ನೀಡುವ ಗುರಿಯನ್ನು 2026ರ ಗುಡುವಿಗೂ ಮುನ್ನವೇ ಸಾಧಿಸಿರುವ ಸಂಸ್ಥೆ, ಇದೀಗ 2030ರ ಅಂತ್ಯದ ವೇಳೆಗೆ ಒಟ್ಟು 20 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡುವ ಹೊಸ ಗುರಿಯನ್ನು ಹಾಕಿಕೊಂಡಿದೆ.

SHOCKING: ಚಿಕ್ಕಮಗಳೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 10 ವರ್ಷದ ಬಾಲಕಿ ಸಾವು

Share. Facebook Twitter LinkedIn WhatsApp Email

Related Posts

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ, ಹಲವರನ್ನು ಪೊಲೀಸರು ವಶಕ್ಕೆ

14/04/2026 2:57 PM1 Min Read

SHOCKING: ಚಿಕ್ಕಮಗಳೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 10 ವರ್ಷದ ಬಾಲಕಿ ಸಾವು

14/04/2026 2:44 PM2 Mins Read

IPL ಅಭಿಮಾನಿಗಳಿಗೆ ಗುಡ್ ನ್ಯೂಸ್: ಏ.15, 24ರಂದು ಮಧ್ಯರಾತ್ರಿ 2 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ

14/04/2026 2:26 PM1 Min Read
Recent News

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ, ಹಲವರನ್ನು ಪೊಲೀಸರು ವಶಕ್ಕೆ

14/04/2026 2:57 PM

ಮತ್ತೆ ಬಂದಿದೆ ಕಾಗ್ನಿಜೆಂಟ್‌ ‘ಟೆಕ್ನೋವರ್ಸ್ ಹ್ಯಾಕಥಾನ್ 2026’: 400ಕ್ಕೂ ಹೆಚ್ಚು ಕಾಲೇಜುಗಳ 20,000 ವಿದ್ಯಾರ್ಥಿಗಳು ಭಾಗಿ

14/04/2026 2:50 PM

SHOCKING: ಚಿಕ್ಕಮಗಳೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 10 ವರ್ಷದ ಬಾಲಕಿ ಸಾವು

14/04/2026 2:44 PM

SHOCKING: ಪಾಕಿಸ್ತಾನದಲ್ಲಿ ಸಿರಿಂಜ್ ಮರುಬಳಕೆಯಿಂದ 331 ಮಕ್ಕಳಿಗೆ ‘HIV ಪಾಸಿಟಿವ್’

14/04/2026 2:40 PM
State News
KARNATAKA

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ, ಹಲವರನ್ನು ಪೊಲೀಸರು ವಶಕ್ಕೆ

By kannadanewsnow0914/04/2026 2:57 PM KARNATAKA 1 Min Read

ಧಾರವಾಡ: ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಂಬೇಡ್ಕರ್ ಜಯಂತಿಯ ದಿನವಾದ ಇಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿದ ಉದ್ಯೋಗಾಕಾಂಕ್ಷಿಗಳನ್ನು ಪೊಲೀಸರು…

ಮತ್ತೆ ಬಂದಿದೆ ಕಾಗ್ನಿಜೆಂಟ್‌ ‘ಟೆಕ್ನೋವರ್ಸ್ ಹ್ಯಾಕಥಾನ್ 2026’: 400ಕ್ಕೂ ಹೆಚ್ಚು ಕಾಲೇಜುಗಳ 20,000 ವಿದ್ಯಾರ್ಥಿಗಳು ಭಾಗಿ

14/04/2026 2:50 PM

SHOCKING: ಚಿಕ್ಕಮಗಳೂರಲ್ಲಿ ಮನಕಲಕುವ ಘಟನೆ: ಆಟವಾಡುತ್ತಿದ್ದಾಗ ಜೋಕಾಲಿ ಸೀರೆ ಕುತ್ತಿಗೆಗೆ ಬಿಗಿದು 10 ವರ್ಷದ ಬಾಲಕಿ ಸಾವು

14/04/2026 2:44 PM

IPL ಅಭಿಮಾನಿಗಳಿಗೆ ಗುಡ್ ನ್ಯೂಸ್: ಏ.15, 24ರಂದು ಮಧ್ಯರಾತ್ರಿ 2 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ

14/04/2026 2:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.